Just In
Don't Miss!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಯುವರತ್ನ' ನೋಡಿ ಥ್ರಿಲ್ ಆದ ರಕ್ಷಿತ್ ಶೆಟ್ಟಿ ಹೇಳಿದ್ದು ಒಂದೇ ಮಾತು
ನಾಯಕ ನಟನೊಬ್ಬ ಮತ್ತೊಬ್ಬ ಹೀರೋನ ಸಿನಿಮಾ ನೋಡುವುದು, ನೋಡಿ ಮೆಚ್ಚಿಕೊಳ್ಳುವುದು ಅಪರೂಪ. ಆದರೆ ನಟ ರಕ್ಷಿತ್ ಶೆಟ್ಟಿ ಇದಕ್ಕೆ ಅಪವಾದ. ಒಳ್ಳೆಯ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದೇ ಇರುವುದಿಲ್ಲ ಅವರು.
ರಕ್ಷಿತ್ ಶೆಟ್ಟಿ ನಿನ್ನೆ ತಡರಾತ್ರಿ 'ಯುವರತ್ನ' ಸಿನಿಮಾ ನೋಡಿದ್ದಾರೆ. ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿರುವ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ತಡರಾತ್ರಿ ಸಿನಿಮಾ ನೋಡಿದ್ದಾರೆ ರಕ್ಷಿತ್ ಶೆಟ್ಟಿ, ಸಿನಿಮಾ ನೋಡುವ ಮುನ್ನಾ ಒಂದು ಟ್ವೀಟ್ ಮಾಡಿದ್ದರು, ಸಿನಿಮಾ ಮುಗಿದ ಮೇಲೆ ಮತ್ತೆ ಟ್ವೀಟ್ ಮಾಡಿದ್ದಾರೆ. 'ಅಪ್ಪು ಅವರದ್ದು ಒನ್ಮ್ಯಾನ್ ಶೋ, ಅಪ್ಪು ಡ್ಯಾನ್ಸ್ ಅದ್ಭುತ' ಎಂದು ಒಂದು ಸಾಲಿನ ಟ್ವೀಟ್ ಮಾಡಿ ಸಿನಿಮಾವನ್ನು ಅಪ್ಪು ಅಭಿನಯವನ್ನು ಹೊಗಳಿದ್ದಾರೆ ರಕ್ಷಿತ್ ಶೆಟ್ಟಿ. ಟ್ವೀಟ್ ಅನ್ನು ಪುನೀತ್ ರಾಜ್ಕುಮಾರ್, ಸಂತೋಶ್ ಆನಂದ್ ರಾಮ್, ಹೊಂಬಾಳೆ ಫಿಲಮ್ಸ್, ವಿಜಯ್ ಕಿರಗಂದೂರ್, ಕಾರ್ತಿಕ್ ಗೌಡಗೆ ಟ್ಯಾಗ್ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ, ಪುನೀತ್ ಅವರು ಒಳ್ಳೆಯ ಗೆಳೆಯರು. ಸರ್ಕಾರವು ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿದಾಗ 'ಯುವರತ್ನ' ಚಿತ್ರದ ಪರವಾಗಿ ಟ್ವೀಟ್ ಮಾಡಿದ್ದರು ನಟ ರಕ್ಷಿತ್ ಶೆಟ್ಟಿ. ಸರ್ಕಾರವು ನಿರ್ಬಂಧವನ್ನು ತೆಗೆದ ಬಳಿಕ ಪುನೀತ್ ಅವರು ತಮ್ಮ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ರಕ್ಷಿತ್ ಶೆಟ್ಟಿ ಅವರ ಹೆಸರು ಹೇಳುವುದನ್ನು ಮರೆಯಲಿಲ್ಲ ಪುನೀತ್.
ಇನ್ನು ನಟ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 999' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಜೊತೆಗೆ ಕೆಲವೇ ದಿನಗಳಲ್ಲಿ 'ಸಪ್ತ ಸಾಗರದಾಚೆ ಎಲ್ಲೊ' ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಆ ನಂತರ ರಕ್ಷಿತ್ ತಮ್ಮದೇ ನಿರ್ದೇಶನದ ಸಿನಿಮಾ ಆರಂಭಿಸಲಿದ್ದಾರೆ. ಅದರ ನಂತರ ಬರಲಿದೆ 'ಕಿರಿಕ್ ಪಾರ್ಟಿ 2'.