For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ-2'ಗೆ ರಕ್ಷಿತ್ ತಯಾರಿ: ಈ ಬಗ್ಗೆ ಸಿಂಪಲ್ ಸ್ಟಾರ್ ಹೇಳಿದ್ದೇನು?

  |

  ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಆದ ಸಿನಿಮಾಗಳಲ್ಲಿ ಕಿರಿಕ್ ಪಾರ್ಟಿ ಕೂಡ ಒಂದು. 2016 ಡಿಸೆಂಬರ್ 30ರಲ್ಲಿ ತೆರೆಗೆ ಬಂದ 'ಕಿರಿಕ್ ಪಾರ್ಟಿ' ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು. ಕಾಲೇಜು ಜೀವನದ ಕಥೆಯನ್ನು ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದರು ನಿರ್ದೇಶಕ ರಿಷಬ್ ಶೆಟ್ಟಿ.

  ನಟ ರಕ್ಷಿತ್ ಶೆಟ್ಟಿ ಸಿನಿ ಬದುಕಿಗೆ ಹೊಸ ಮೈಲುಗಲ್ಲು ನಿರ್ಮಿಸಿದ ಕಿರಿಕ್ ಪಾರ್ಟಿ ಈಗ ಮತ್ತೆ ಸದ್ದು ಮಾಡುತ್ತಿದೆ. ಸೂಪರ್ ಹಿಟ್ ಸಿನಿಮಾದ ಪಾರ್ಟ್-2ಗೆ ಎಲ್ಲಾ ತಯಾರಿ ನಡೆಯುತ್ತಿದೆಯಂತೆ. ನಟ ರಕ್ಷಿತ್ ಶೆಟ್ಟಿ ಈಗ ಕಿರಿಕ್ ಪಾರ್ಟಿ-2 ತಯಾರಿಸುವ ಪ್ಲಾನ್ ಮಾಡಿದ್ದಾರೆ.

  ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಬಗ್ಗೆ ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಬಗ್ಗೆ ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ

  ಹೌದು, ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಇದುವರೆಗೂ ನನಗೆ ಕಿರಿಕ್ ಪಾರ್ಟಿ-2 ಮಾಡುವ ಯಾವುದೆ ಪ್ಲಾನ್ ಇರಲಿಲ್ಲ. ಆದರೀಗ ಅದಕ್ಕೆ ಉತ್ತಮ ಕಥಾವಸ್ತು ಸಿಕ್ಕಿದೆ. ಕಿರಿಕ್ ಪಾರ್ಟ್ ಮತ್ತೆ ತೆರೆಮೇಲೆ ಬರುತ್ತಿದ್ದು ಉತ್ತಮ ಫೈಟ್ ಇರಲಿದೆ" ಎಂದು ಬರೆದುಕೊಂಡಿದ್ದಾರೆ.

  ರಕ್ಷಿತ್ ಟ್ವೀಟ್ ಮಾಡುತ್ತಿದಂತೆ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ರಕ್ಷಿತ್ ಮಾತಿಗೆ "ಸೂಪರ್ ಮಗ" ಎಂದು ಹೇಳಿದ್ದಾರೆ. ಇನ್ನು ಅನೇಕರು ಯಾರು ನಿರ್ದೇಶನ ಮಾಡುತ್ತಾರೆ? ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಇನ್ನು ಕೆಲವರು ದಯವಿಟ್ಟು ರಶ್ಮಿಕಾ ಮತ್ತು ಸಂಯುಕ್ತ ಅವರನ್ನು ಸೇರಿಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

  ಅಂದ್ಹಾಗೆ ರಕ್ಷಿತ್ ಕಿರಿಕ್ ಪಾರ್ಟಿ-2 ಮಾಡುವುದಾಗಿ ಹೇಳಿದ್ದಾರೆ. ಆದರೆ ಸಿನಿಮಾದಲ್ಲಿ ಯಾರೆಲ್ಲ ಇರುತ್ತಾರೆ. ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ. ಪಾರ್ಟಿ-2ಗೂ ರಿಷಬ್ ಆಕ್ಷನ್ ಕಟ್ ಹೇಳುತ್ತಾರಾ? ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಇರ್ತಾರಾ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

  English summary
  Kannada Actor Rakshith Shetty reaction about Kirik Party-2. He is preparing for Kirk Party-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X