»   » 'ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!

'ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!

Posted By:
Subscribe to Filmibeat Kannada

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, 'ಕಿರಿಕ್ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹೀಗಿರುವಾಗ, ಇವರಿಬ್ಬರ ಲವ್ ಕಹಾನಿ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಹೊರರಾಜ್ಯದಲ್ಲೂ ಸದ್ದು ಸುದ್ದಿ ಮಾಡಿದೆ.

ಇತ್ತೀಚೆಗೆ 64ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದಿಂದ ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂ ಇಂಡಸ್ಟ್ರಿಯವರು ಭಾಗವಹಿಸಿದ್ದರು. ಸ್ಯಾಂಡಲ್ ವುಡ್ ನಿಂದ ಹಲವು ತಾರೆಯರು ಹೋಗಿದ್ದರು. ಇವರಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಜೋಡಿ ಹೆಚ್ಚು ಗಮನ ಸೆಳೆದಿದೆ.

ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?

Rakshit Shetty Received FilmFare Award From His Fiancee Rashmika

ಹೌದು, ರಕ್ಷಿತ್ ಶೆಟ್ಟಿ ಅವರಿಗೆ 'ಕಿರಿಕ್ ಪಾರ್ಟಿ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು. ವಿಶೇಷ ಏನಪ್ಪಾ ಅಂದ್ರೆ, ಈ ಪ್ರಶಸ್ತಿಯನ್ನ ರಕ್ಷಿತ್ ಶೆಟ್ಟಿಯ ಭಾವಿ ಪತ್ನಿ ರಶ್ಮಿಕಾ ಮಂದಣ್ಣ ಅವರು ತಮ್ಮ ಕೈಯಿಂದ ನೀಡಿದ್ದು ಎಲ್ಲರ ಗಮನ ಸೆಳೆಯಿತು.

ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!

Rakshit Shetty Received FilmFare Award From His Fiancee Rashmika

ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ. ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ, ರಿಷಬ್ ಶೆಟ್ಟಿ ಅತ್ಯುತ್ತಮ ನಿರ್ದೇಶಕ, ಸಂಯುಕ್ತ ಹೆಗಡೆ ಅತ್ಯುತ್ತಮ ಪೋಷಕ ನಟಿ, ಹಾಗೂ 'ಬೆಳಗೆದ್ದು ಯಾರ ಮುಖವ ನಾನು ನೋಡಲಿ' ಹಾಡಿಗಾಗಿ ವಿಜಯ ಪ್ರಕಾಶ್ ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿಯನ್ನ ಗಳಿಸಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!

English summary
It Was a Special Moment for Rakshit Shetty When he Went on Stage to Collect his Critics Award for Best Actor for Kirik Party. His Lady love and Co-Star Rashmika Mandanna Presented Him the Award.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada