For Quick Alerts
  ALLOW NOTIFICATIONS  
  For Daily Alerts

  ಕೆಟಿಎಂ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ ರಕ್ಷಿತ್ ಶೆಟ್ಟಿ

  |

  'ದಿಯಾ' ಚಿತ್ರದ ಬಳಿಕ ಯಶಸ್ಸಿನ ಹಾದಿಯಲ್ಲಿ ಹೆಜ್ಜೆಯಿಟ್ಟಿರುವ ನಟ ದೀಕ್ಷಿತ್ ಶೆಟ್ಟಿ ಕೆಟಿಎಂ ಎಂಬ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದರು. ಇದೀಗ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

  ಕೆಟಿಎಂ ಚಿತ್ರದ ನಾಯಕ ದೀಕ್ಷಿತ್, ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರತಂಡವನ್ನು ಭೇಟಿ ಮಾಡಿದ ರಕ್ಷಿತ್ ಶೆಟ್ಟಿ, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ.

  'ಕೆಟಿಎಂ' ಬೈಕ್ ಏರಿ ಮದುವೆಯಾಗಲು ಹೊರಟಿದ್ದಾರೆ 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ!

  ಅರುಣ್ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಲವ್ ಸ್ಟೋರಿ ಕಥಾಹಂದರ ಹೊಂದಿದ್ದು, ಇದರಲ್ಲಿ ನಾಲ್ಕು ಛಾಯೆಗಳುಳ್ಳ ಪಾತ್ರದಲ್ಲಿ ದೀಕ್ಷಿತ್ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ದೀಕ್ಷಿತ್ ತಮ್ಮ ನಟನಾ ಕೌಶಲ ಪ್ರದರ್ಶಿಸಲು ಸಾಕಷ್ಟು ಅವಕಾಶ ಹೊಂದಿದ್ದಾರಂತೆ.

  ನಮ್ಮಿಂದ ಬೇರೆಯವರಿಗೆ ತೊಂದರೆ ಆಗೋದು ನನಗೆ ಇಷ್ಟ ಇಲ್ಲ ಎಂದ Sri Murali | Madagaja | Filmibeat Kannada

  ಇನ್ನು 'ದಿಯಾ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರವೀಣ್ ಆಕ್ಷನ್ ಕಟ್ ಹೇಳಲಿರುವ 'ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು' ಎಂಬ ಮತ್ತೊಂದು ಪ್ರಾಜೆಕ್ಟ್‌ಗೂ ದೀಕ್ಷಿತ್ ನಾಯಕರಾಗಿದ್ದಾರೆ. ಇದು ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಹೇಳುವ ಕಥೆ.

  English summary
  Kannada actor Rakshit Shetty Released Dia Fame Dikshit Shetty's KTM Movie First Look Poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X