For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ 'ರಾಬರ್ಟ್'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ಟಾಕಿ ಭಾಗ ಮುಕ್ತಾಯವಾಗಿದೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದೆ. ಹೊಸ ವರ್ಷದ ಪ್ರಯುಕ್ತ ದರ್ಶನ್ ವರ್ಷದ ಮೊದಲ ದಿನದಿಂದನೆ ಡಬ್ಬಿಂಗ್ ಪ್ರಾರಂಭಿಸಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

  ಇದರ ಜೊತೆಗೆ ರಾಬರ್ಟ್ ಚಿತ್ರದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ. ಅಂದರೆ ರಕ್ಷಿತ್ ಕೂಡ ರಾಬರ್ಟ್ ತಂಡ ಸೇರಿಕೊಂಡರಾ ಅಂತ ಅಂದುಕೊಳ್ಳಬೇಡಿ. ರಕ್ಷಿತ್ ರಾಬರ್ಟ್ ಚಿತ್ರದ ಫ್ಯಾನ್ ಮೇಡ್ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ.

  ಅಯ್ಯೋ..! 'ಶ್ರೀಮನ್ನಾರಾಯಣ' ಸಿನಿಮಾ ಕೂಡ ಪೈರಸಿ ಆಗೋಯ್ತುಅಯ್ಯೋ..! 'ಶ್ರೀಮನ್ನಾರಾಯಣ' ಸಿನಿಮಾ ಕೂಡ ಪೈರಸಿ ಆಗೋಯ್ತು

  ಹೌದು, ಡಿ ಬಾಸ್ ಅಭಿಮಾನಿಗಳು ರಾಬರ್ಟ್ ಚಿತ್ರದ ಪ್ರಮೋಷನ್ ಹಾಡೊಂದನ್ನು ಮಾಡಿದ್ದಾರೆ. ಆ ಹಾಡನ್ನು ರಕ್ಷಿತ್ ಶೆಟ್ಟಿ ಬಳಿ ರಿಲೀಸ್ ಮಾಡಿಸಿದ್ದಾರೆ. ರಕ್ಷಿತ್ ಕೂಡ ಹಾಡು ಕೇಳಿ ಇಂಪ್ರೆಸ್ ಆಗಿದ್ದಾರೆ. ಸುಂದರವಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ. ಅಂದ್ಹಾಗೆ ಈ ಹಾಡು ಸಂಕ್ರಾಂತಿ ಹಬ್ಬದ ದಿನ ಅಲ್ಲರ ಮುಂದೆ ಬರಲಿದೆ.

  ಸಾಂಗ್ ರಿಲೀಸ್ ಮಾಡಿ ರಕ್ಷಿತ್ ದರ್ಶನ್ ಸರ್ ಅಭಿಮಾನಿಗಳು ಒಂದು ಹಾಡನ್ನು ಮಾಡಿದ್ದಾರೆ. ಈ ಹಾಡು ತುಂಬ ಚೆನ್ನಾಗಿದೆ. ದರ್ಶನ್ ಸರ್ ಪರ್ಸನಾಲಿಟಿಗೆ ಸರಿಹೊಂದುವ ಹಾಡು ಇದಾಗಿದೆ. ತುಂಬ ಶ್ರಮ ವಹಿಸಿ ಮಾಡಿದ್ದಾರೆ"ಎಂದು ಹೇಳಿದ್ದಾರೆ.


  ರಕ್ಷಿತ್ ಸದ್ಯ ಅವನೇ ಶ್ರೀಮನ್ನಾರಾಯಣ ಸಕ್ಸಸ ಖುಷಿಯಲ್ಲಿ ಇದ್ದಾರೆ. ಉತ್ತಮ ಪ್ರದರ್ಶನ ಕಾಣುತ್ತಿರುವ ಶ್ರೀಮನ್ನಾರಾಯಣನಿಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇತ್ತೀಚಿಗೆ ತೆಲುಗಿನಲ್ಲೂ ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ತಮಿಳು, ಮಲಯಾಳಂ ಮತ್ತು ಹಿಂದಿ ವರ್ಷನ್ ಶ್ರೀಮನ್ನಾರಾಯಣ ರಿಲೀಸ್ ಆಗಬೇಕಿದೆ.
  English summary
  Kannada actor Darshan's fans are made Robert movie promotional song. this song released by Rakshith Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X