ಕೊನೆಗೂ 'ರಿಚರ್ಡ್ ಆಂಟನಿ' ಅಪ್‌ಡೇಟ್ ಕೊಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ!

ಓಟಿಟಿಯಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್ B ರಿಲೀಸ್ ಆಗಿ ಸದ್ದು ಮಾಡ್ತಿದೆ. ಕೆಲವರು ಸಿನಿಮಾ ನೋಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿದ ಈ ಸರಣಿ ಚಿತ್ರಕ್ಕೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ಓಟಿಟಿಯಲ್ಲಿ ಡಿಟೈಲ್ ಆಗಿ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿರುವುದು ಚಿತ್ರತಂಡಕ್ಕೂ ಖುಷಿ ತಂದಿದೆ.

'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ರಕ್ಷಿತ್ ಶೆಟ್ಟಿ ತಮ್ಮ ಕನಸಿನ 'ರಿಚರ್ಡ್ ಆಂಟನಿ' ಸಿನಿಮಾ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಸಿದ್ಧವಾಗಿದ್ದು ಚಿತ್ರಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. 'ಉಳಿದವರು ಕಂಡಂತೆ' ಪ್ರೀಕ್ವೆಲ್ ಆಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

Rakshit shetty replied for Richard Anthony update request

10 ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಉಳಿದವರು ಕಂಡಂತೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ಕೆಲವರಿಗೆ ಮಾತ್ರ ಸಿನಿಮಾ ಬಹಳ ಇಷ್ಟವಾಗಿತ್ತು. 10 ವರ್ಷ ಮುಂದೆ ಬರಬೇಕಿದ್ದ ಸಿನಿಮಾ ರಕ್ಷಿತ್ ಬಹಳ ಬೇಗ ಮಾಡಿಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೀಗ 10 ವರ್ಷಗಳ ಬಳಿಕವೇ ಸಿಂಪಲ್ ಸ್ಟಾರ್ ಪ್ರೀಕ್ವೆಲ್ ಮಾಡಲು ಮುಂದಾಗಿದ್ದಾರೆ.

ಹೊಂಬಾಳೆ ಸಂಸ್ಥೆ 'ರಿಚರ್ಡ್ ಆಂಟನಿ' ಚಿತ್ರದಿಂದ ಹೊರಬಂದಿದೆ, ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನುವ ಗುಸುಗುಸು ಕೂಡ ಶುರುವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ರಕ್ಷಿತ್ ಸಿನಿಮಾ ನಿರ್ಮಿಸುವ ಸಾಧ್ಯತೆ ಇದೆ ಎನ್ನುವವರು ಇದ್ದಾರೆ. ಆದರೆ ಇದೆಲ್ಲಾ ಸುಳ್ಳು ಎನ್ನಲಾಗ್ತಿದೆ.

ಇದೆಲ್ಲಾ ಬರೀ ಗಾಳಿಸುದ್ದಿ, ಶೀಘ್ರದಲ್ಲೇ 'ರಿಚರ್ಡ್ ಆಂಟನಿ' ಸಿನಿಮಾ ಸೆಟ್ಟೇರುತ್ತದೆ ಎಂದು ಹೊಂಬಾಳೆ ಸಂಸ್ಥೆ ಆಪ್ತರು ಹೇಳಿರುವುದಾಗಿ ವರದಿಯಾಗಿದೆ. ಇನ್ನು ಅಭಿಮಾನಿಗಳು ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಲೇ ಇದ್ದಾರೆ. ಇದೆಲ್ಲದರ ನಡುವೆ 'ರಿಚರ್ಡ್ ಆಂಟನಿ' ಅಪ್‌ಡೇಟ್ ಕೊಡಿ ರಕ್ಷಿತ್ ಶೆಟ್ಟಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಅಭಿಮಾನಿಯೊಬ್ಬರ ಮನವಿಗೆ ಸಿಂಪಲ್ ಸ್ಟಾರ್ ಪ್ರತಿಕ್ರಿಯಿಸಿದ್ದಾರೆ.

Rakshit shetty replied for Richard Anthony update request

ಟ್ವಿಟ್ಟರ್‌ನಲ್ಲಿ ಹೀಗೆ ಹೇಳಿದ ಪ್ರಶ್ನೆಗೆ ರಕ್ಷಿತ್ ಶೆಟ್ಟಿ "ಮಾರ್ಚ್ 28ಕ್ಕೆ ಉಳಿದವರು ಕಂಡಂತೆ ಚಿತ್ರಕ್ಕೆ 10 ವರ್ಷ ಆಗುತ್ತೆ" ಎಂದು ನಗುವಿನ ಎಮೋಜಿ ಹಾಕಿ ರಿಪ್ಲೇ ಮಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಮಾರ್ಚ್‌ 28ಕ್ಕೆ 'ರಿಚರ್ಡ್ ಆಂಟನಿ' ಸೆಟ್ಟೇರುವುದಾಗಿ ರಕ್ಷಿತ್ ಸುಳಿವು ಕೊಟ್ಟಿದ್ದಾರೆ ಎನ್ನುವುದು ಕೆಲವರ ಲೆಕ್ಕಾಚಾರ. ಹೊಂಬಾಳೆ ಆಪ್ತರು ಕೂಡ ಮಾರ್ಚ್ ಕೊನೆ ವಾರದಲ್ಲೇ ಸಿನಿಮಾ ಶುರುವಾಗುತ್ತದೆ ಎಂದಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಿದೆ.

10 ವರ್ಷಗಳ ಹಿಂದೆ ಬಂದಿದ್ದ 'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಚರ್ಡ್ ಆಂಟನಿ ಆಗಿ ವಿಭಿನ್ನ ಮ್ಯಾನರಿಸಂ, ಸ್ಟೈಲ್‌ನಿಂದ ರಕ್ಷಿತ್ ಶೆಟ್ಟಿ ಸಂಚಲನ ಸೃಷ್ಟಿಸಿದ್ದರು. ಬಳಿಕ ಈ ಸಿನಿಮಾ ತಮಿಳಿಗೂ ರೀಮೆಕ್ ಆಗಿತ್ತು. ಸಿನಿರಸಿಕರು ಇವತ್ತಿಗೂ ಆ ಪಾತ್ರವನ್ನು ಮರೆತ್ತಿಲ್ಲ. ಆ ಪಾತ್ರದ ಹಿನ್ನೆಲೆ ಏನು? ಎನ್ನುವುದನ್ನು ಒಂದು ಸಿನಿಮಾ ಮಾಡಿದರೆ ಮಜವಾಗಿರುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸಿಂಪಲ್ ಸ್ಟಾರ್ ಕೂಡ ಈ ಬಗ್ಗೆ ಉತ್ಸುಕರಾಗಿದ್ದರು.

2 ವರ್ಷಗಳ ಹಿಂದೆ ಹೊಂಬಾಳೆ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆ ಆಗಿತ್ತು. ಇನ್ನು 'ಸಪ್ತಸಾಗರದಾಚೆ' ಸರಣಿ ಚಿತ್ರೀಕರಣದ ಬಳಿಕ ರಕ್ಷಿತ್ ಶೆಟ್ಟಿ ಯುಎಸ್‌ಗೆ ತೆರಳಿದ್ದರು. 'ರಿಚರ್ಡ್ ಆಂಟನಿ' ಕಥೆ, ಚಿತ್ರಕಥೆ ಬರೆಯುವುದಕ್ಕೆ ಅಂತ್ಲೇ ಒಂದಷ್ಟು ದಿನ ಅಲ್ಲಿ ಉಳಿದುಕೊಂಡಿದ್ದರು. ಸ್ಕ್ರಿಪ್ಟ್ ಮಾಡಿಕೊಂಡು ಬಂದಿದ್ದರು. ಇದೀಗ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೀತಿದೆ.

More from Filmibeat

English summary
Rakshit shetty drops hints about his next Richard Anthony
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X