For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಬಗ್ಗೆ ಕಮೆಂಟ್: ಮನವಿ ಮಾಡಿದ ರಕ್ಷಿತ್ ಶೆಟ್ಟಿ

  |

  ರಕ್ಷಿತ್ ಶೆಟ್ಟಿ ಎಷ್ಟೇ ಬೇಡವೆಂದರೂ ಜನ ರಶ್ಮಿಕಾ ಮಂದಣ್ಣ ಕುರಿತ ಚರ್ಚೆಯನ್ನು, ಪ್ರಶ್ನೆಗಳನ್ನು ಅವರ ಮುಂದಿಡುತ್ತಾರೆ. ಈಗಾಗಲೇ ಹಲವು ಬಾರಿ ರಕ್ಷಿತ್ ಶೆಟ್ಟಿ ಈ ಬಗ್ಗೆ ಮಾತನಾಡಿ ಸ್ಪಷ್ಟೀಕರಣ ನೀಡಿ, 'ಮುಗಿದು ಹೋದ' ಕತೆ ಎಂದಿದ್ದಾರೆ. ಆದರೂ ಸಹ ರಶ್ಮಿಕಾ ಮಂದಣ್ಣ ಕುರಿತು ಪ್ರಶ್ನೆಗಳು ರಕ್ಷಿತ್ ಶೆಟ್ಟಿ ಎಡೆಗೆ ತೂರಿ ಬರುತ್ತಲೇ ಇವೆ.

  ಎಲ್ಲಾ ಮುಗಿದು ಹೋದ ಕಥೆ, ಇದನ್ನೆಲ್ಲಾ ನೋಡಿದ್ರೆ ನೋವಾಗುತ್ತೆ | Filmibeat Kannada

  ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾದ ಟೀಸರ್ ನಿನ್ನೆಯಷ್ಟೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿ ವೈರಲ್ ಆಗಿದೆ. ಇದೇ ವಿಷಯ ಮಾತನಾಡಲೆಂದು ರಕ್ಷಿತ್ ಶೆಟ್ಟಿ ಇಂದು ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಅಲ್ಲಿಯೂ ಹಳೆ ಕತೆ ಮತ್ತೆ ಪುನರಾವರ್ತನೆಗೊಂಡಿತು.

  ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಆರಂಭಿಸುತ್ತಿದ್ದಂತೆ ಕೆಲವರು ರಶ್ಮಿಕಾ ಮಂದಣ್ಣ ಬಗ್ಗೆ ಕಮೆಂಟ್ ಮಾಡಲು ಆರಂಭಿಸಿದರು. ಕೆಲವರು ಕೆಟ್ಟ ಕಮೆಂಟ್‌ಗಳನ್ನು ಸಹ ಮಾಡಿದರು. ಆದರೆ 'ಜಂಟಲ್‌ಮನ್' ರಕ್ಷಿತ್ ಶೆಟ್ಟಿ ಅವರಿಗೆ ಸೂಕ್ತವಾಗಿಯೇ ಬುದ್ಧಿಮಾತು ಹೇಳಿದರು.

  ಹಳೆಯದನ್ನು ಬಿಟ್ಟುಬಿಡೋಣ: ರಕ್ಷಿತ್ ಶೆಟ್ಟಿ

  ಹಳೆಯದನ್ನು ಬಿಟ್ಟುಬಿಡೋಣ: ರಕ್ಷಿತ್ ಶೆಟ್ಟಿ

  'ಇಲ್ಲಿ ಕೆಲವು ಕಮೆಂಟ್ಸ್ ಓದೋಕೆ ಬಹಳ ಬೇಜಾರಾಗುತ್ತೆ. ಆ ಕಮೆಂಟ್‌ಗಳು ನನ್ನ ಬಗ್ಗೆ ಅಲ್ಲ ಬೇರೊಬ್ಬರ ಬಗ್ಗೆ. ಆದರೆ ನನ್ನ ಮನವಿ ಏನೆಂದರೆ ಹಳೆಯದನ್ನು ಬಿಟ್ಟು ಬಿಡೋಣ. ಮುಗಿದಿದ್ದೆಲ್ಲ ಮುಗಿದುಹೋಯಿತು, ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ' ಎಂದರು.

  ಮೊದಲು ಮಾವನರಾಗೋಣ: ರಕ್ಷಿತ್ ಶೆಟ್ಟಿ

  ಮೊದಲು ಮಾವನರಾಗೋಣ: ರಕ್ಷಿತ್ ಶೆಟ್ಟಿ

  'ಯಾವುದೇ ವ್ಯಕ್ತಿಗೆ ಅಗೌರವ ಮಾಡುವುದು ಬೇಡ. ನಾವು ನಮ್ಮ ಬಗ್ಗೆಯೇ ಅಸಹ್ಯ ಪಟ್ಟುಕೊಳ್ಳುವಂಥಹಾ ಕಮೆಂಟ್ ಅನ್ನು ಬೇರೆಯವರ ಬಗ್ಗೆ ಸಹ ಮಾಡಬಾರದು. ಎಲ್ಲರ ಬಳಿ ಮನವಿ ಮಾಡಿಕೊಳ್ಳುವುದೇನೆಂದರೆ ಮೊದಲು ಮಾನವರಾಗೋಣ' ಎಂದರು ರಕ್ಷಿತ್ ಶೆಟ್ಟಿ.

  ಎಲ್ಲರಿಗೂ ಅವರದ್ದೇ ಆದ ಜೀವನ ಇದೆ: ರಕ್ಷಿತ್ ಶೆಟ್ಟಿ

  ಎಲ್ಲರಿಗೂ ಅವರದ್ದೇ ಆದ ಜೀವನ ಇದೆ: ರಕ್ಷಿತ್ ಶೆಟ್ಟಿ

  'ಎಲ್ಲರಿಗೂ ಗೌರವ ಕೊಡೋಣ. ಎಲ್ಲರಿಗೂ ಅವರದ್ದೇ ಆದ ಜೀವನ ಇದೆ. ಇಲ್ಲಿ ಕಮೆಂಟ್ ಸೆಕ್ಷನ್ ಅಲ್ಲಿ ನಾನು ಒಳ್ಳೆಯ ಕಮೆಂಟ್ಸ್ ನೋಡಲು ಇಷ್ಟಪಡುತ್ತೀನಿ. ನಮ್ಮ ಸಿನಿಮಾ ಬಗ್ಗೆ ಕಮೆಂಟ್ಸ್ ನೋಡಲು ಇಷ್ಟಪಡುತ್ತೀನಿ' ಎಂದರು ರಕ್ಷಿತ್ ಶೆಟ್ಟಿ. ರಶ್ಮಿಕಾ ಬಗ್ಗೆ ಮಾಡಿದ್ದ ಕೆಲವು ಕಮೆಂಟ್‌ಗಳನ್ನು ಡಿಲೀಟ್ ಸಹ ಮಾಡಿದ್ದಾರೆ ರಕ್ಷಿತ್ ಶೆಟ್ಟಿ.

  ಮದುವೆ ಆಗಲು ನಿಶ್ಚಯಿಸಿದ್ದ ರಶ್ಮಿಕಾ-ರಕ್ಷಿತ್ ಶೆಟ್ಟಿ

  ಮದುವೆ ಆಗಲು ನಿಶ್ಚಯಿಸಿದ್ದ ರಶ್ಮಿಕಾ-ರಕ್ಷಿತ್ ಶೆಟ್ಟಿ

  ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಆ ನಂತರ ಇಬ್ಬರೂ ಮದುವೆಯಾಗುವುದಾಗಿ ನಿಶ್ಚಯಿಸಿ ಎಂಗೇಜ್‌ಮೆಂಟ್ ಸಹ ಮಾಡಿಕೊಂಡರು. ಆದರೆ ನಟನಾ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ನಂತರ ರಶ್ಮಿಕಾ ಮಂದಣ್ಣ ಮದುವೆ ಮುರಿದುಕೊಂಡರು. ಈ ಬಗ್ಗೆ ರಕ್ಷಿತ್ ಶೆಟ್ಟಿಗೆ ಸದಾ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಆದರೆ ಪ್ರತಿಬಾರಿಯೂ ರಕ್ಷಿತ್ ಶೆಟ್ಟಿ 'ಜಂಟಲ್‌ಮನ್' ಮಾದರಿಯಲ್ಲಿಯೇ ಉತ್ತರಿಸಿದ್ದಾರೆ. ರಶ್ಮಿಕಾ ಮಂದಣ್ಣ ನಿರ್ಣಯಕ್ಕೆ ಗೌರವ ಕೊಡುವುದಾಗಿ ಹೇಳಿದ್ದಾರೆ

  English summary
  Some people did hate comments about Rashmika Mandanna. Rakshit Shetty request not to do so.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X