For Quick Alerts
  ALLOW NOTIFICATIONS  
  For Daily Alerts

  '777 ಚಾರ್ಲಿ' ಟೀಸರ್ ಬಿಡುಗಡೆ: ಧರ್ಮ-ಚಾರ್ಲಿಯ ಪ್ರೀತಿ ಪಯಣ

  |

  ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಬಹುನಿರೀಕ್ಷಿತ '777 ಚಾರ್ಲಿ' ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಟೀಸರ್‌ ತುಂಬಾ ಚಾರ್ಲಿಯ ಮುದ್ದು ಮುಖವೇ ತುಂಬಿಕೊಂಡಿದೆ.

  ಮುದ್ದಾದ ನಾಯಿ ಹಾಗೂ ನಾಯಕನ ಸಾಹಸಮಯ, ಭಾವುಕ, ಪ್ರೀತಿಯ ಪಯಣದ ಕತೆಯನ್ನು '777 ಚಾರ್ಲಿ' ಹೊಂದಿದೆ ಎಂಬುದು ಪೋಸ್ಟರ್‌ಗಳಿಂದ ಈಗಾಗಲೇ ಗೊತ್ತಾಗಿದೆ. ಇಂದು ಬಿಡುಗಡೆ ಆಗಿರುವ ಟೀಸರ್‌ನಲ್ಲಿ ರಕ್ಷಿತ್ ಶೆಟ್ಟಿಯ ಬದಲಿಗೆ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರ ನಾಯಿಯ ಮೇಲೆ 'ಫೋಕಸ್' ಮಾಡಲಾಗಿದೆ.

  ಸಿನಿಮಾದಲ್ಲಿ ನಾಯಿಯ ಹೆಸರು 'ಚಾರ್ಲಿ' ಹಾಗೂ ರಕ್ಷಿತ್ ಶೆಟ್ಟಿ ಹೆಸರು 'ಧರ್ಮ'. ಇಂದು ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಚಾರ್ಲಿಯ ಪಯಣವನ್ನು ತೋರಿಸಲಾಗಿದೆ. ಚಾರ್ಲಿಯ ತುಂಟಾಟ, ಹೋರಾಟ, ಕಷ್ಟ ಇತರೆ ವಿಷಯಗಳ ಪರಿಚಯ ಆಗುತ್ತದೆ. ನಾಯಿ ಚಾರ್ಲಿ ಅದೆಷ್ಟು ಮುದ್ದಾಗಿದೆಯೆಂದರೆ ಟೀಸರ್ ಯಾಕೆ ಬೇಗ ಮುಗಿದು ಹೋಯಿತು ಎನಿಸುತ್ತದೆ.

  ಟೀಸರ್‌ನ ಕೊನೆಯಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ ಆದರೆ ಟೀಸರ್‌ನಲ್ಲಿ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿಲ್ಲ. ಆದರೆ ಚಾರ್ಲಿ ಎಷ್ಟೆಲ್ಲ ಕಷ್ಟಗಳನ್ನು ಎದುರಿಸಿ ಧರ್ಮನನ್ನು ಭೇಟಿಯಾಗುತ್ತದೆ ಎಂಬುದರ ಝಲಕ್‌ ಅನ್ನು ತೋರಿಸಲಾಗಿದೆ.

  '777 ಚಾರ್ಲಿ' ಸಿನಿಮಾದ ಟೀಸರ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ನಿವಿನ್ ಪೌಲಿ, ಸೇರಿ ಎಂಟು ಸ್ಟಾರ್ ನಟ-ನಟಿಯರು ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ತಮಿಳು ಟೀಸರ್ ಅನ್ನು ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ತೆಲುಗು ಟೀಸರ್ ಅನ್ನು ನಟ ನಾನಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

  Cinema ಕಾರ್ಮಿಕರ ಸಂಕಷ್ಟ ಪರಿಹಾರಕ್ಕೆ 10 ಲಕ್ಷ ರೂ ಪರಿಹಾರ ಘೋಷಿಸಿದ Puneet Rajkumar | Filmibeat Kannada

  '777 ಚಾರ್ಲಿ' ಸಿನಿಮಾವನ್ನು ಕಿರಣ್‌ರಾಜ್ ಕೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

  English summary
  Rakshit Shetty starer 777 Charlie movie teaser released today in five languages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X