For Quick Alerts
  ALLOW NOTIFICATIONS  
  For Daily Alerts

  'ಚಾರ್ಲಿ' ಜೊತೆ ಕೊಡೈಕೆನಾಲ್ ಗೆ ಹೊರಟ ನಟ ರಕ್ಷಿತ್ ಶೆಟ್ಟಿ

  |

  ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚಿಗೆ ಗೋವಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಸಿದ್ದರು. ಇದೀಗ ಕೊಡೈಕೆನಾಲ್ ಕಡೆ ಪಯಣ ಬೆಳೆಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಕ್ಷಿತ್ 'ರಿಚ್ಚಿ'ಗಾಗಿ ಗೋವಾದ ಕಡಲ ತೀರಕ್ಕೆ ಹೋಗಿದ್ದರು. ಇದೀಗ ಚಾರ್ಲಿಗಾಗಿ ಕೊಡೈಕೆನಾಲ್ ಗೆ ಹೊರಟಿದ್ದಾರೆ.

  ಹೌದು ರಕ್ಷಿತ್ ಶೆಟ್ಟಿ ಸದ್ಯ 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಿಸಿರುವ ಸಿನಿಮಾತಂಡ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ. ಸುಮಾರು ಒಂದು ವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾತಂಡ ಈಗ ಕೊಡೈಕೆನಾಲ್ ಕಡೆ ಹೊರಟಿದೆ.

  'ರಿಚ್ಚಿ'ಗಾಗಿ ಗೋವಾ ಸೇರಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

  777ಚಾರ್ಲಿ ಸಿನಿಮಾ ಮುಂದಿನ ಹಂತದ ಚಿತ್ರೀಕರಣ ಕೊಡೈಕೆನಾಲ್ ನಲ್ಲಿ ನಡೆಯಲಿದೆ. ಈ ಬಗ್ಗೆ ನಿರ್ದೇಶಕ ಕಿರಣ್ ಕೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 777ಚಾರ್ಲಿ ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಶೂಟಿಂಗ್ ಮುಗಿಸಲಿದೆ.

  ನಮ್ಮ ಜನ ಏನು ಅಂತ ಅವತ್ತು ಪ್ರೂವ್ ಮಾಡಿದ್ರು | Filmibeat Kannada

  ಅಂದ್ಹಾಗೆ '777ಚಾರ್ಲಿ' ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾದ್ಯತೆ ಇದೆ. ನಟ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ 777ಚಾರ್ಲಿ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾದ ಜೊತೆಗೆ 'ಸಪ್ತ ಸಾಗರದಾಚೆ' ಮತ್ತು 'ಪುಣ್ಯಕೋಟಿ' ಸಿನಿಮಾ ರಕ್ಷಿತ್ ಬಳಿ ಇದೆ. '777 ಚಾರ್ಲಿ' ಬಳಿಕ ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.

  English summary
  Rakshit Shetty's 777Charlie Team move to Kodaikanal for the next schedule of shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X