For Quick Alerts
  ALLOW NOTIFICATIONS  
  For Daily Alerts

  ಹೊಂಬಾಳೆ ಜೊತೆ ಸಿನಿಮಾ: ಕತೆಯ ಎಳೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

  |

  ನಟ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾವನ್ನು ಪ್ರತಿಷ್ಠಿತ ಹೊಂಬಾಳೆ ಫಿಲಮ್ಸ್‌ ನಿರ್ಮಾಣ ಮಾಡಲಿದ್ದು, ನಿನ್ನೆ (ಜುಲೈ 11)ರಂದು ಸಿನಿಮಾದ ಘೋಷಣೆ ಮಾಡಲಾಗಿದೆ. ಸಿನಿಮಾಕ್ಕೆ 'ರಿಚರ್ಡ್ ಆಂಟನಿ' ಎಂದು ಹೆಸರಿಡಲಾಗಿದೆ.

  ಪಬ್ಲಿಕ್ ಟಿವಿ ತೇಜೋವಧೆ ಪ್ರಕರಣದ ಬಗ್ಗೆ ಮಾತನಾಡಲೆಂದು ನಿನ್ನೆ ಸುದ್ದಿಗೋಷ್ಠಿ ಕರೆದಿದ್ದ ರಕ್ಷಿತ್ ಶೆಟ್ಟಿ ತಮ್ಮ ಹೊಸ ಸಿನಿಮಾ 'ರಿಚರ್ಡ್ ಆಂಟನಿ' ಬಗ್ಗೆ ಮಾತನಾಡಿದ್ದು, ಕತೆ ಎಳೆ ಬಿಟ್ಟುಕೊಟ್ಟಿದ್ದಾರೆ.

  'ರಿಚರ್ಡ್ ಆಂಟನಿ' ಸಿನಿಮಾವು ರಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದ 'ಉಳಿದವರು ಕಂಡಂತೆ' ಸಿನಿಮಾದ ರಿಚ್ಚಿ ಪಾತ್ರ ಆಧರಿಸಿದ ಸಿನಿಮಾ. ಆ ಸಿನಿಮಾದಲ್ಲಿನ ಇತರೆ ಕೆಲವು ಮುಖ್ಯ ಪಾತ್ರಗಳಲ್ಲಿ ರಿಚ್ಚಿ ಪಾತ್ರ ಒಂದಾಗಿತ್ತು. ಆದರೆ ಇಲ್ಲಿ ರಿಚ್ಚಿ ಮಾತ್ರವೇ ಮುಖ್ಯವಾಗಿರಲಿದೆ.

  ರಕ್ಷಿತ್ ಶೆಟ್ಟಿ ಹೇಳಿರುವಂತೆ, 'ಉಳಿದವರು ಕಂಡಂತೆ' ಹಾಗೂ 'ರಿಚರ್ಡ್ ರಿಚರ್ಡ್ ಆಂಟನಿ' ಸಿನಿಮಾಕ್ಕೂ ಲಿಂಕ್ ಇರಲಿದೆ. ಉಳಿದವರು ಕಂಡಂತೆ ಸಿನಿಮಾದಲ್ಲಿ ರಿಚ್ಚಿ ಸಣ್ಣವನಿದ್ದಾಗ ಜೈಲಿಗೆ (ರಿಮ್ಯಾಂಡ್ ಹೋಮ್)ಗೆ ಹೋಗುತ್ತಾನೆ 'ರಿಚರ್ಡ್ ಆಂಟನಿ' ಕತೆ ಅಲ್ಲಿಂದ ಆರಂಭವಾಗಿ, 'ಉಳಿದವರು ಕಂಡಂತೆ' ಸಿನಿಮಾಕ್ಕೆ ಬಂದು ನಿಲ್ಲುತ್ತದೆ. ಮತ್ತೆ 'ಉಳಿದವರು ಕಂಡಂತೆ' ಕತೆಯ ನಂತರ ರಿಚ್ಚಿ ಏನಾದ ಎಂಬುದು ಸಿನಿಮಾದಲ್ಲಿ ಇರಲಿದೆ ಎಂದಿದ್ದಾರೆ.

  'ರಿಚರ್ಡ್ ಆಂಟನಿ' ಸಿನಿಮಾದ ಮೂಲಕ ಉತ್ತರ

  'ರಿಚರ್ಡ್ ಆಂಟನಿ' ಸಿನಿಮಾದ ಮೂಲಕ ಉತ್ತರ

  'ಉಳಿದವರು ಕಂಡಂತೆ' ಸಿನಿಮಾದಲ್ಲಿ ಉಳಿದಕೊಂಡು ಬಿಟ್ಟಿರುವ ಪ್ರಶ್ನೆಗಳಿಗೆ ನಾನು 'ರಿಚರ್ಡ್ ಆಂಟನಿ' ಸಿನಿಮಾದ ಮೂಲಕ ಉತ್ತರ ನೀಡಲಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಅವರದ್ದೇ ನಿರ್ದೇಶನದ 'ಉಳಿದವರು ಕಂಡಂತೆ' ಭಿನ್ನವಾದ ಸಿನಿಮಾ ಆಗಿದ್ದು, ಆ ಸಿನಿಮಾದಲ್ಲಿ ಪ್ರೇಕ್ಷಕರಲ್ಲಿ ಕೆಲವು ಪ್ರಶ್ನೆಗಳು ಉಳಿದು ಬಿಟ್ಟಿದ್ದವು.

  'ಉಳಿದವರು ಕಂಡಂತೆ' ಸಿನಿಮಾದೊಟ್ಟಿಗೆ ಲಿಂಕ್

  'ಉಳಿದವರು ಕಂಡಂತೆ' ಸಿನಿಮಾದೊಟ್ಟಿಗೆ ಲಿಂಕ್

  'ಉಳಿದವರು ಕಂಡಂತೆ' ಸಿನಿಮಾಕ್ಕೆ ಮುನ್ನ ರಿಚ್ಚಿ ಏನಾಗಿದ್ದ? 'ಉಳಿದವರು ಕಂಡಂತೆ' ಸಿನಿಮಾದ ಬಳಿಕ ರಿಚ್ಚಿ ಏನಾದ ಎಂಬುದು 'ರಿಚರ್ಡ್ ಆಂಟನಿ' ಸಿನಿಮಾದ ಕತೆ ಆಗಿರಲಿದೆ. ಈ ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನು ರಕ್ಷಿತ್ ಶೆಟ್ಟಿ ಬರೆದಿದ್ದು ಅವರೇ ನಿರ್ದೇಶನ ಮಾಡಲಿದ್ದಾರೆ. 'ಉಳಿದವರು ಕಂಡತೆ' ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ ಸಿನಿಮಾ ಇದು.

  ಕುತೂಹಲ ಭರಿತ ಟೀಸರ್

  ಕುತೂಹಲ ಭರಿತ ಟೀಸರ್

  'ರಿಚರ್ಡ್ ಆಂಟನಿ' ಸಿನಿಮಾದ ಕುರಿತು 'ಟೀಸರ್' ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಟೀಸರ್ ಬಹಳ ಕುತೂಹಲಕಾರಿಯಾಗಿದೆ. 'ಉಳಿದವರು ಕಂಡಂತೆ' ಸಿನಿಮಾದ ಸಂಗೀತದ ಹಿನ್ನೆ ಹಾಗೂ ಸಮುದ್ರದ ಹಿನ್ನೆಲೆಯಲ್ಲಿನ ಟ್ರೇಲರ್ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. 'ಉಳಿದವರು ಕಂಡಂತೆ' ಸಿನಿಮಾದಲ್ಲಿ ಸತ್ತಿದ್ದ ರಿಚ್ಚಿ ಹೇಗೆ ಬದುಕಿ ಬರಲಿದ್ದಾನೆ ಎಂಬ ಕುತೂಹಲವೂ ಇದೆ.

  ಪಬ್ಲಿಕ್ ಟಿವಿ ಗೆ ಹೇಳಿದಂತೆ ಮಾಡಿ ತೋರಿಸಿದ ರಕ್ಷಿತ್! | Filmibeat Kannada
  ರಕ್ಷಿತ್ ಶೆಟ್ಟಿ ಕೈಲಿರುವ ಸಿನಿಮಾಗಳು

  ರಕ್ಷಿತ್ ಶೆಟ್ಟಿ ಕೈಲಿರುವ ಸಿನಿಮಾಗಳು

  ರಕ್ಷಿತ್ ಶೆಟ್ಟಿ ನಟನೆಯ 'ಚಾರ್ಲಿ' ಸಿನಿಮಾ ಬಿಡಗುಡೆಗೆ ತಯಾರಾಗಿದೆ. 'ಸಪ್ತ ಸಾಗದಾಚೆ ಎಲ್ಲೊ' ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ. ಅದರ ಬಳಿಕ 'ಕಿರಿಕ್ ಪಾರ್ಟಿ 2', ಹಾಗೂ 'ರಿಚರ್ಡ್ ಆಂಟನಿ' ಸಿನಿಮಾ ಪ್ರಾರಂಭವಾಗಲಿದೆ. ಆ ನಂತರ ತಮ್ಮದೇ ನಿರ್ದೇಶನದ 'ಪುಣ್ಯಕೋಟಿ' ಸಿನಿಮಾವನ್ನು ರಕ್ಷಿತ್ ಶೆಟ್ಟಿ ಮಾಡಲಿದ್ದಾರೆ.

  English summary
  Rakshit Shetty reveled his new movie 'Richard Anthony movie's story line. He said Richard Anthony is story of 'Ulidavaru Kandanthe' character Richi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X