ಮಲಯಾಳಂಗೆ ರಿಮೇಕ್ ಆಗಲಿದೆ ರಕ್ಷಿತ್ ಶೆಟ್ಟಿ ಸಿನಿಮಾ

ಕಳೆದ ಮೇ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದ ಸಕುಟುಂಬ ಸಮೇತ ಚಿತ್ರ ಇತ್ತೀಚೆಗಷ್ಟೇ ವೂಟ್ ಸೆಲೆಕ್ಟ್ ಒಟಿಟಿಯಲ್ಲೂ ಬಿಡುಗಡೆಯಾಗಿ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ನಟ ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದ ರಾಹುಲ್ ಪಿಕೆ ಅವರ ನಿರ್ದೇಶನವಿತ್ತು. ಭರತ್ ಜಿ ಬಿ ಹಾಗೂ ಸಿರಿ ರವಿಕುಮಾರ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಿಡಲ್ ಕ್ಲಾಸ್ ಹುಡುಗ ಸೂರಿ ಪಾತ್ರದಲ್ಲಿ ನಾಯಕ ಭರತ್ ಜಿ ಬಿ ಹಾಗೂ ಶ್ರೀಮಂತ ಕುಟುಂಬದ ಹುಡುಗಿ ಶ್ರಾದ್ಧ ಪಾತ್ರದಲ್ಲಿ ಸಿರಿ ರವಿಕುಮಾರ್ ಈ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಮಿಡಲ್ ಕ್ಲಾಸ್ ಮತ್ತು ಶ್ರೀಮಂತ ಕುಟುಂಬಗಳ ನಡುವಿನ ಮದುವೆ ಮ್ಯಾಟ್ರಿಮೊನಿ ಅಪ್ಲಿಕೇಷನ್ ಮೂಲಕ ಆಯೋಜನೆಯಾದರೆ ಎರಡೂ ಕುಟುಂಬಗಳ ನಡುವೆ ಏನೆಲ್ಲಾ ನಡೆಯುತ್ತವೆ ಹಾಗೂ ಮದುವೆಯಾಗಲು ಮುಂದಾಗುವ ಯುವಕ ಮತ್ತು ಯುವತಿ ನಡುವೆ ಯಾವ ರೀತಿಯ ಆಲೋಚನೆಗಳು ಬರಲಿವೆ ಎಂಬುದರ ಕುರಿತು ಚಿತ್ರಕಥೆಯನ್ನು ಹೆಣೆಯಲಾಗಿದೆ.

Rakshit Shettys Sakutumba Sametha Kannada Movie to be remade in Malayalam

ಚಿತ್ರದ ಬಹುತೇಕ ಭಾಗ ಮನೆಯೊಂದರಲ್ಲಿಯೇ ನಡೆಯಲಿದ್ದು, ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಲ್ಲ 'ಫೀಲ್ ಗುಡ್' ಕಾಮಿಡಿ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಇದಾಗಿದೆ. ಚಿತ್ರವನ್ನು ವೀಕ್ಷಿಸಿದ ಹಲವು ಸಿನಿಪ್ರೇಮಿಗಳು ಒಂದೊಳ್ಳೆ ಮಲಯಾಳಂ ಚಿತ್ರ ನೋಡಿದ ಫೀಲ್ ಸಿಕ್ಕಿತು ಎಂಬ ವಿಮರ್ಶೆಯನ್ನು ತಿಳಿಸಿದ್ದರು. ಹೀಗೆ ಮಲಯಾಳಂ ಫ್ಲೇವರ್ ಹೊಂದಿದ್ದ ಈ ಚಿತ್ರ ಇದೀಗ ಮಲಯಾಳಂಗೆ ರಿಮೇಕ್ ಆಗುತ್ತಿದೆ.

ಹೌದು, ಕಬಿನಿ ಫಿಲ್ಮ್ಸ್ ಸಂಸ್ಥೆಯ ವಿನೋದ್ ದಿವಾಕರ್ ಸಕುಟುಂಬ ಸಮೇತ ಚಿತ್ರದ ಮಲಯಾಳಂ ರೀಮೇಕ್ ಹಕ್ಕನ್ನು ಖರೀದಿಸಿರುವ ವಿಷಯವನ್ನು ಸ್ವತಃ ಚಿತ್ರದ ನಿರ್ದೇಶಕ ರಾಹುಲ್ ಪಿಕೆ ಹಂಚಿಕೊಂಡಿದ್ದಾರೆ. ಸಕುಟುಂಬ ಸಮೇತ ಚಿತ್ರದ ಮಲಯಾಳಂ ರೀಮೇಕ್ ಹಕ್ಕನ್ನು ಖರೀದಿಸಿರುವ ಈ ಕಬಿನಿ ಫಿಲ್ಮ್ಸ್ ರಾಷ್ಟ್ರಪ್ರಶಸ್ತಿ ವಿಜೇತ ಸೆನ್ನಾ ಹೆಗ್ಡೆಯ ಮುಂದಿನ ಚಿತ್ರವನ್ನು ಕೂಡ ನಿರ್ಮಾಣ ಮಾಡ್ತಿದೆ.

ಒಟ್ಟಿನಲ್ಲಿ ಈ ಹಿಂದೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳ ರಿಮೇಕ್ ಹಕ್ಕನ್ನು ಖರೀದಿಸಿ ಚಿತ್ರಗಳನ್ನು ನಿರ್ಮಿಸುತ್ತಿದ್ದ ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ತುಂಬಾ ಬದಲಾಗಿದ್ದು, ರಿಮೇಕ್ ಸಂಖ್ಯೆ ಕಡಿಮೆಯಾಗಿ ಬೇರೆ ಭಾಷೆಗೆ ರೀಮೇಕ್ ಅಗುವಂತ ಸ್ವಮೇಕ್ ಕಥೆಗಳು ಹೆಚ್ಚಾಗುತ್ತಿವೆ. ಇನ್ನು ಕನ್ನಡ ಸಿನಿಪ್ರೇಕ್ಷಕರಂತೂ ರಿಮೇಕ್ ಚಿತ್ರಗಳಿಗೆ ಯಾವುದೇ ಪ್ರಾತಿನಿಧ್ಯ ನೀಡದೆ ತಳ್ಳಿಹಾಕುತ್ತಿದ್ದಾರೆ.

More from Filmibeat

English summary
Rakshit Shetty's Paramvah productional Sakutumba Sametha Kannada Movie to be remade in Malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X