Rakshith Shetty: 'ಸಪ್ತಸಾಗರ' ದಾಟಿ ಹೊರಬಂದ ಸಿಂಪಲ್ ಸ್ಟಾರ್: ಶೀಘ್ರದಲ್ಲೇ 'ರಿಚರ್ಡ್ ಆಂಟೋನಿ'ಗೆ ಮುಹೂರ್ತ

ಸೂಪರ್ ಹಿಟ್ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರೋ ಬಹುನಿರೀಕ್ಷಿತ ಸಿನಿಮಾ 'ಸಪ್ತಸಾಗರದಾಚೆ ಎಲ್ಲೋ'. ಹೇಮಂತ್‌ ಕುಮಾರ್ ನಿರ್ದೇಶನದ ಈ ರೊಮ್ಯಾಂಟಿಕ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಬಣ್ಣ ಹಚ್ಚಿದ್ದಾರೆ. ಟೈಟಲ್‌ನಿಂದ್ಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಾಕ್ಕಿರೋ ಈ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ.

ಬರೋಬ್ಬರಿ 137 ದಿನಗಳ ಕಾಲ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕಡಲ ತಡಿಯಲ್ಲಿ ಪೂಜೆ ಸಲ್ಲಿಸಿ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಈ ವಿಚಾರವನ್ನು ನಟ ರಕ್ಷಿತ್ ಶೆಟ್ಟಿ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಡೀ ಚಿತ್ರತಂಡ ಚಿತ್ರೀಕರಣಕ್ಕೆ ಪೂರ್ಣ ವಿರಾಮ ಹಾಕಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು ಮಾಡಿದೆ. '777 ಚಾರ್ಲಿ' ನಂತರ ಸಿಂಪಲ್ ಸ್ಟಾರ್ ನಟನೆಯ ಈ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿರೋದು ಸುಳ್ಳಲ್ಲ.

Rakshit Shettys Saptha Saagaradaache Ello Shooting Completed

'ಕವಲು ದಾರಿ' ನಂತರ ಹೇಮಂತ್‌ ಕುಮಾರ್ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಕೈಗೆತ್ತಿಕೊಂಡಿದ್ದರು. ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ಗೆ ಒಂದಷ್ಟು ದಿನ ವರ್ಕ್‌ಶಾಪ್ ನಡೆಸಿ ನಂತರ ಚಿತ್ರೀಕರಣ ಆರಂಭಿಸಿದ್ದರು. ಚಿತ್ರದಲ್ಲಿ 2 ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದಾರೆ. ಪಾತ್ರಕ್ಕಾಗಿ 15ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಂಡು ಕಸರತ್ತು ಮಾಡಿದ್ದಾರೆ. ಚಿತ್ರದಲ್ಲಿ ನಾಯಕನ 25 ಹಾಗೂ 45ರ ವಯೋಮಾನದ ಕುರಿತ ಕಥೆ ಇದೆ. ಅದಕ್ಕೆ ತಕ್ಕಂತೆ ಅರ್ಧ ಸಿನಿಮಾ ಸ್ಲಿಮ್ ಅಂಡ್ ಸ್ಮಾರ್ಟ್ ಕಾಲೇಜು ಹುಡುಗನಾಗಿ ರಕ್ಷಿತ್ ಮಿಂಚಿದ್ದಾರೆ.

ಸಿನಿಮಾ ಸ್ಯಾಂಪಲ್ಸ್ ನೋಡ್ತಿದ್ರೆ ಇದು ಇಂಟೆನ್ಸ್ ಲವ್‌ಸ್ಟೋರಿ ಅನ್ನೋದು ಗೊತ್ತಾಗ್ತಿದೆ. ರಕ್ಷಿತ್- ಹೇಮಂತ್ ಜೋಡಿ ತಮ್ಮ ಈ ಹಿಂದಿನ ಸಿನಿಮಾದಲ್ಲಿ ತಂದೆ ಮಗನ ಕಥೆಯನ್ನು ಇಂಟೆನ್ಸ್‌ ಆಗಿ ಹೇಳಿದ್ದರು. 2010ರಿಂದ 2020ರ ನಡುವಿನ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ಬಹಳ ಕಾಡುವಂತಹ ಪ್ರೇಮಕಥೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಹೇಳುತ್ತಿದ್ದಾರೆ. 'ಮೌನರಾಗ', 'ಬಂಧನ', 'ಬೆಂಕಿಯ ಬಲೆ', 'ಬೆಳದಿಂಗಳ ಬಾಲೆ' ರೀತಿಯ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ನಿರ್ದೇಶಕ ಹೇಮಂತ್ ರಾವ್ ಅಂಥದ್ದೇ ಕಥೆಯನ್ನು ಈ ಚಿತ್ರದಲ್ಲೂ ಕಟ್ಟಿಕೊಡುತ್ತಿರುವುದಾಗಿ ಹಿಂದೆ ಹೇಳಿಕೊಂಡಿದ್ದರು.

ಇನ್ನುಳಿದ ಅರ್ಧ ಭಾಗದಲ್ಲಿ ಸಾಲ್ಟ್‌ ಅಂಡ್ ಪೆಪ್ಪರ್ ಗಡ್ಡ ಬಿಟ್ಟು ತೂಕ ಹೆಚ್ಚಿಸಿಕೊಂಡು ರಗಡ್‌ ಆಗಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕಾಲೇಜ್‌ ಸ್ಟೋರಿಯಲ್ಲಿ ರುಕ್ಮಿಣಿ ನಾಯಕಿಯಾಗಿ ಸಾಥ್ ಕೊಟ್ಟಿದ್ದರೆ ನಂತರ ಚೈತ್ರಾ ಆಚಾರ್ ಜೊತೆಯಾಗಿರುವಂತೆ ಕಾಣುತ್ತಿದೆ. ಚರಣ್ ರಾಜ್ ಸಂಗೀತ ಹಾಗೂ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕಿದೆ. ಪರಂವ ಸಂಸ್ಥೆಯ ಅಡಿಯಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ 2 ಟೀಸರ್‌ಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

Rakshit Shettys Saptha Saagaradaache Ello Shooting Completed

ಕೊರೊನಾ ಹಾವಳಿಯಿಂದ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ತಡವಾಗಿತ್ತು. ಅಂತೂ ಇಂತೂ ಸಿನಿಮಾ ಚಿತ್ರೀಕರಣ ಮುಗಿಸಿದೆ. ಈ ಸಿನಿಮಾ ಶುರುವಾಗಿದಾಗಿನಿಂದ ರಕ್ಷಿತ್ ಶೆಟ್ಟಿ ಬೇರೆ ಯಾವುದೇ ಚಿತ್ರಕ್ಕೂ ಕೈ ಹಾಕಿರಲಿಲ್ಲ. ಇದೀಗ ಚಿತ್ರೀಕರಣ ಮುಗಿದಿರುವುದರಿಂದ 'ರಿಚರ್ಡ್ ಆಂಟನಿ' ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಬಹಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ಘೋಷಣೆ ಮಾಡಲಾಗಿತ್ತು. ಇದು 'ಉಳಿದವರು ಕಂಡಂತೆ' ಸಿನಿಮಾ ಪ್ರೀಕ್ವೆಲ್ ಆಗಿದೆ.

More from Filmibeat

English summary
Rakshit Shetty's Saptha Saagaradaache Ello Shooting Completed. Simple Star plays a character with two shades. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X