ನನಗೆ ಲವ್ ಫೇಲ್ಯುರ್ ಆಗಿಲ್ಲ: ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ತಮ್ಮ ಹೊಸ ಸಿನಿಮಾ 'ಚಾರ್ಲಿ 777' ಸಿನಿಮಾದ ಬಿಡುಗಡೆಗೆ ರೆಡಿಯಾಗಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ ರಕ್ಷಿತ್ ಶೆಟ್ಟಿ.

ಸಿನಿಮಾದ ಪ್ರಚಾರ ಸಂಬಂಧ ಹಲವು ಸಂದರ್ಶನಗಳನ್ನು, ನೀಡುತ್ತಿದ್ದಾರೆ, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ, ನಟಿ ಅನುಶ್ರೀಯ ಯೂಟ್ಯೂಬ್‌ ಚಾನೆಲ್‌ಗೆ ವಿಶೇಷ ಸಂದರ್ಶನವನ್ನು ರಕ್ಷಿತ್ ಶೆಟ್ಟಿ ನೀಡಿದ್ದು, ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ವಿಶೇಷವೆಂದರೆ ಈ ಸಂದರ್ಶನದಲ್ಲಿ ರವಿಚಂದ್ರನ್ ಸಹ ಭಾಗಿಯಾಗಿದ್ದು, ಸದ್ಯಕ್ಕೆ ಸಂದರ್ಶನದ ಪ್ರೋಮೋ ಮಾತ್ರವೇ ಬಿಡುಗಡೆ ಮಾಡಲಾಗಿದ್ದು, ರವಿಚಂದ್ರನ್ ಹಾಗೂ ರಕ್ಷಿತ್ ಶೆಟ್ಟಿ ಆಡಿರುವ ಮಾತುಗಳು, ಮಾಡಿರುವ ಫನ್ ಕುತೂಹಲ ಕೆರಳಿಸಿದೆ.

ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ, ರವಿಚಂದ್ರನ್‌ ಇಬ್ಬರೂ ಪರಸ್ಪರರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಮಜವಾದ ಉತ್ತರಗಳನ್ನು ಇಬ್ಬರೂ ಸ್ಟಾರ್‌ಗಳು ನೀಡಿದ್ದಾರೆ. ಅದರಲ್ಲಿ ರವಿಚಂದ್ರನ್, ರಕ್ಷಿತ್ ಶೆಟ್ಟಿಗೆ ಕೇಳಿರುವ ಪ್ರಶ್ನೆಯೊಂದು ಕುತೂಹಲ ಕೆರಳಿಸಿದೆ.

Rakshit Shetty Said He Did Not Encountered Any Love Failure

'ನಿಮಗೆ ಲವ್ ಫೇಲ್ಯುರ್ ಆಗಿರುವುದಕ್ಕೆ ನೀವು ಇಷ್ಟೋಂದು ಸಕ್ಸಸ್ ಆಗಿರುವುದು?'' ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ರಕ್ಷಿತ್ ಶೆಟ್ಟಿ, ''ನನ್ನ ಪ್ರಕಾರ ನನಗೆ ಲವ್ ಫೇಲ್ಯೂರ್ ಆಗಿಲ್ಲ. ಆದರೆ ಜಗತ್ತೆಲ್ಲ ನನಗೆ ಲವ್ ಫೇಲ್ಯೂರ್ ಆಗಿದೆ ಎಂದುಕೊಂಡಿದ್ದಾರೆ'' ಎಂದು ನಗುತ್ತಾರೆ ರಕ್ಷಿತ್ ಶೆಟ್ಟಿ.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಇಷ್ಟಪಟ್ಟು, ಮದುವೆಯಾಗಬೇಕೆಂದು ನಿಶ್ಚಯಿಸಿ, ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಇವರ ಮದುವೆ ಮುರಿದು ಹೋಯಿತು. ಆ ನಂತರ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿಬಿಟ್ಟರು. ರಕ್ಷಿತ್ ಶೆಟ್ಟಿ ಸಹ ವೃತ್ತಿ ಬದುಕಿನಲ್ಲಿ ಬ್ಯುಸಿಯಾದರು.

ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ಇನ್ನೂ ಸಾಕಷ್ಟು ಮಜವಾದ ಪ್ರಶ್ನೆಗಳು, ಉತ್ತರಗಳು ಹೊರಬಂದಿವೆ. 'ನೀವು ಬಹಳ ರೊಮ್ಯಾಂಟಿಕ್ ಅಂತೆ ಹೌದೆ?' ಎಂಬ ಅನುಶ್ರೀಯ ಪ್ರಶ್ನೆಗೆ, ''ಬೆಡ್ ರೂಂ ಒಳಗಾ ಅಥವಾ ಹೊರಗಾ?' ಎಂದು ನಾಟಿ ಉತ್ತರವನ್ನೇ ನೀಡಿದ್ದಾರೆ ರಕ್ಷಿತ್ ಶೆಟ್ಟಿ.

ಇನ್ನು ರಕ್ಷಿತ್ ಶೆಟ್ಟಿ ಸಹ ಹಲವು ಪ್ರಶ್ನೆಗಳನ್ನು ರವಿಚಂದ್ರನ್ ಅವರಿಗೆ ಕೇಳಿದ್ದಾರೆ, ರಕ್ಷಿತ್‌ರ ಪ್ರಶ್ನೆಗಳಿಗೆ ಅಷ್ಟೆ ಖಡಕ್ ಆಗಿ ಉತ್ತರ ನೀಡಿದ್ದಾರೆ ರವಿಚಂದ್ರನ್.

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಜೂನ್ 10 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾವು ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಕಿರಣ್ ರಾಜ್ ಕೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣವನ್ನು ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತ ಮಾಡಿದ್ದಾರೆ.

More from Filmibeat

English summary
Rakshit Shetty said he did not encountered any love failure. But all people think that I gone through a love failure.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X