"ಪುಣ್ಯಕೋಟಿ ಕಥೆಗೆ ಅಣ್ಣಾವ್ರ ಚಿತ್ರಗಳೇ ಪ್ರೇರಣೆ"; ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಆಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನಾಲ್ಕೈದು ಸಿನಿಮಾಗಳನ್ನು ನಿರ್ದೇಶಿಸಿ ನಟಿಸೋ ಬಗ್ಗೆ ಪದೇ ಪದೆ ಮಾತನಾಡುತ್ತಾರೆ. ಆದರೆ ಯಾವಾಗ ಆ ಸಿನಿಮಾಗಳೆಲ್ಲಾ ತೆರೆಗೆ ಬರುತ್ತದೆ ಎನ್ನುವ ಅಂದಾಜು ಖುದ್ದು ರಕ್ಷಿತ್‌ಗೂ ಇಲ್ಲ.

ಬಹಳ ಹಿಂದೆಯೇ 'ಪುಣ್ಯಕೋಟಿ' ಸರಣಿ ಸಿನಿಮಾಗಳನ್ನು ಮಾಡುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಇದು ಅವರ ಡ್ರೀಮ್ ಪ್ರಾಜೆಕ್ಟ್. ಆದರೆ ಸದ್ಯಕ್ಕೆ 'ರಿಚರ್ಡ್ ಆಂಟನಿ' ಚಿತ್ರದಲ್ಲಿ ಸಿಂಪಲ್ ಸ್ಟಾರ್ ಮುಳುಗಿದ್ದಾರೆ. ಇನ್ನು ಈ ಚಿತ್ರಕ್ಕೆ ಕಥೆ ಬರೆಯುವುದರಲ್ಲೇ ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ದೇಶ ವಿದೇಶ ಸುತ್ತಿ ಸಾಕಷ್ಟು ಜನರನ್ನು ಭೇಟಿ ಮಾಡಿ ಪಾತ್ರ ಪೋಷಣೆಗೆ ಕರಸತ್ತು ನಡೆಸುತ್ತಿದ್ದಾರೆ.

Rakshit Shetty says Dr Rajkumar s mythological films inspired him to punyakoti

ಇತ್ತೀಚೆಗೆ ಕೆನಡಾದ ಟೊರೊಂಟೋ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದರು. ಬಳಿಕ ಅಲ್ಲಿನ ಕನ್ನಡಿಗರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು. ಮುಖ್ಯವಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆಯೇ ಪ್ರಶ್ನೆಗಳು ಎದುರಾಗಿತ್ತು. 'ರಿಚರ್ಡ್ ಆಂಟನಿ', 'ಥಗ್ಸ್ ಆಫ್ ಮಾಲ್ಗುಡಿ' ಹಾಗೂ 'ಪುಣ್ಯಕೋಟಿ' ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ಪುಣ್ಯಕೋಟಿ' ಚಿತ್ರದ ಬಗ್ಗೆ ಮಾತನಾಡುತ್ತಾ ರಕ್ಷಿತ್ ಶೆಟ್ಟಿ ಅಣ್ಣಾವ್ರ ಪೌರಾಣಿಕ ಸಿನಿಮಾಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. "ನಾನು ಡಾ. ರಾಜ್‌ಕುಮಾರ್ ಅವರ ಪೌರಾಣಿಕ ಚಲನಚಿತ್ರಗಳ ಅಪಾರ ಅಭಿಮಾನಿ, ಅವರ ಎಲ್ಲಾ ಪೌರಾಣಿಕ ಸಿನಿಮಾಗಳನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ. ಬೇರೆ ಸಿನಿಮಾಗಳಿಗಿಂತ ಪೌರಾಣಿಕ ಸಿನಿಮಾಗಳು ಒಬ್ಬ ಮನುಷ್ಯನಿಗೆ ಹೇಗೆ ಸಹಾಯಕವಾಗುತ್ತದೆ ಎನ್ನುವುದು ನನಗೆ ಗೊತ್ತು. ಆ ಪಾತ್ರಗಳಿಂದ ಬಹಳ ಕಲಿತಿದ್ದೇನೆ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

"ನಾವು ಇಂದು ಅದೇ ಶೈಲಿಯಲ್ಲಿ ಪೌರಾಣಿಕ ಸಿನಿಮಾಗಳನ್ನು ಮಾಡಿದರೆ ಇವತ್ತಿಹ ಕಾಲಘಟ್ಟಕ್ಕೆ ಸರಿಹೋಗಲ್ಲ. ಇವತ್ತಿ ಕಾಲಕ್ಕೆ ತಕ್ಕಂತೆ ಮಾಡಬೇಕು. ಈಗ 'ಗೇಮ್ ಆಫ್ ಥ್ರೋನ್ಸ್‌' ರೀತಿ ಮಾಡಬೇಕಾಗುತ್ತದೆ. ಪ್ರೇಕ್ಷಕರು ದೊಡ್ಡ ಪರದೆಯಲ್ಲಿ ಅಂತಹ ಸಿನಿಮಾಗಳನ್ನು ನೋಡಲು ಸಿದ್ಧರಾಗಿದ್ದಾರೆ. ನಮಗೆ ಬಹಳ ಪ್ಲಾನ್‌ಗಳಿವೆ. 'ಪುಣ್ಯಕೋಟಿ' ಕೂಡ ಪೌರಾಣಿಕ ಸಿನಿಮಾ" ಎಂದು ವಿವರಿಸಿದ್ದಾರೆ.

ಸದ್ಯ ಅಣ್ಣಾವ್ರ ಪೌರಾಣಿಕ ಸಿನಿಮಾಗಳ ಬಗ್ಗೆ ರಕ್ಷಿತ್ ಶೆಟ್ಟಿ ಮಾತು ವೈರಲ್ ಆಗುತ್ತಿದೆ. ಇನ್ನು ಅಭಿಮಾನಿಗಳು ಕಾಮೆಂಟ್ ಮಾಡಿ ಯಾವ್ದೋ ಸಿನಿಮಾ ಮಾಡಪ್ಪಾ, ಆದರೆ ಬೇಗ ಬೇಗ ಮಾಡು ಎನ್ನುತ್ತಿದ್ದಾರೆ. ಇದೇ ಸಂವಾದ ಕಾರ್ಯಕ್ರಮದಲ್ಲಿ ಸುದೀಪ್ ಜೊತೆ ಮಾಡಬೇಕಿರುವ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಗ್ಗೆಯೂ ರಕ್ಷಿತ್ ಪ್ರತಿಕ್ರಿಯಿಸಿದ್ದರು.

ತಾವು ಮುಂದೆ ಮಾಡಲಿರುವ 6 ಸಿನಿಮಾಗಳಲ್ಲಿ 'ಥಗ್ಸ್ ಆಫ್ ಮಾಲ್ಗುಡಿ' ಕೂಡ ಇದ್ದೇ ಇದೆ. ಆದರೆ ಯಾವಾಗ ಆ ಸಿನಿಮಾ ಬರಬಹುದು ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ. ಮೊದಲಿನಿಂದಲೂ ರಕ್ಷಿತ್ ಶೆಟ್ಟಿ ಸಿನಿಮಾ ಮಾಡುವುದು ಬಹಳ ತಡವಾಗುತ್ತಲೇ ಬರುತ್ತಿದೆ. ಚಿತ್ರರಂಗಕ್ಕೆ ಬಂದ 14 ವರ್ಷಗಳಲ್ಲಿ 12 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಳೆದ ಕೊನೆಯದಾಗಿ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. ಇನ್ನು ತಮ್ಮದೇ ಪರಂವಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಮುಂದೆ ವರ್ಷಕ್ಕೆ ತಮ್ಮ ಬ್ಯಾನರ್‌ನಲ್ಲಿ 10-12 ಸಿನಿಮಾಗಳನ್ನು ನಿರ್ಮಿಸುವ ಉದ್ದೇಶ ಇರುವುದಾಗಿ ಸಿಂಪಲ್ ಸ್ಟಾರ್ ತಿಳಿಸಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸೈಡ್ A ಹಾಗೂ ಸೈಡ್ B ಹಾಗೂ '777 ಚಾರ್ಲಿ' ಚಿತ್ರಗಳನ್ನು ತಾವೇ ನಿರ್ಮಿಸಿದ್ದರು. ಕೊನೆಯದಾಗಿ 'ಇಬ್ಬನಿ ತಬ್ಬಿನ ಇಳೆಯಲಿ' ಸಿನಿಮಾ ನಿರ್ಮಿಸಿದ್ದರು.

More from Filmibeat

English summary
Rakshit shetty expresses admiration for dr Rajkumar'f films;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X