ಕಿಚ್ಚ ಸುದೀಪ್ ಜೊತೆ ರಕ್ಷಿತ್ ಶೆಟ್ಟಿ ಥಗ್ಸ್ ಆಫ್ ಮಾಲ್ಗುಡಿ ಮಾಡೋದು ಯಾವಾಗ ? ಇನ್ನೆಷ್ಟು ವರ್ಷ ಕಾಯಬೇಕು ?

ಕರಾವಳಿ ಸೊಗಡಿನ ಕನ್ನಡ ಮಾತನಾಡುವ ಹೀರೋಗಳನ್ನು ಎಲ್ಲ ಪ್ರಾಂತ್ಯದ ಜನ ಒಪ್ಪುವುದು ಕಷ್ಟವೆನ್ನುವ ಮಾತನ್ನು ಅಕ್ಷರಶ ಸುಳ್ಳಾಗಿಸಿದವರಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ನಮ್ ಏರಿಯಾಲ್ ಒಂದಿನ, ತುಘ್ಲಕ್, ಉಳಿದವರು ಕಂಡಂತೆ ಚಿತ್ರಗಳಿಂದ ಶುರುಮಾಡಿ ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋವರೆಗೆ ಹಂತ ಹಂತವಾಗಿ ಬೆಳೆದು ಇವತ್ತು ಕೇವಲ ಕರುನಾಡಿನಲ್ಲಿ ಮಾತ್ರವಲ್ಲದೇ ಅಖಂಡ ಭಾರತದೆಲ್ಲೆಡೆ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಕೇವಲ ನಾಯಕ ಮಾತ್ರ ಅಲ್ಲ ಬದಲಿಗೆ ನಿರ್ದೇಶಕ ಕೂಡ ಹೌದು.

ಇಂಥಾ ರಕ್ಷಿತ್ ಶೆಟ್ಟಿ ಸರಿಸುಮಾರು 08 ವರ್ಷದ ಹಿಂದೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು. ತಮ್ಮ ಚಿತ್ರಕ್ಕೆ ಥಗ್ಸ್ ಆಫ್ ಮಾಲ್ಗುಡಿ ಎಂದು ಹೆಸರನ್ನು ಇಟ್ಟಿದ್ದರು. ಆದರೆ. ಅದು ಕೇವಲ ಘೋಷಣೆಗಷ್ಟೇ ಸೀಮಿತವಾಯ್ತು. 08 ವರ್ಷ ಕಳೆದರೂ ಕೂಡ ಈ ಚಿತ್ರದ ಸುದ್ದಿ ಇಲ್ಲ. ಹಾಗಂಥ ಕನ್ನಡದ ಕಲಾರಸಿಕರು ಈ ಚಿತ್ರವನ್ನು ಮರೆತಿಲ್ಲ. ಇವತ್ತು ಕೂಡ ರಕ್ಷಿತ್ ಶೆಟ್ಟಿ ಅಥವಾ ಸುದೀಪ್ ಇಬ್ಬರಲ್ಲಿ ಯಾರೇ ಎದುರು ಬದುರಾದರೂ ಕೂಡ ಥಗ್ಸ್ ಆಫ್ ಮಾಲ್ಗುಡಿ ಚಿತ್ರದ ಕುರಿತು ಪ್ರಶ್ನೆಯನ್ನು ಕೇಳುತ್ತಲೇ ಬಂದಿದ್ದಾರೆ. ಇದಕ್ಕೆ ಇನ್ನೊಂದು ಸಾಕ್ಷಿ ಎನ್ನುವಂತೆ ರಕ್ಷಿತ್ ಶೆಟ್ಟಿ ಅವರಿಗೆ ಥಗ್ಸ್ ಆಫ್ ಮಾಲ್ಗುಡಿ ಚಿತ್ರದ ಕುರಿತು ಮತ್ತೊಮ್ಮೆ ಪ್ರಶ್ನೆ ಎದುರಾಗಿದೆ.

rakshit-shetty-shared-an-update-about-thugs-of-malgudi-starring-kichcha-sudeep-at-toronto

ಹೌದು, ಅಸಲಿಗೆ ರಕ್ಷಿತ್ ಶೆಟ್ಟಿ ಕೆನಡದ ಟೊರಂಟೊಗೆ ತೆರಳಿದ್ದರು. ಅಲ್ಲಿನ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿನ ಕನ್ನಡಿಗರ ಜೊತೆ ಸಂವಾದವನ್ನು ಕೂಡ ನಡೆಸಿದರು. ಇದೇ ಸಮಯದಲ್ಲಿ ಅಲ್ಲಿರುವ ಕನ್ನಡಿಗರೊಬ್ಬರು ರಕ್ಷಿತ್ ಶೆಟ್ಟಿ ಅವರಲ್ಲಿ ಥಗ್ಸ್ ಆಫ್ ಮಾಲ್ಗುಡಿ ಕುರಿತು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ರಕ್ಷಿತ್ ಶೆಟ್ಟಿ ನೀಡಿದ ಉತ್ತರ ನಿರಾಸೆ ಮೂಡಿಸುವಂತೆ ಇದೆ.

ಹೌದು, ಥಗ್ಸ್ ಆಫ್ ಮಾಲ್ಗುಡಿ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಿರುವ ರಕ್ಷಿತ್ ಶೆಟ್ಟಿ ಅದ್ಯಾವಾಗ ಎನ್ನುವ ಪ್ರಶ್ನೆಗೆ ನನ್ನ ಬಳಿ ಕೂಡ ನಿಖರವಾದ ಉತ್ತರ ಇಲ್ಲ. ಆದರೆ ನಾನು ಮಾಡಲಿರುವ ಮುಂದಿನ ಆರು ಚಿತ್ರಗಳಲ್ಲಿ ಥಗ್ಸ್ ಆಫ್ ಮಾಲ್ಗುಡಿ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ. ಸದ್ಯ ರಿಚರ್ಡ್ ಆಂಟೋನಿ, ಪುಣ್ಯಕೋಟಿ ಮತ್ತು ಮೀಡ್ ವೇ ಟು ಮೋಕ್ಷ ಈ ಮೂರು ಚಿತ್ರಗಳನ್ನು ನಾನು ಮುಗಿಸಬೇಕಿದೆ. ಚಿತ್ರದ ಚಿತ್ರೀಕರಣ ಶುರುವಾದರೆ ಬೇಗ ಬೇಗ ಮುಗಿಸುವ ನಂಬಿಕೆ ಕೂಡ ನನಗೆ ಇದೆ ಆದರೆ ಥಗ್ಸ್ ಆಫ್ ಮಾಲ್ಗುಡಿಗೆ ಕಾಲ ಯಾವತ್ತು ಕೂಡಿ ಬರುತ್ತೆ ಎನ್ನುವುದು ನನಗೂ ಕೂಡ ಗೊತ್ತಿಲ್ಲ. ನನ್ನ ಮುಂದಿನ ಆರು ಚಿತ್ರಗಳಲ್ಲಿ ಥಗ್ಸ್ ಆಫ್ ಮಾಲ್ಗುಡಿ ಎಷ್ಟನೇ ಚಿತ್ರ ಎನ್ನುವುದು ನನಗೂ ಕೂಡ ಗೊತ್ತಿಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ

ಸಹಜವಾಗಿ ರಕ್ಷಿತ್ ಶೆಟ್ಟಿ ಇವರ ಉತ್ತರದಿಂದ ಅನೇಕರು ಬೇಸರಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕುತ್ತಿದ್ದಾರೆ. ಕೆಲವರು ರಕ್ಷಿತ್ ಶೆಟ್ಟಿ ಮಾತುಗಳನ್ನು ಕೇಳಿಸಿಕೊಂಡರೆ ಇನ್ನು ಹತ್ತು ವರ್ಷವಾದರೂ ಕೂಡ ಥಗ್ಸ್ ಆಫ್ ಮಾಲ್ಗುಡಿ ಬರುವುದಿಲ್ಲ ಎನ್ನುವುದು ನನಗೆ ಖಚಿತವಾಯ್ತು ಎಂದರೆ ಇನ್ನೂ ಕೆಲವರು ರಕ್ಷಿತ್ ಶೆಟ್ಟಿ ಕೆಲಸದ ವಿಚಾರದಲ್ಲಿ ತುಂಬಾನೇ ನಿಧಾನ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೇ ಈ ವಿಡಿಯೋವನ್ನು ತೃಪ್ತಿ ವಿ ಆಚಾರ್ಯ ಅವರು ಸೆರೆ ಹಿಡಿದಿದ್ದು ಚಿತ್ರ ಪ್ರೇಮಿ ಭಾರ್ಗವಿ ಅವರನ್ನು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

More from Filmibeat

Read more about: rakshit shetty sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X