For Quick Alerts
  ALLOW NOTIFICATIONS  
  For Daily Alerts

  ಈ ಪುಟ್ಟ ಬಾಲಕ ಇಂದು ಸ್ಟಾರ್ ನಟ ಹಾಗೂ ನಿರ್ದೇಶಕ; ಈತ ಯಾರೆಂದು ಗುರುತಿಸಬಲ್ಲಿರಾ?

  |

  ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸೆಲೆಬ್ರಿಟಿಗಳು ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಹಂಚಿಕೊಂಡ ಈ ಚಿತ್ರಗಳು ವೈರಲ್ ಆಗಿದ್ದು, ಈ ಸೆಲೆಬ್ರಿಟಿ ಯಾರೆಂದು ಗುರುತು ಹಿಡಿಯಬಲ್ಲಿರಾ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

  ಈ ಸಾಲಿಗೆ ಇದೀಗ ರಕ್ಷಿತ್ ಶೆಟ್ಟಿ ಅವರ ಬಾಲ್ಯದ ಚಿತ್ರ ಕೂಡ ಸೇರಿಕೊಂಡಿದೆ. ತಮ್ಮ ಬಾಲ್ಯದ ಕುರಿತು ಹೆಚ್ಚು ಚಿತ್ರಗಳನ್ನೇನೂ ಹಂಚಿಕೊಳ್ಳದ ರಕ್ಷಿತ್ ಶೆಟ್ಟಿ ನಿನ್ನೆ ( ಸೆಪ್ಟೆಂಬರ್ 25 ) ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯ ಮೂಲಕ ತಮ್ಮ ಬಾಲ್ಯದ ದಿನಗಳ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಂತೆ, ಆ ಚಿತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಸಾಮಾಜಿಕ ಜಾಲತಾಣದ ತುಂಬಾ ಈ ಪುಟ್ಟ ಬಾಲಕ ಯಾರೆಂದು ಗುರುತಿಸಬಲ್ಲಿರಾ ಎಂಬ ಪ್ರಶ್ನೆಯಡಿ ಈ ಚಿತ್ರ ವೈರಲ್ ಆಗಿದೆ. ರಕ್ಷಿತ್ ಶೆಟ್ಟಿ 'ರೀ ವಿಸಿಟಿಂಗ್ ಚೈಲ್ಡ್ ಹುಡ್' ಎಂದು ಬರೆದುಕೊಳ್ಳುವುದರ ಮೂಲಕ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

  ಸದ್ಯ ಈ ವರ್ಷ 777 ಚಾರ್ಲಿ ಚಿತ್ರದ ಮೂಲಕ ನೂರು ಕೋಟಿ ಕ್ಲಬ್ ಸಿನಿಮಾವನ್ನು ನೀಡಿರುವ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆಯೆಲ್ಲೋ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಂತರ ತಾವೇ ನಟಿಸಲಿರುವ ರಿಚರ್ಡ್ ಆಂಟನಿ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್ ಕೂಡ ಹೇಳಲಿದ್ದಾರೆ. ರಿಚರ್ಡ್ ಆಂಟನಿ ಚಿತ್ರಕ್ಕೆ ಕನ್ನಡದ ಪ್ರಸ್ತುತ ಅತಿದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ.

  2010ರಲ್ಲಿ ಚಿತ್ರರಂಗಕ್ಕೆ ಎಂಟ್ರಿ

  2010ರಲ್ಲಿ ಚಿತ್ರರಂಗಕ್ಕೆ ಎಂಟ್ರಿ

  ಇನ್ನು 2010ರಲ್ಲಿ ತೆರೆಕಂಡ 'ನಮ್ ಏರಿಯಾಲ್ ಒಂದ್ ದಿನ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ, ಚಾರ್ಲಿವರೆಗೆ 14 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗದಲ್ಲಿ ಗೆದ್ದ ರಕ್ಷಿತ್ ಶೆಟ್ಟಿ ಕನ್ನಡ ಚಲನಚಿತ್ರ ರಂಗದ ಸೆಲ್ಫ್ ಮೇಡ್ ಬ್ರಾಂಡ್‌ಗಳಲ್ಲಿ ಓರ್ವರು. 2013ರಲ್ಲಿ ಬಿಡುಗಡೆಗೊಂಡ ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಬ್ರೇಕ್ ಪಡೆದ ರಕ್ಷಿತ್ ಶೆಟ್ಟಿ ತನ್ನದೇ ಆದ ವೀಕ್ಷಕರ ಬಳಗವನ್ನು ಗಳಿಸಲಾರಂಭಿಸದರು. ನಂತರ ಒಳ್ಳೊಳ್ಳೆಯ ಚಿತ್ರಗಳಲ್ಲಿ ಅಭಿನಯಿಸಿದ ರಕ್ಷಿತ್ ಶೆಟ್ಟಿ ಸದ್ಯ ಭರವಸೆಯ ಎಂಟರ್‌ಟೈನರ್ ಆಗಿದ್ದಾರೆ.

  2010ರಲ್ಲಿ ಹೀರೊ, 2014ರಲ್ಲಿ ನಿರ್ದೇಶಕ, 2016ರಲ್ಲಿ ನಿರ್ಮಾಪಕ

  2010ರಲ್ಲಿ ಹೀರೊ, 2014ರಲ್ಲಿ ನಿರ್ದೇಶಕ, 2016ರಲ್ಲಿ ನಿರ್ಮಾಪಕ

  2010ರಲ್ಲಿ ಬಿಡುಗಡೆಗೊಂಡ ನಮ್ ಏರಿಯಾಲ್ ಒಂದ್ ದಿನ ಚಿತ್ರದ ಮೂಲಕ ನಾಯಕ ನಟನಾಗಿ ಸಿನಿ ಜೀವನ ಆರಂಭಿಸಿದ ರಕ್ಷಿತ್ ಶೆಟ್ಟಿ 2014ರಲ್ಲಿ ಉಳಿದವರು ಕಂಡಂತೆ ಎಂಬ ಚಿತ್ರವನ್ನು ನಿರ್ದೇಶಿಸಿ ತಾನೊಬ್ಬ ಟ್ಯಾಲೆಂಟೆಡ್ ಡೈರೆಕ್ಟರ್ ಎಂದು ತಿಳಿಸಿದ್ದರು. ರಕ್ಷಿತ್ ಶೆಟ್ಟಿ ನಿರ್ದೇಶಿಸಿರುವ ಚಿತ್ರ ಇದೊಂದೇ ಆಗಿದ್ದರೂ ಸಹ ಅವರ ಮುಂದಿನ ನಿರ್ದೇಶನದ ರಿಚರ್ಡ್ ಆಂಟನಿ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿದೆ. ಇನ್ನು 2016ರಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಿರ್ಮಾಣವನ್ನೂ ಸಹ ರಕ್ಷಿತ್ ಶೆಟ್ಟಿ ಆರಂಭಿಸಿ ಸದ್ಯ ತಮ್ಮದೇ ಸ್ವಂತ ಬ್ಯಾನರ್‌ನಲ್ಲಿ ಏಕಾಂಗಿಯಾಗಿ ಸಿನಿಮಾ ನಿರ್ಮಿಸುವಷ್ಟು ಬೆಳೆದು ನಿಂತಿದ್ದಾರೆ.

  ಎರಡನೇ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆ ಬಂಡವಾಳ

  ಎರಡನೇ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆ ಬಂಡವಾಳ

  ಉಳಿದವರು ಕಂಡಂತೆ ಸಿನಿಮಾ ನಿರ್ದೇಶಿಸಿ ಗೆದ್ದಿದ್ದ ರಕ್ಷಿತ್ ಶೆಟ್ಟಿ ಇದೀಗ ಅದರ ಮುಂದುವರೆದ ಭಾಗಕ್ಕೆ ರಿಚರ್ಡ್ ಆಂಟನಿ ಎಂದು ಶೀರ್ಷಿಕೆಯನ್ನು ಇಟ್ಟಿದ್ದಾರೆ. ಮೊದಲೇ ಹೇಳಿದಂತೆ ನಿರ್ದೇಶಿಸಿರುವುದು ಏಕೈಕ ಚಿತ್ರವಾದರೂ ಸಹ ರಕ್ಷಿತ್ ನಿರ್ದೇಶನದ ಎರಡನೇ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ ಹಾಗೂ ಈ ಚಿತ್ರಕ್ಕೆ ಪ್ರಸ್ತುತ ಕನ್ನಡದ ಬೃಹತ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.

  English summary
  Rakshit Shetty shared his childhood photo on socila media and it's goes viral
  Monday, September 26, 2022, 13:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X