For Quick Alerts
  ALLOW NOTIFICATIONS  
  For Daily Alerts

  'ಕಪಟ ನಾಟಕ ಪಾತ್ರಧಾರಿ' ಮೆಚ್ಚಿದ ರಕ್ಷಿತ್ ಶೆಟ್ಟಿ

  |

  ಕಳೆದ ವಾರ ಬಿಡುಗಡೆಯಾದ 'ಕಪಟ ನಾಟಕ ಪಾತ್ರಧಾರಿ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕ ಹಾಗೂ ವಿಮರ್ಶಕ ಇಬ್ಬರು ಸಿನಿಮಾವನ್ನು ಮೆಚ್ಚಿದ್ದಾರೆ.

  ಸಿನಿಮಾದ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾತಾನಾಡಿದ್ದು, ಚಿತ್ರದ ಕೆಲವು ಅಂಶಗಳ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಬಾಲು ನಾಗೇಂದ್ರ ನಟನೆಯನ್ನು ರಕ್ಷಿತ್ ಹೊಗಳಿದ್ದಾರೆ.

  Review: ಖುಷಿ ಖುಷಿಯಾಗಿ ನೋಡಬಹುದು 'ಕಪಟ ನಾಟಕ ಪಾತ್ರಧಾರಿ'Review: ಖುಷಿ ಖುಷಿಯಾಗಿ ನೋಡಬಹುದು 'ಕಪಟ ನಾಟಕ ಪಾತ್ರಧಾರಿ'

  "ಬಾಲು ನಾಗೇಂದ್ರ ಮತ್ತು ನಾನು ಕಿರುಚಿತ್ರಗಳನ್ನು ಜೊತೆಗೆ ಮಾಡುತ್ತಿದ್ದೇವೆ. ಅಲ್ಲಿಂದ ಇವನು ಗೊತ್ತು. ಇವನು ಒಬ್ಬ ಅದ್ಭುತ ನಟ. ಈ ಅದ್ಭುತ ನಟನನ್ನು ಇನ್ನಷ್ಟು ಅದ್ಭುತವಾಗಿ ಇಂಡಸ್ಟ್ರಿ ಬಳಸಿಕೊಳ್ಳಬೇಕು." ಎಂದರು.

  "ಕಪಟ ನಾಟಕ ಸೂತ್ರಧಾರಿ ಒಂದು ಒಳ್ಳೆಯ ಪ್ರಯತ್ನ. ಎಲ್ಲರೂ ಸಿನಿಮಾ ನೋಡಬೇಕು. ಸಿನಿಮಾದ ಕೆಲವೊಂದು ಅಂಶಗಳನ್ನು ಬಹಳ ಎಂಜಾಯ್ ಮಾಡುತ್ತೀರಿ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ." ಎಂದು ರಕ್ಷಿತ್ ಸಂತಸ ಹಂಚಿಕೊಂಡಿದ್ದಾರೆ.

  ಈ ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸೇರಿ ಸಿನಿಮಾ ಮಾಡಿದ್ದಾರೆ. ಗರುಡ ಪಿಚ್ಚರ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.

  ಹೇಗಿದೆ ಸಿನಿಮಾ?

  'ಕಪಟ ನಾಟಕ ಪಾತ್ರಧಾರಿ'...ಇದು ಮೇಲ್ನೋಟಕ್ಕೆ ಆಟೋ ಡ್ರೈವರ್ ಒಬ್ಬರ ರೆಗ್ಯುಲರ್ ಕಥೆ. ಫ್ಯಾಮಿಲಿ, ಲವ್, ವಿಲನ್ ಎಂದು ಊಹಿಸಿದ್ದರೆ ಆ ಊಹೆ ತಪ್ಪು. ಇದು ಕಂಪ್ಲೀಟ್ ಮನರಂಜನೆ ತುಂಬಿದ ರೋಚಕ ಕಥೆ. ಸರಳವಾದ ಕಥೆಗೆ ಕುತೂಹಲಕಾರಿ ಚಿತ್ರಕಥೆ ಮಾಡಿ, ಅದಕ್ಕೆ ಹೋಲುವ ಸಂಭಾಷಣೆ ಬರೆದು, ಪ್ರೇಕ್ಷಕರನ್ನ ನಿರಾಸೆ ಮಾಡದೆ ನಿರ್ದೇಶಕ ಕ್ರಿಶ್ ಗಮನ ಸೆಳೆದಿದ್ದಾರೆ.

  English summary
  Rakshit Shetty spoke about 'Kapata Nataka Pathradhari' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X