For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಟ್ರೇಲರ್ ಬಿಡುಗಡೆ ದಿನಾಂಕ ಪ್ರಕಟ

  |

  ರಕ್ಷಿತ್ ಶೆಟ್ಟಿ ನಟಿಸುತ್ತಿರುವ '777 ಚಾರ್ಲಿ' ಸಿನಿಮಾದ ಟ್ರೇಲರ್ ಜೂನ್ 6 ರಂದು ಐದು ಭಾಷೆಯಲ್ಲಿ ಬಿಡುಗಡೆ ಆಗಲಿದೆ.

  ಸಿನಿಮಾದ ಟ್ರೇಲರ್‌ಗೆ 'ಲೈಫ್ ಆಫ್ ಚಾರ್ಲಿ' ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ಪ್ರೇಕ್ಷಕರು ಏನು ನಿರೀಕ್ಷಿಸಬಹುದು ಎಂಬುದರ ಝಲಕ್ ಟ್ರೇಲರ್‌ನಲ್ಲಿ ಇರಲಿದೆ.

  ಸಿನಿಮಾದ ಫೊಸ್ಟರ್‌ ಈಗಾಗಲೇ ಬಿಡುಗಡೆ ಆಗಿದೆ. ಪೋಸ್ಟರ್‌ನಲ್ಲಿ ರಕ್ಷಿತ್ ಶೆಟ್ಟಿ ಮುದ್ದಾದ ನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ನಾಯಿ ನಡುವಿನ ಬಂಧ, ಆತ್ಮೀಯತೆ ಸಿನಿಮಾದ ಪ್ರಮುಖ ಅಂಶವಾಗಿರಲಿದೆ ಎಂಬುದು ಪೋಸ್ಟರ್‌ಗಳಿಂದ ಗೊತ್ತಾಗುತ್ತಿದೆ.

  '777 ಚಾರ್ಲಿ' ಸಿನಿಮಾವು ಟ್ರಾವೆಲ್ ಡ್ರಾಮಾ ಆಗಿರುವ ಬಗ್ಗೆಯೂ ಅನುಮಾನವನ್ನು ಪೋಸ್ಟರ್‌ಗಳು ಮೂಡಿಸಿವೆ. ದೇಶದ ಹಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರೀಕರಣ ತಡವಾಗಿದೆ.

  ಜೂನ್‌ 6 ರಂದು ಬಿಡುಗಡೆ ಆಗುವ ಟ್ರೇಲರ್‌ನಲ್ಲಿಯೇ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಪ್ರಕಟಿಸುವ ಸಾಧ್ಯತೆ ಇದೆ. '777 ಚಾರ್ಲಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಟ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಮಾಡಿರುವುದು ಕಿರಣ್‌ರಾಜ್.

  ಮಾತಿನಿಂದ ತಿವಿದ ಚೇತನ್ ಗೆ ಉಪೇಂದ್ರ ಏನ್ ಹೇಳ್ತಾರೆ?? | Filmibeat Kannada

  '777 ಚಾರ್ಲಿ' ನಂತರ 'ಸಪ್ತಸಾಗರದಾಚೆ ಎಲ್ಲೊ', 'ಪುಣ್ಯಕೋಟಿ', 'ಕಿರಿಕ್ ಪಾರ್ಟಿ 2' ಮತ್ತು ತಮ್ಮದೇ ನಿರ್ದೇಶನದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ.

  English summary
  Rakshit Shetty Starer 777 Charlie Movie Official Teaser Life of Charlie to release on June 6. Movie release date may announce on the same day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X