India
  For Quick Alerts
  ALLOW NOTIFICATIONS  
  For Daily Alerts

  25 ದಿನಗಳನ್ನು ಪೂರೈಸಿದ '777 ಚಾರ್ಲಿ': ರಕ್ಷಿತ್ ಶೆಟ್ಟಿ ಸಿನಿಮಾ ಕಲೆಕ್ಷನ್ ಎಷ್ಟು?

  |

  2022ರ ಫಸ್ಟ್ ಹಾಫ್‌ನಲ್ಲಿ ಕನ್ನಡದ ಕೆಲವು ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿವೆ. ಹಾಗಂತ ಬರೀ ಗಳಿಕೆ ಅಷ್ಟೇ ಅಲ್ಲ. ಪ್ರೇಕ್ಷಕರಿಂದಲೂ ಮೆಚ್ಚುಗೆ ಕೂಡ ಗಿಟ್ಟಿಸಿಕೊಂಡಿವೆ. ಇಂತಹ ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಕೂಡ ಒಂದು.

  'ಕೆಜಿಎಫ್ 2' ಬಳಿಕ '777 ಚಾರ್ಲಿ' ಕನ್ನಡದಲ್ಲಿ ರಿಲೀಸ್ ಆದ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಬಾಕ್ಸಾಫೀಸ್‌ ಅನ್ನು ಚಿಂದಿ ಉಡಾಯಿಸಿದ್ದ 'ಕೆಜಿಎಫ್ 2' ಬಳಿಕ '777 ಚಾರ್ಲಿ' ಹೇಗೆ ನಿಲ್ಲಬಹುದು ಎಂಬ ಕುತೂಹಲವಿತ್ತು. ಆ ಕುತೂಹಲಕ್ಕೀಗ ತೆರೆಬಿದ್ದಿದ್ದು, ಇಂದಿಗೆ 25 ದಿನಗಳಾಗಿವೆ.

  ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?!ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?!

  '777 ಚಾರ್ಲಿ' ಸಿನಿಮಾ ರಿಲೀಸ್ ಆಗಿ ಇಂದಿಗೆ( ಜುಲೈ 04) 25 ದಿನಗಳನ್ನು ಪೂರೈಸಿದೆ. ವೀಕೆಂಡ್‌ನಲ್ಲಿ '777 ಚಾರ್ಲಿ' ಸಿನಿಮಾ ಕಲೆಕ್ಷನ್ ಸೂಪರ್‌ ಆಗಿದೆ. ಮೊದಲ 25 ದಿನಗಳಲ್ಲಿ ಚಾರ್ಲಿ ಎಷ್ಟು ಕಲೆಕ್ಷನ್ ಮಾಡಿರಬಹುದು? ಹಾಗೇ 24 ದಿನಗಳ ಕಲೆಕ್ಷನ್ ಎಷ್ಟಾಗಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕ ಹಾಕಿದ್ದಾರೆ.

  '777 ಚಾರ್ಲಿ' ಕಲೆಕ್ಷನ್‌ನಲ್ಲಿ ಏರಿಕೆ

  '777 ಚಾರ್ಲಿ' ಕಲೆಕ್ಷನ್‌ನಲ್ಲಿ ಏರಿಕೆ

  ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದೂ ಆಗಿದೆ. ಇನ್ನೇನಿದ್ದರೂ ದಾಖಲೆಗಳನ್ನು ಬರೆಯುವುದಷ್ಟೇ ಬಾಕಿ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ಸಿನಿಮಾ ಮತ್ತೆ ಗೆಲುವಿನ ನಗೆ ಬೀರಿದೆ. 24ನೇ ದಿನ ಅಂದರೆ, ಭಾನುವಾರ (ಜುಲೈ 03) ಚಾರ್ಲಿ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಸುಮಾರು ಶೇ.42ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ. 23ನೇ ದಿನ 1.26 ಕೋಟಿ ರೂ. ಗಳಿಸಿದ್ದರೆ, 24ನೇ ದಿನ ವಿಶ್ವದಾದ್ಯಂತ ಸುಮಾರು 1.80 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

  '777 ಚಾರ್ಲಿ' 14ನೇ ದಿನ ಕಲೆಕ್ಷನ್ ಎಷ್ಟು? 75 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದ್ದಾಯ್ತಾ?'777 ಚಾರ್ಲಿ' 14ನೇ ದಿನ ಕಲೆಕ್ಷನ್ ಎಷ್ಟು? 75 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದ್ದಾಯ್ತಾ?

  25ನೇ ದಿನದ ಕಲೆಕ್ಷನ್ ಲೆಕ್ಕಚಾರವೇನು?

  25ನೇ ದಿನದ ಕಲೆಕ್ಷನ್ ಲೆಕ್ಕಚಾರವೇನು?

  '777 ಚಾರ್ಲಿ' ಎಷ್ಟು ಕಲೆಕ್ಷನ್ ಮಾಡುತ್ತೆ ಎನ್ನುವುದೇ ದೊಡ್ಡ ಕುತೂಹಲ. ನಾಲ್ಕನೇ ಶನಿವಾರ ಹಾಗೂ ಭಾನುವಾರ ಸಿನಿಮಾ ಕಲೆಕ್ಷನ್ ಲೆಕ್ಕಾಚಾರವನ್ನು ನೋಡಿದರೆ, ಚಾರ್ಲಿ 25ನೇ ದಿನ ಗಳಿಕೆಯಲ್ಲಿ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಈ ಸಿನಿಮಾ ಸೋಮವಾರ ( ಜುಲೈ 04) 25ನೇ ದಿನ ಸುಮಾರು 50 ಲಕ್ಷಕ್ಕಿಂತ ಅಧಿಕ ಗಳಿಕೆ ಕೇವಲ ಕರ್ನಾಟಕದಲ್ಲಿ ಗಳಿಸಬಹುದು ಎನ್ನಲಾಗಿದೆ.

  ಭಾರತದ ಒಟ್ಟು ಗಳಿಕೆ ಎಷ್ಟು?

  ಭಾರತದ ಒಟ್ಟು ಗಳಿಕೆ ಎಷ್ಟು?

  24 ದಿನಗಳಲ್ಲಿ '777 ಚಾರ್ಲಿ' ಕೇವಲ ಭಾರತದಲ್ಲಿ ಅತ್ಯುತ್ತಮ ಗಳಿಕೆ ಕಂಡಿದೆ. 24ನೇ ದಿನ ಗಳಿಸಿದ 1.80 ಕೋಟಿ ರೂ. ಸೇರಿ, ಒಟ್ಟು ಗಳಿಕೆ 80.10 ಕೋಟಿ ದಾಟಲಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ. 15 ಕೋಟಿ ರೂ. ವೆಚ್ಚದ ಸಿನಿಮಾ ಡೊಮೆಸ್ಟಿಕ್‌ ಲೆವೆಲ್‌ನಲ್ಲಿ 80 ಕೋಟಿ ರೂ. ಗಳಿಸಿದ್ದು ಬ್ಲಾಕ್‌ಬಸ್ಟರ್‌ಗೆ ಸಮ ಎನ್ನಲಾಗಿದೆ.

  ರಕ್ಷಿತ್ ಶೆಟ್ಟಿ '777 ಚಾರ್ಲಿ' 100 ಕೋಟಿ ಗಳಿಕೆಸೋದು ಯಾವಾಗ: 15 ದಿನದ ಕಲೆಕ್ಷನ್ ಎಷ್ಟು?ರಕ್ಷಿತ್ ಶೆಟ್ಟಿ '777 ಚಾರ್ಲಿ' 100 ಕೋಟಿ ಗಳಿಕೆಸೋದು ಯಾವಾಗ: 15 ದಿನದ ಕಲೆಕ್ಷನ್ ಎಷ್ಟು?

  ವಿಶ್ವದಾದ್ಯಂತ '777 ಚಾರ್ಲಿ' ಗಳಿಸಿದ್ದೆಷ್ಟು?

  ವಿಶ್ವದಾದ್ಯಂತ '777 ಚಾರ್ಲಿ' ಗಳಿಸಿದ್ದೆಷ್ಟು?

  25ನೇ ದಿನದಲ್ಲೂ '777 ಚಾರ್ಲಿ' 100 ಕೋಟಿ ಗಳಿಕೆ ಮಾಡಲು ಸೋತಿದೆ. 25ನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ಈ ಸಿನಿಮಾ ಕೇವಲ 97.50 ಕೋಟಿ ರೂ. ಗಳಿಸಲಷ್ಟೇ ಸಾಧ್ಯವಾಗಿದೆ ಎಂದು ಹೇಳಲಾಗಿದೆ.

  English summary
  Rakshit Shetty Starrer 777 Charlie Box Office: Day 25 Collection Prediction Report, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X