ನಿರೀಕ್ಷೆ ತಲುಪಿದ್ರಾ ರಕ್ಷಿತ್ ಶೆಟ್ಟಿ: '777 ಚಾರ್ಲಿ' ಮೊದಲ ದಿನ ಗಳಿಸಿದ್ದೆಷ್ಟು?

ನಟ ರಕ್ಷಿತ್ ಅಭಿನಯದ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿದೆ. ಕಮರ್ಷಿಯಲ್ ಸಿನಿಮಾಗಳ ಅದೆ ಹಳೇ ಸೂತ್ರಗಳನ್ನು ಬದಿಗೊತ್ತಿ ಹೊಸ ಪ್ರಯತ್ನಕ್ಕೆ ನಟ ರಕ್ಷಿತ್ ಶೆಟ್ಟಿ ಕೈ ಹಾಕಿದ್ದಾರೆ. ಅದುವೇ '777 ಚಾರ್ಲಿ'. ಈ ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಹೇಳಲಾಗಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಚಾರ್ಲಿ ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚುತ್ತಿದೆ.

ಜೂನ್ 10ರಂದು '777 ಚಾರ್ಲಿ' ಸಿನಿಮಾ ರಿಲೀಸ್ ಆಗಿದೆ. ರಿಲೀಸ್‌ಗೂ ಮುನ್ನ ಈ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಕೆಜಿಎಫ್, ವಿಕ್ರಂ, RRR ಅಂತಹ ಪಕ್ಕಾ ಮಾಸ್, ಕಮರ್ಶಿಯಲ್ ಅಂಶಯುಳ್ಳ ಸಿನಿಮಾಗಳ ನಡುವೆ ಗಮನ ಸೆಳೆದಿದೆ '777 ಚಾರ್ಲಿ'.

'777 ಚಾರ್ಲಿ' ಸಿನಿಮಾ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತಿದೆ. ಸಿನಿಮಾ ನೋಡಿವರು ಕಣ್ಣೀರು ಹಾಕದೆ ಚಿತ್ರಮಂದಿರದಿಂದ ಹೊರ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಸಿನಿಮಾ ನೋಡಿದವರು. ಅಷ್ಟು ಚೆನ್ನಾಗಿ ಕಥೆಯನ್ನು ಕಟ್ಟಿದ್ದಾರೆ ನಿರ್ದೇಶಕ ಕಿರಣ್ ರಾಜ್.

ಮೊದಲ ದಿನ ಗಳಿಕೆ ನಿರೀಕ್ಷೆ!

ಮೊದಲ ದಿನ ಗಳಿಕೆ ನಿರೀಕ್ಷೆ!

ರಕ್ಷತ್ ಶೆಟ್ಟಿ ಮತ್ತು ಚಾರ್ಲಿ ಇಬ್ಬರೂ '777 ಚಾರ್ಲಿ' ಚಿತ್ರದ ಮೇಲೆ ನಿರೀಕ್ಷೆ ಮೂಡಿಸಿದ್ದರು. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಸಿನಿಮಾ ಟ್ರೇಡ್ ವಿಶ್ಲೇಷಕರ ಪ್ರಕಾರ '777 ಚಾರ್ಲಿ' ಸಿನಿಮಾದ ಮೊದಲ ದಿನದ ಗಳಿಕೆ 10 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ನಿರೀಕ್ಷೆಯನ್ನು ಮುಟ್ಟುವಲ್ಲಿ ಸಿನಿಮಾ ಕೊಂಚ ಹಿಂದೆ ಉಳಿದಿದೆ.

ಮೊದಲ ದಿನ '777 ಚಾರ್ಲಿ' ಗಳಿಕೆ ಎಷ್ಟು?

ಮೊದಲ ದಿನ '777 ಚಾರ್ಲಿ' ಗಳಿಕೆ ಎಷ್ಟು?

ಜೂನ್ 10ರಂದು '777 ಚಾರ್ಲಿ' ಸಿನಿಮಾ ರಿಲೀಸ್ ಅಗಿದೆ. ಚಿತ್ರದ ಮೊದಲ ದಿನದ ಗಳಿಕೆಯ ಲೆಕ್ಕಾಚಾರ ಹೊರ ಬಂದಿದೆ. '777 ಚಾರ್ಲಿ' ಮೊದಲ ದಿನದ ಗಳಿಕೆ ₹6 ಕೋಟಿ ಎಂದು ತಿಳಿದು ಬಂದಿದೆ. ಮೊದಲ ದಿನ ದೊಡ್ಡ ಮಟ್ಟದಲ್ಲಿ ಸಿನಿಮಾ ಓಪನಿಂಗ್ ಕಂಡಿಲ್ಲ. ಆದರೂ ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಈ ಚಿತ್ರ ಅಬ್ಬರದ ಮಾಸ್ ಸಿನಿಮಾ ಅಲ್ಲ. ಇದು ಪ್ರೇಕ್ಷಕರನ್ನು ನಗಿಸಿ, ಅಳಿಸುವ ಸಿನಿಮಾ. ಹಾಗಾಗಿ ನಿಧಾನವಾಗಿ ಪಿಕಪ್ ಆಗುವ ಸಾಧ್ಯತೆ ಹೆಚ್ಚು.

ಶನಿವಾರ ಗಳಿಕೆ ಹೇಗಿದೆ?

ಶನಿವಾರ ಗಳಿಕೆ ಹೇಗಿದೆ?

ರಿಲೀಸ್ ದಿನ ಶುಕ್ರವಾರದಂದು '777 ಚಾರ್ಲಿ' ₹6 ಕೋಟಿ ಗಳಿಕೆ ಕಂಡಿದ್ದು, ಎರಡನೇ ದಿನ ಮತ್ತಷ್ಟು ಚೇತರಿಕೆ ಕಂಡಿದೆ. ಶನಿವಾರ ಆರಂಭದಲ್ಲಿ ಸಿನಿಮಾದ ಒಟ್ಟಾರೆ ಗಳಿಕೆ ₹ 8 ಕೋಟಿಯ ಗಡಿ ಮುಟ್ಟಿದೆ. ಹಾಗಾಗಿ ಸಿನಿಮಾದ ಗಳಿಕೆ ಕ್ರಮೇಣವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಎರಡನೇ ದಿನ ಮುಗಿಯುವಷ್ಟರಲ್ಲಿ ಎಷ್ಟು ಗಳಿಕೆ ಮಾಡುತ್ತೆ ಎನ್ನುವುದರ ಮೇಲೆ ಭಾನುವಾರದ ಗಳಿಕೆಯ ಲೆಕ್ಕಾಚಾರ ಸಿಗಲಿದೆ.

ಬಾಲಿವುಡ್‌ ಬಾಕ್ಸಾಫೀಸ್ ಲೆಕ್ಕಾಚಾರ!

ಬಾಲಿವುಡ್‌ ಬಾಕ್ಸಾಫೀಸ್ ಲೆಕ್ಕಾಚಾರ!

ಇನ್ನು ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ' ಹೇಗೆ ಅಬ್ಬರಿಸಲಿದೆ. ಎಷ್ಟು ಗಳಿಕೆ ಕಾಣಲಿದೆ ಎನ್ನುವ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ನಟ ರಕ್ಷಿತ್ ಶೆಟ್ಟಿ ಹೇಳಿದ ಹಾಗೆ ಈ ಸಿನಿಮಾ ವರ್ಡ್‌ ಆಫ್ ಮೌತ್ ಪಬ್ಲಿಸಿಟಿಯಿಂದಲೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ತಾಕತ್ತು ಹೊಂದಿದೆ. ಇನ್ನು ಸೋಮವಾರದ ಬಳಿಕ ನಾರ್ತ್‌ನಲ್ಲಿ ಸಿನಿಮಾಗೆ ಯಾವ ರೀತಿಯ ರೆಸ್ಪಾನ್ಸ್ ಸಿಗಲಿದೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Rakshit Shetty Starrer 777 Charlie Day 1 Box Office Collection Is Only 6 Crore,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X