ರಕ್ಷಿತ್ ಶೆಟ್ಟಿ '777 ಚಾರ್ಲಿ' ಭಾನುವಾರ ಗಳಿಸಿದ್ದೆಷ್ಟು? ಒಟ್ಟಾರೆ ಕಲೆಕ್ಷನ್ ಲೆಕ್ಕಾಚಾರ ಇಲ್ಲಿದೆ!

ನಟ ರಕ್ಷಿತ್ ಅಭಿನಯದ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿದೆ. ಜೂನ್ 10ರಂದು ತೆರೆಕಂಡು ಈ ಸಿನಿಮಾ ಕಮರ್ಷಿಯಲ್ ಸಿನಿಮಾ ಮತ್ತು ಸದಭಿರುಚಿ ಸಿನಿಮಾ ಪ್ರೇಕ್ಷಕರನ್ನು ಸೆಳೆದಿದೆ. ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಹೇಳಲಾಗಿದೆ. ರಕ್ಷಿತ್ ಶೆಟ್ಟಿ ಜೊತೆಗೆ 'ಚಾರ್ಲಿ' ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚುತ್ತಿದೆ.

ರಿಲೀಸ್‌ಗೂ ಮುನ್ನ ಈ '777 ಚಾರ್ಲಿ' ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು.' ಕೆಜಿಎಫ್', 'ವಿಕ್ರಂ', 'RRR' ಅಂತಹ ಪಕ್ಕಾ ಮಾಸ್ ಕಮರ್ಶಿಯಲ್ ಅಂಶಯುಳ್ಳ ಸಿನಿಮಾಗಳ ನಡುವೆ ಗಮನ ಸೆಳೆದಿದೆ. '777 ಚಾರ್ಲಿ'. ಇನ್ನು ಕಲೆಕ್ಷನ್ ಕೂಡ ಉತ್ತಮ ರೀತಿಯಲ್ಲಿ ಇದೆ.

ಮೊದಲ ದಿನ 6 ಕೋಟಿ ರೂ.ಗೂ ಅಧಿಕ ಕಂಡ '777 ಚಾರ್ಲಿ' ವಾರಾಂತ್ಯದಲ್ಲಿ ಈ ಕಲೆಕ್ಷನ್ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ಭಾನುವಾರ ಹೆಚ್ಚು ಗಳಿಕೆ ಕಂಡಿದೆ. ಮೂರು ದಿನದ ಒಟ್ಟಾರೆ ವಿಶ್ವದಾದ್ಯಂತ ಚಾರ್ಲಿ ಗಳಿಸಿದ್ದು ಎಷ್ಟು ಎನ್ನುವುದನ್ನು ಮುಂದೆ ಓದಿ...

Recommended Video

Charlie Remuneration | ಚಾರ್ಲಿ ಸಂಭಾವನೆ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ | #777charlie *Sandalwood

 '777 ಚಾರ್ಲಿ' ಭಾನುವಾರದ ಗಳಿಕೆ!

'777 ಚಾರ್ಲಿ' ಭಾನುವಾರದ ಗಳಿಕೆ!

ಮೊದಲ ದಿನ ಅಷ್ಟು ದೊಡ್ಡ ಮಟ್ಟದ ಓಪನಿಂಗ್ ಪಡೆದು ಕೊಳ್ಳದ '777 ಚಾರ್ಲಿ' ವಿಶ್ವದಾದ್ಯಂತ 6.7 ಕೋಟಿ ರೂ. ಗಳಿಸಿ ಸುಮ್ಮನಾಗಿತ್ತು. ಆದರೆ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ. ಅದರಲ್ಲೂ ಶನಿವಾರದಂದು ಹೆಚ್ಚು ಗಳಿಕೆ ಕಂಡಿದೆ. ಭಾನುವಾರದ ಒಟ್ಟಾರೆ ಕಲೆಕ್ಷನ್ 9.50 ಕೋಟಿ ರೂ. ಎನ್ನಲಾಗಿದೆ. ಮೂಲಗಳ ಪ್ರಕಾರ ಭಾನುವಾರದ ಗಳಿಕೆ ಕೊಂಚ ಹೆಚ್ಚಾಗಿದೆ. ಆದರೆ ನಿರೀಕ್ಷೆಯ ಮಟ್ಟಕ್ಕೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡು ಬಂದಿಲ್ಲ.

 3 ದಿನಕ್ಕೆ ಚಾರ್ಲಿ 23 ಕೋಟಿ ರೂ!

3 ದಿನಕ್ಕೆ ಚಾರ್ಲಿ 23 ಕೋಟಿ ರೂ!

'777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಅಂದೆ ಈ ಚಿತ್ರ ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತೆರೆಕಂಡಿದೆ. ಚಿತ್ರತಂಡದ ನಿರೀಕ್ಷೆಯಂತೆ ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಹೆಚ್ಚಾಗುತ್ತಲೆ ಇದೆ. ವಾರಾಂತ್ಯದಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗಿದ್ದು. ಒಟ್ಟಾರೆ ಮೊದಲ ವೀಕೆಂಡ್ ಸೇರಿ, ಮೊದಲ ಮೂರು ದಿನದ ಗಳಿಗೆ 23.50 ಕೋಟಿ ರೂ.ಎನ್ನುವ ಅಂಕಿ ಅಂಶ ಹೊರ ಬಿದ್ದಿದೆ.

 '777 ಚಾರ್ಲಿ' ಒಟ್ಟಾರೆ 3 ದಿನದ ಗಳಿಕೆ!

'777 ಚಾರ್ಲಿ' ಒಟ್ಟಾರೆ 3 ದಿನದ ಗಳಿಕೆ!

ಕಳೆದ ಮೂರು ದಿನಗಳಲ್ಲಿ ಚಾರ್ಲಿ ಗಳಿಕೆ ಹೇಗಿದೆ ಎನ್ನುವುದರ ಅಂದಾಜಿನ ಲೆಕ್ಕಾಚಾರ ಇಲ್ಲಿದೆ.

ದಿನ 1: ₹ 6.2 ಕೋಟಿ ರೂ.

ದಿನ 2: ₹ 7.8 ಕೋಟಿ ರೂ.

ದಿನ 3 :₹ 9.50 ಕೋಟಿ ರೂ.

ಒಟ್ಟಾರೆ: ₹ 23.50 ಕೊಟಿ ರೂ.

 ಚಾರ್ಲಿ ಬಾಲಿವುಡ್ ಗಳಿಕೆ ಲೆಕ್ಕ ಬಂದಿಲ್ಲ!

ಚಾರ್ಲಿ ಬಾಲಿವುಡ್ ಗಳಿಕೆ ಲೆಕ್ಕ ಬಂದಿಲ್ಲ!

'777 ಚಾರ್ಲಿ' ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗಿದೆ. ಆದರೆ ಹಿಂದಿ ಗಳಿಕೆ ಪಕ್ಕಾ ಲೆಕ್ಕ ಇನ್ನು ಕುಡ ಹೊರ ಬಂದಿಲ್ಲ. ಕಲೆಕ್ಷನ್ ಲೆಕ್ಕಾಚಾರ ಬಿಟ್ಟು ನೋಡಿದರೆ, ಚಾರ್ಲಿ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತಿದೆ. ಸಿನಿಮಾ ನೋಡಿವರು ಕಣ್ಣೀರು ಹಾಕದೆ ಚಿತ್ರಮಂದಿರದಿಂದ ಹೊರ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಅಷ್ಟು ಚೆನ್ನಾಗಿ ಕಥೆಯನ್ನು ಕಟ್ಟಿದ್ದಾರೆ ನಿರ್ದೇಶಕ ಕಿರಣ್ ರಾಜ್ ಎನ್ನಲಾಗುತ್ತಿದೆ.

More from Filmibeat

English summary
Rakshit Shetty Starrer 777 Charlie Day 3 Box Office Collection, Cross 20 Crore world Wide,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X