'777 ಚಾರ್ಲಿ' 4ನೇ ದಿನದ ಕಲೆಕ್ಷನ್: ಬಜೆಟ್ ಮೊತ್ತ ಇನ್ನು ಬಾಕಿ ಇದೆ!
ನಟ ರಕ್ಷಿತ್ ಅಭಿನಯದ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿದೆ. ಜೂನ್ 10ರಂದು ತೆರೆಕಂಡ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಂದಗತಿಯಲ್ಲಿ ಸಾಗುತ್ತಿತ್ತು. '777 ಚಾರ್ಲಿ' ಅಬ್ಬರದ ಕಮರ್ಷಿಯಲ್ ಸಿನಿಮಾ ಅಲ್ಲ. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಭಾವನೆಗಳ ಮೂಲಕ ಹಿಡಿದಿಡುತ್ತದೆ.
ರಿಲೀಸ್‌ಗೂ ಬಳಿಕ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿವೆ. ಇನ್ನು ರಿಲೀಸ್‌ಗೂ ಮುನ್ನ '777 ಚಾರ್ಲಿ' ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ವಿಭಿನ್ನವಾಗಿ ಗಮನ ಸೆಳೆದಿದೆ '777 ಚಾರ್ಲಿ', ಮಂದಗತಿಯಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿದೆ.
ಮೊದಲ ದಿನ 6 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡ '777 ಚಾರ್ಲಿ' ವಾರಾಂತ್ಯದಲ್ಲಿ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಕಲೆಕ್ಷನ್ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ಅದರಲ್ಲೂ ಭಾನುವಾರ ಹೆಚ್ಚು ಗಳಿಕೆ ಕಂಡಿದೆ. ಇನ್ನು ಸೋಮವಾರ ಕೂಡ ಕಲೆಕ್ಷನ್ ಸ್ಥಿರವಾಗಿದೆ.
Recommended Video


ಚಾರ್ಲಿ ಬಂಡವಾಳ ಬಂತಾ?
'777 ಚಾರ್ಲಿ' ಕನ್ನಡದ ತೆರೆಕಂಡ ವಿಭಿನ್ನ ಪ್ರಾಯೋಗಿಕ ಸಿನಿಮಾ ಅಂತಲೇ ಹೇಳ ಬಹುದು. ರಕ್ಷಿತ್ ಎಟ್ಟಿ ಅಂತಹ ಒಬ್ಬ ನಟ ಈ ರೀತಿ ನಾಯಿಯ ಭಾವನೆಗಳನ್ನು ತೋರಿಸುವ ನಿಟ್ಟಿನಲ್ಲಿ ತೆರೆಗೆ ಮೇಲೆ ಅತಿ ಸಾಮಾನ್ಯನಂತೆ ಕಾಣಿಸಿಕೊಂಡಿರುವು ಉತ್ತಮ ವಿಚಾರ. '777 ಚಾರ್ಲಿ' ಚಿತ್ರ ರಿಲೀಸ್ ಆಗಿ ನಾಲ್ಕು ದಿನ ಆಯ್ತು. ಈ ನಾಲ್ಕು ದಿನದಲ್ಲಿ ಚಿತ್ರಕ್ಕೆ ಹಾಕಿದ ಬಂಡವಾಳ ಇನ್ನೂ ಪೂರ್ಣವಾಗಿ ಗಳಿಸಿಕೊಂಡಿಲ್ಲ ಸಿನಿಮಾ. ಚಿತ್ರಕ್ಕೆ 30 ಕೋಟಿ ರೂ. ಬಜೆಟ್ ಹಾಕಲಾಗಿದೆ ಎನ್ನಲಾಗಿದೆ. ಇನ್ನು ಒಂದು ದಿನದಲ್ಲಿ ಈ ಗಳಿಕೆ ಕಾಣುವ ಸಾಧ್ಯತೆ ಇದೆ.

ಚಾರ್ಲಿ ನಾಲ್ಕನೆ ದಿನದ ಕಲೆಕ್ಷನ್ ಔಟ್!
ವಾರಂತ್ಯದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುತ್ತದೆ. ಹಾಗೇ ಸೋಮವಾರ ವಾರದ ಆರಂಭದ ದಿನ ಕಡಿಮೆ ಇದ್ದೇ ಇರುತ್ತದೆ. ಹಾಗಾಗಿ '777 ಚಾರ್ಲಿ' ಚಿತ್ರದ ಸೋಮವಾರ ಗಳಿಕೆ ಇಳಿಕೆ ಕಂಡಿದೆ. ಸೋಮವಾರ ಮಾತ್ರವೇ ಚಿತ್ರ 4.80 ಕೋಟಿ ರೂ. ಕಲೆಹಾಕಿದೆ. ಈ ಮೊತ್ತ ಮೊದಲ ದಿನಕ್ಕಿಂತಲೂ ಸುಮಾರು 2 ಕೋಟಿಯಷ್ಟು ಕಡಿಮೆ ಇದೆ. ಆದರೆ ಒಟ್ಟಾರೆ ಕಲೆಕ್ಷನ್ ಮೊತ್ತವನ್ನು ಹೆಚ್ಚು ಮಾಡಿದೆ.

4 ದಿನಕ್ಕೆ ಚಾರ್ಲಿ 28 ಕೋಟಿ ರೂ!
'777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರ ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತೆರೆಕಂಡಿದೆ. ಚಿತ್ರತಂಡದ ನಿರೀಕ್ಷೆಯಂತೆ ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಹೆಚ್ಚಾಗುತ್ತಲೆ ಇದೆ. ವಾರಾಂತ್ಯದಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗಿದ್ದು. ಎರಡನೇ ವಾರದ ಆರಂಭದಲ್ಲೂ ಸ್ಥಿರವಾಗಿದೆ. ಹಾಗಾಗಿ ಸಿನಿಮಾದ ಒಟ್ಟಾರೆ ಗಳಿಕೆ 28.95 ಕೋಟಿ ರೂ. ಎನ್ನುವ ಅಂಕಿ ಅಂಶ ಹೊರ ಬಿದ್ದಿದೆ.

'777 ಚಾರ್ಲಿ' ಒಟ್ಟಾರೆ 4 ದಿನದ ಗಳಿಕೆ!
ಕಳೆದ ನಾಲ್ಕು ದಿನಗಳಲ್ಲಿ '777 ಚಾರ್ಲಿ' ಗಳಿಕೆ ಹೇಗಿದೆ ಎನ್ನುವುದರ ಅಂದಾಜಿನ ಲೆಕ್ಕಾರ ಇಲ್ಲಿದೆ.
ದಿನ 1: ₹ 6.27 ಕೋಟಿ
ದಿನ 2: ₹ 7.87 ಕೋಟಿ
ದಿನ 3: ₹ 10.01 ಕೋಟಿ
ದಿನ 4: ₹ 4.80 ಕೋಟಿ
ಒಟ್ಟಾರೆ: ₹ 28.95 ಕೋಟಿ ರೂ.


Click it and Unblock the Notifications











