For Quick Alerts
  ALLOW NOTIFICATIONS  
  For Daily Alerts

  ಬೋನಿ ಕಪೂರ್ ಮೆಚ್ಚಿದ '777 ಚಾರ್ಲಿ': 5ನೇ ದಿನದ ಕಲೆಕ್ಷನ್ ಎಷ್ಟು?

  |

  ಕನ್ನಡದ '777 ಚಾರ್ಲಿ' ಸಿನಿಮಾ ಜೂನ್ 10ರಂದು ರಿಲೀಸ್ ಆಗಿದೆ. ನಿರೀಕ್ಷೆಯೊಂದಿಗೆ ತೆರೆಕಂಡ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಯಾವ ಕಮರ್ಷಿಯಲ್ ಸಿನಿಮಾಗೂ ಕಡಿಮೆ ಇಲ್ಲದ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

  ಚಾರ್ಲಿಯ ಮನಕಲುಕುವ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಿಲೀಸ್‌ಗೂ ಬಳಿಕ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿವೆ. ವಿಭಿನ್ನವಾಗಿ ಗಮನ ಸೆಳೆದಿದೆ '777 ಚಾರ್ಲಿ' ನಿರೀಕ್ಷೆಯಂತೆ ಉತ್ತಮ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿದೆ.

  '777 ಚಾರ್ಲಿ' 4ನೇ ದಿನದ ಕಲೆಕ್ಷನ್: ಬಜೆಟ್ ಮೊತ್ತ ಇನ್ನು ಬಾಕಿ ಇದೆ!'777 ಚಾರ್ಲಿ' 4ನೇ ದಿನದ ಕಲೆಕ್ಷನ್: ಬಜೆಟ್ ಮೊತ್ತ ಇನ್ನು ಬಾಕಿ ಇದೆ!

  ಇದು ಭಾವನೆಗಳ ಭಾಷೆ ಆದ ಕಾರಣ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಇನ್ನು ಬಾಲಿವುಡ್‌ ಚಿತ್ರರಂಗದಿಂದಲೂ ಕೂಡ ಚಾರ್ಲಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಚಾರ್ಲಿಗೆ ಭೇಷ್ ಎಂದಿದ್ದಾರೆ.

  ಬಾಲಿವುಡ್‌ನಿಂದ ಚಾರ್ಲಿಗೆ ಪ್ರಶಂಸೆ!

  ಬಾಲಿವುಡ್‌ನಿಂದ ಚಾರ್ಲಿಗೆ ಪ್ರಶಂಸೆ!

  '777 ಚಾರ್ಲಿ' ಸಿನಿಮಾ 'ಕೆಜಿಎಫ್'ನಂತೆ ಮಾಸ್‌ ಆಗಿ ಅಬ್ಬರಿಸಲಿಲ್ಲ. ಆದರೆ ಕ್ಲಾಸ್ ಆಗಿ ನಿಧಾನವಾಗಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಈಗ ಬಾಲಿವುಡ್‌ನಿಂದಲೂ '777 ಚಾರ್ಲಿ'ಗೆ ಪ್ರಶಂಸೆ ವ್ಯಕ್ತವಾಗಿದೆ. ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್ ಚಾರ್ಲಿಯನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. "ಉತ್ತಮ ಸಿನಿಮಾ ತನ್ನ ಪ್ರೇಕ್ಷಕರನ್ನು ಗಳಿಸಿಕೊಳ್ಳುತ್ತದೆ. ಉತ್ತಮ ಪ್ರಶಂಸೆ ಪಡೆದಿದ್ದಕ್ಕೆ ರಕ್ಷಿತ್ ಮತ್ತು ಕಿರಣ್ ರಾಜ್‌ಗೆ ಶುಭಾಶಯಗಳು. '777 ಚಾರ್ಲಿ' ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳನ್ನು ಕೇಳಿದ್ದೇನೆ." ಎಂದು ಬರೆದುಕೊಂಡಿದ್ದಾರೆ.

  ನಾಗಾಲೋಟದಲ್ಲಿ '777 ಚಾರ್ಲಿ': ಶನಿವಾರ ಗಳಿಸಿದ್ದೆಷ್ಟು?ನಾಗಾಲೋಟದಲ್ಲಿ '777 ಚಾರ್ಲಿ': ಶನಿವಾರ ಗಳಿಸಿದ್ದೆಷ್ಟು?

  ಚಾರ್ಲಿ 5ನೇ ದಿನದ ಕಲೆಕ್ಷನ್ ಔಟ್!

  ಚಾರ್ಲಿ 5ನೇ ದಿನದ ಕಲೆಕ್ಷನ್ ಔಟ್!

  '777 ಚಾರ್ಲಿ' ಚಿತ್ರದ ಬಾಕ್ಸಾಫೀಸ್ ಬೇಟೆ ಮುಂದುವರೆದಿದೆ. ವಾರಂತ್ಯ ಕಳೆದರು, ಸೋಮವಾರ ಮತ್ತು ಮಂಗಳವಾರ ಉತ್ತಮ ಕಲೆಕ್ಷನ್ ಕಲೆಹಾಕಿದೆ. '777 ಚಾರ್ಲಿ' ಚಿತ್ರದ ಮಂಗಳವಾರದ ಗಳಿಕೆ ಸ್ಥಿರವಾಗಿದೆ. ಮಂಗಳವಾರ, 5ನೇ ದಿನ 4 ಕೋಟಿ ರೂ. ಕಲೆಹಾಕಿದೆ. ಹಾಗಾಗಿ ಚಿತ್ರದ ಒಟ್ಟಾರೆ ಗಳಿಕೆ 32.7 ಕೋಟಿ ರೂ ಆಗಿದೆ.

  ಲಾಭದಲ್ಲಿದೆ ಚಾರ್ಲಿ ಟೀಂ!

  ಲಾಭದಲ್ಲಿದೆ ಚಾರ್ಲಿ ಟೀಂ!

  '777 ಚಾರ್ಲಿ' ಚಿತ್ರಕ್ಕೆ 30 ಕೋಟಿ ರೂ. ಬಜೆಟ್ ಹಾಕಲಾಗಿದೆ ಎನ್ನಲಾಗಿದೆ. 5ನೇ ದಿನಕ್ಕೆ ಚಿತ್ರಕ್ಕೆ ಸುರಿದ ಹಣ ಹಿಂತಿರುಗಿದೆ. 5ನೇ ದಿನಕ್ಕೆ ಚಾರ್ಲಿ ಗಳಿಕೆ 32 ಕೋಟಿ ದಾಟಿದೆ. ಹಾಗಾಗಿ ಕಲೆಕ್ಷನ್ ಮೂಲಕ ಬಂಡವಾಳವನ್ನು ಹಿಂಪಡೆದಿದೆ ಚಾರ್ಲಿ. ಇನ್ನು ಚಿತ್ರ ರಿಲೀಗೂ ಮುನ್ನವೇ, ಪ್ರೀ ರಿಲೀಸ್ ಬ್ಯೂಸಿನೆಸ್ ಮಾಡಿ ಲಾಭ ಮಾಡಿಕೊಂಡಿದೆ. ಆದರೀಗ ಚಿತ್ರದ ಗಳಿಕೆ ಹೆಚ್ಚಾಗಿದ್ದು ಲಾಭದ ಖುಷಿಯಲ್ಲಿದೆ ಚಿತ್ರತಂಡ.

  ನಿರೀಕ್ಷೆ ತಲುಪಿದ್ರಾ ರಕ್ಷಿತ್ ಶೆಟ್ಟಿ: '777 ಚಾರ್ಲಿ' ಮೊದಲ ದಿನ ಗಳಿಸಿದ್ದೆಷ್ಟು?ನಿರೀಕ್ಷೆ ತಲುಪಿದ್ರಾ ರಕ್ಷಿತ್ ಶೆಟ್ಟಿ: '777 ಚಾರ್ಲಿ' ಮೊದಲ ದಿನ ಗಳಿಸಿದ್ದೆಷ್ಟು?

  '777 ಚಾರ್ಲಿ' ಒಟ್ಟಾರೆ 5 ದಿನದ ಗಳಿಕೆ!

  '777 ಚಾರ್ಲಿ' ಒಟ್ಟಾರೆ 5 ದಿನದ ಗಳಿಕೆ!

  ಕಳೆದ 5 ದಿನಗಳಲ್ಲಿ '777 ಚಾರ್ಲಿ' ಗಳಿಕೆ ಹೇಗಿದೆ ಎನ್ನುವುದರ ಅಂದಾಜು ಲೆಕ್ಕಾಚಾರ ಇಲ್ಲಿದೆ.


  ದಿನ 1: ₹ 6.27 ಕೋಟಿ

  ದಿನ 2: ₹ 7.87 ಕೋಟಿ

  ದಿನ 3 :₹ 10.01 ಕೋಟಿ

  ದಿನ 4 :₹ 4.55 ಕೋಟಿ

  ದಿನ 5 :₹ 4.00 ಕೋಟಿ

  ಒಟ್ಟಾರೆ: ₹ 32.7 ಕೋಟಿ

  English summary
  Rakshit Shetty Starrer 777 Charlie Day 5 Box Office Collection, Bollywood Impress By 777 Charlie,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X