6ನೇ ದಿನದ '777 ಚಾರ್ಲಿ' ಗಳಿಕೆ ಎಷ್ಟು?: 50 ಕೋಟಿ ದಾಟೋದ್ಯಾವಾಗ?

ನಟ ರಕ್ಷಿತ್ ಅಭಿನಯದ '777 ಚಾರ್ಲಿ' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿಧಾನವಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಈಗ ಚಾರ್ಲಿಗೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ನಿರ್ಮಾಪಕ ಬೋನಿ ಕಪೂರ್, ನಟ ಜಾನ್ ಅಬ್ರಾಹಂ ಸೇರಿದಂತೆ ಹಲವರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ.

ಜೂನ್ 10ರಂದು ತೆರೆಕಂಡ ಈ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಹೇಳಲಾಗಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಚಾರ್ಲಿ ನಾಯಿ ಕೂಡ ಸದ್ಯ ಹೀರೋ ಆಗಿ ಮಿಂಚುತ್ತಿದೆ.

ಸಿನಿಮಾ ಕಂಟೆಂಟ್ ಮೂಲಕವೇ ಸದ್ದು ಮಾಡುತ್ತಿದೆ. ಪ್ರೇಕ್ಷಕರನ್ನು ಅಳಿಸುವಲ್ಲಿ ಚಾರ್ಲಿ ಬಾಕ್ಸಾಫಿಸ್‌ನಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಚಾರ್ಲಿ ಗಳಿಕೆ ಕೂಡ ಉತ್ತಮ ರೀತಿಯಲ್ಲಿ ಸಾಗುತ್ತಾ ಇದೆ. 50 ಕೋಟಿ ಕಲೆ ಹಾಕುವತ್ತ ಚಾರ್ಲಿ ಸಾಗಿದೆ. 6 ದಿನಕ್ಕೆ ಚಾರ್ಲಿ ಗಳಿಸಿದ್ದೆಷ್ಟು ಎನ್ನುವ ಡಿಟೈಲ್ಸ್ ಇಲ್ಲಿದೆ. ಮುಂದೆ ಓದಿ.

'777 ಚಾರ್ಲಿ' ಬಾಕ್ಸಾಫೀಸ್ ಗಳಿಕೆ ಸೂಪರ್!

'777 ಚಾರ್ಲಿ' ಬಾಕ್ಸಾಫೀಸ್ ಗಳಿಕೆ ಸೂಪರ್!

ಮೊದಲ ದಿನ 6 ಕೋಟಿಗೂ ರೂ.ಗಿಂತಲೂ ಅಧಿಕ ಗಳಿಕೆ ಕಂಡಿದೆ '777 ಚಾರ್ಲಿ'. ದಿನೇ ದಿನೇ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಚಿತ್ರದ ರಿಲೀಸ್ ಆಗಿ 6 ದಿನಗಳು ಕಳೆದಿದೆ. ಆರನೇ ದಿನಕ್ಕೆ '777 ಚಾರ್ಲಿ' 35 ಕೋಟಿ ರೂ ಗಡಿ ದಾಟಿದೆ. ಸದ್ಯ 6ನೇ ದಿನಕ್ಕೆ ಚಾರ್ಲಿ ಗಳಿಕೆ ಎಷ್ಟು ಎನ್ನುವ ಬಗ್ಗೆ ಲೆಕ್ಕಾಚಾರ ಹೊರ ಬಿದ್ದಿದೆ.

6 ದಿನಕ್ಕೆ ಚಾರ್ಲಿ 35 ಕೋಟಿ ರೂ!

6 ದಿನಕ್ಕೆ ಚಾರ್ಲಿ 35 ಕೋಟಿ ರೂ!

'777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತೆಕಂಡಿದೆ. ಚಿತ್ರತಂಡ ನಿರೀಕಕ್ಷೆಯಂತೆ ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಹೆಚ್ಚಾಗುತ್ತಲೆ ಇದೆ. ವಾರಾಂತ್ಯದಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗಿದ್ದು. ಒಟ್ಟಾರೆ ಮೊದಲ ವೀಕೆಂಡ್ ಸೇರಿ, ಮೊದಲ 6 ದಿನದ ಗಳಿಗೆ 35.70 ಕೋಟಿ ರೂ. ಗಳಿಕೆ ಕಂಡಿದೆ ಎನ್ನುವ ಅಂಕಿ ಅಂಶ ಹೊರ ಬಿದ್ದಿದೆ.

ಚಾರ್ಲಿ 6ನೇ ದಿನದ ಕಲೆಕ್ಷನ್ ಔಟ್!

ಚಾರ್ಲಿ 6ನೇ ದಿನದ ಕಲೆಕ್ಷನ್ ಔಟ್!

'777 ಚಾರ್ಲಿ' ಚಿತ್ರದ ಬಾಕ್ಸಾಫೀಸ್ ಬೇಟೆ ಮುಂದುವರೆದಿದೆ. ವಾರಂತ್ಯ ಕಳೆದರು, ಸೋಮವಾರ ಮತ್ತು ಮಂಗಳವಾರಕ್ಕೆ ಹೋಲಿಸಿದರೆ ಬುಧವಾರದ ಗಳಿಕೆ ಕೊಂಚ ಇಳಿಮುಖ ಕಂಡಿದೆ. ಆದರೆ ಒಟ್ಟಾರೆ ಕಲೆಕ್ಷನ್‌ಗೆ ಉತ್ತಮ ಕೊಡುಗೆ ನೀಡಿದೆ. '777 ಚಾರ್ಲಿ' 6ನೇ ದಿನ 3.50 ಕೋಟಿ ರೂ. ಕಲೆಹಾಕಿದೆ. ಹಾಗಾಗಿ ಚಿತ್ರದ ಒಟ್ಟಾರೆ ಗಳಿಕೆ 35.50 ಕೋಟಿ ರೂ ಆಗಿದೆ.

'777 ಚಾರ್ಲಿ' 6 ದಿನದ ಗಳಿಕೆ!

'777 ಚಾರ್ಲಿ' 6 ದಿನದ ಗಳಿಕೆ!

ಕಳೆದ 6 ದಿನಗಳಲ್ಲಿ '777 ಚಾರ್ಲಿ' ಗಳಿಕೆ ಹೇಗಿದೆ ಎನ್ನುವುದರ ಅಂದಾಜಿನ ಲೆಕ್ಕಾರ ಇಲ್ಲಿದೆ.


ದಿನ 1: ₹ 6.27 ಕೋಟಿ

ದಿನ 2: ₹ 7.87 ಕೋಟಿ

ದಿನ 3 :₹ 10.01 ಕೋಟಿ

ದಿನ 4 :₹ 4.55 ಕೋಟಿ

ದಿನ 5 :₹ 4.00 ಕೋಟಿ

ದಿನ 5 :₹ 3.50 ಕೋಟಿ

ಒಟ್ಟಾರೆ: ₹ 35.50 ಕೋಟಿ

More from Filmibeat

English summary
Rakshit Shetty Starrer 777 Charlie Day 3 Box Office Collection, Cross 35 Crore Collection,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X