twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವದಾದ್ಯಂತ '777 ಚಾರ್ಲಿ'ಯ 10 ದಿನದ ಕಲೆಕ್ಷನ್ ಎಷ್ಟು? ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು ಗೆಲುವಾ? ಸೋಲಾ?

    |

    ಮತ್ತೆ ಕನ್ನಡ ಸಿನಿಮಾಗಳ ಪರ್ವ ಆರಂಭ ಆಗಿದೆ. 'ಕೆಜಿಎಫ್ 2' ಬಳಿಕ ತೆರೆಕಂಡಿದ್ದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'. ಎರಡು ಸಿನಿಮಾಗಳ ಶೈಲಿ ಬೇರೆ ಬೇರೆ. 'ಕೆಜಿಎಫ್ 2' ಬಿಗ್ ಬಜೆಟ್ ಸಿನಿಮಾ. ಜೊತೆಗೆ ಮಾಸ್ ಸ್ಟೋರಿ ಇತ್ತು. ಆದರೆ '777 ಚಾರ್ಲಿ' ಹಾಗಲ್ಲ. ಇದು ಸ್ಮಾಲ್ ಬಜೆಟ್ ಸಿನಿಮಾ ಆಗಿದ್ದರೂ ಪಕ್ಕಾ ಎಮೋಷನಲ್.

    ಈ ಕಾರಣಕ್ಕೆ ಸ್ಮಾಲ್ ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಗೆಲ್ಲುತ್ತಾ? ದೇಶಾದ್ಯಂತ ಸದ್ದು ಮಾಡುತ್ತಾ? ಅನ್ನೋ ಕುತೂಹಲವಿತ್ತು. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ. '777 ಚಾರ್ಲಿ'ಯ ಬಾಕ್ಸಾಫೀಸ್‌ ರಿಸಲ್ಟ್ ಏನು ಅನ್ನೋದು ರಿವೀಲ್ ಆಗಿದೆ.

    '777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!'777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!

    Recommended Video

    777 Charlie Collection | '777 ಚಾರ್ಲಿ' ವೀಕೆಂಡ್ ಕಲೆಕ್ಷನ್ ಎಷ್ಟು?

    ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಕಾಂಬಿನೇಷನ್‌ ಸಿನಿಮಾ '777 ಚಾರ್ಲಿ' ಬಿಡುಗಡೆಯಾಗಿ 11 ದಿನಗಳಾಗಿವೆ. ಮೊದಲ ಎರಡು ವೀಕೆಂಡ್ ಈ ಸಿನಿಮಾಗೆ ತುಂಬಾನೇ ಮುಖ್ಯ ಆಗಿತ್ತು. ಸಿನಿಮಾ ಆರಂಭದಲ್ಲಿ ನಿಧಾನವಾಗಿ ಟೇಕ್ ಆಫ್ ಆಗಿತ್ತು. ಆದರೆ, ಟಾಕ್ ಆಫ್ ಮೌತ್‌ನಿಂದ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಎಷ್ಟಾಗಿದೆ? ಪ್ರಯೋಗಾತ್ಮಕ ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ಗೆದ್ದಿದ್ದಾರಾ? ಇಲ್ಲಾ ಸೋತಿದ್ದಾರಾ? ಟ್ರೇಡ್ ಅನಲಿಸ್ಟ್ ಏನಂತಾರೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

    '777 ಚಾರ್ಲಿ' 10ನೇ ದಿನ ಗಳಿಸಿದ್ದೆಷ್ಟು?

    '777 ಚಾರ್ಲಿ' 10ನೇ ದಿನ ಗಳಿಸಿದ್ದೆಷ್ಟು?

    ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಕಾಂಬಿನೇಷನ್‌ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಗೆದ್ದಿದೆ. '777 ಚಾರ್ಲಿ' ಕಲೆಕ್ಷನ್ ಕಳೆದ 10 ದಿನಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಎರಡನೇ ವೀಕೆಂಡ್‌ನಲ್ಲಿ '777 ಚಾರ್ಲಿ' ಸಿನಿಮಾ ಕಲೆಕ್ಷನ್ ದಿಢೀರನೇ ಏರಿಕೆಯಾಗಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಈ ಸಿನಿಮಾ 10ನೇ ದಿನ ಹಿಂದೆಂದಿಗಿಂತಲೂ ಹೆಚ್ಚು ಗಳಿಕೆ ಕಂಡಿದೆ. 10ನೇ ದಿನ '777 ಚಾರ್ಲಿ' ಸುಮಾರು 8.30 ಕೋಟಿ ರೂ. ಕಲೆಕ್ಷನ್ ಮಾಡಿದೆ.

    '777 ಚಾರ್ಲಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಸರ್ಕಾರ'777 ಚಾರ್ಲಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಸರ್ಕಾರ

    10 ದಿನಗಳಲ್ಲಿ '777 ಚಾರ್ಲಿ' ಗಳಿಸಿದ್ದೆಷ್ಟು?

    10 ದಿನಗಳಲ್ಲಿ '777 ಚಾರ್ಲಿ' ಗಳಿಸಿದ್ದೆಷ್ಟು?

    ರಕ್ಷಿತ್ ಶೆಟ್ಟಿಯ ಸಿನಿಮಾ 10 ದಿನಗಳ ಒಟ್ಟು ಗಳಿಕೆ 50 ಕೋಟಿ ರೂ. ದಾಟಿದೆ. ಈ ಮೂಲಕ ವಿಶ್ವದಾದ್ಯಂತ ಚಾರ್ಲಿಯ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಎರಡನೇ ವಾರಾಂತ್ಯದಲ್ಲಿ ಸಿನಿಮಾದ ಕಲೆಕ್ಷನ್ ಏರಿಕೆಯಾಗಿದ್ದು ಚಿತ್ರತಂಡಕ್ಕೆ ಹೊಸ ಹುರುಪು ಮೂಡಿಸಿದೆ. ವಿಶ್ವದಾದ್ಯಂತ 10 ದಿನಗಳಲ್ಲಿ ಚಾರ್ಲಿ ಸಿನಿಮಾದ ಕಲೆಕ್ಷನ್ ಹೀಗಿದೆ.

    ಮೊದಲ ವಾರ 38.75 ಕೋಟಿ ರೂ.

    2ನೇ ಶುಕ್ರವಾರ 3.45 ಕೋಟಿ ರೂ.
    2ನೇ ಶನಿವಾರ 6.80 ಕೋಟಿ ರೂ.
    2ನೇ ಭಾನುವಾರ 8.30 ಕೋಟಿ ರೂ

    ಒಟ್ಟು 57.30 ಕೋಟಿ ರೂ.

    ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಗಳಿಕೆ?

    ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಗಳಿಕೆ?

    '777 ಚಾರ್ಲಿ' ಕಲೆಕ್ಷನ್ ಬಗ್ಗೆ ಇಡೀ ಭಾರತವೇ ಎದುರು ನೋಡುತ್ತಿತ್ತು. ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ ಅನ್ನೋ ಕುತೂಹಲವಿತ್ತು. ಎರಡು ವಾರಗಳಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿದೆ.

    ಕರ್ನಾಟಕ 44.64 ಕೋಟಿ ರೂ. ( Updated)
    ಆಂಧ್ರ/ತೆಲಂಗಾಣ 4.00 ಕೋಟಿ ರೂ.
    ಕೇರಳ 2.60 ಕೋಟಿ ರೂ.
    ತಮಿಳುನಾಡು 2.00 ಕೋಟಿ ರೂ.
    ಉತ್ತರ ಭಾರತ 4.06 ಕೋಟಿ ರೂ.

    ಒಟ್ಟು 57.30 ಕೋಟಿ ರೂ.

    '777 ಚಾರ್ಲಿ' 8ನೇ ದಿನಕ್ಕೆ 50 ಕೋಟಿ: ಭಾರತದ ಗಳಿಕೆ ಎಷ್ಟು?'777 ಚಾರ್ಲಿ' 8ನೇ ದಿನಕ್ಕೆ 50 ಕೋಟಿ: ಭಾರತದ ಗಳಿಕೆ ಎಷ್ಟು?

    ರಕ್ಷಿತ್ ಶೆಟ್ಟಿ ಗೆದ್ರಾ? ಸೋತ್ರಾ?

    ರಕ್ಷಿತ್ ಶೆಟ್ಟಿ ಗೆದ್ರಾ? ಸೋತ್ರಾ?

    '777 ಚಾರ್ಲಿ' ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿದೆ. ಸ್ಮಾಲ್ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದರಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. 10 ದಿನಗಳಲ್ಲಿ 57 ಕೋಟಿ ರೂ. ಗಳಿಸಿದ್ದು, ಒಳ್ಳೆ ಕಲೆಕ್ಷನ್ ಎಂದೇ ಹೇಳಲಾಗುತ್ತಿದೆ. ಒಂದು ವರ್ಗದ ಆಡಿಯನ್ಸ್ ಇಟ್ಕೊಂಡು ಭಾರತದ ಜನಮನಗೆದ್ದಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ರಕ್ಷಿತ್ ಶೆಟ್ಟಿ ಗೆದ್ದಿದ್ದು, ಇನ್ನು ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಹೆಚ್ಚಾದರೆ ಬಾಕ್ಸಾಫೀಸ್‌ನಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ಜಾದು ಮಾಡಲಿದೆ.

    English summary
    Rakshit Shetty Starrer 777 Charlie Movie Day 10 Boxoffice Collection Report , Know More.
    Monday, June 20, 2022, 15:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X