For Quick Alerts
  ALLOW NOTIFICATIONS  
  For Daily Alerts

  5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ '777 ಚಾರ್ಲಿ' ಸಿನಿಮಾದ ಟ್ರೈಲರ್

  |

  ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಬಹುನೀರಿಕ್ಷಿತ ಸಿನಿಮಾ '777 ಚಾರ್ಲಿ' ರಿಲೀಸ್‌ ಆಗಲು ಸಜ್ಜಾಗಿದೆ. ಈಗಾಗಲೇ ಹಾಡು, ಹಾಗೂ ಪೋಸ್ಟರ್‌ಗಳಿಂದ ಜನರ ಗಮನ ಸೆಳೆದಿರುವ ಸಿನಿಮಾ, ಈಗ ಸಿನಿಮಾದ ಟ್ರೈಲರ್‌ ಮೇಲೆ ನಿರೀಕ್ಷೆಯನ್ನ ಹೆಚ್ಚಿಸಿದೆ.

  Recommended Video

  777 Charlie ಟ್ರೈಲರ್ ಗೆ ಸೆಲೆಬ್ರೆಟಿಗಳಿಂದ ಮೆಚ್ಚುಗೆ | Rakshit Shetty | Kiranraj K

  ಇದು ದಕ್ಷಿಣ ಭಾರತದ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಕೆಜಿಎಫ್‌ 2 ನಂತರ ಮತ್ತೊಂದು ಭರವಸೆಯ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ಕೂಡ ಬಾಲಿವುಡ್ ಅಂಗಳದಲ್ಲಿ ಅಬ್ಬರಿಸುವ ಎಲ್ಲಾ ಸಾಧ್ಯತೆ ಇದೆ.

  ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾದ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾದ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

  ಸದ್ಯ ಹಾಡು, ಟೀಸರ್‌ ಮೂಲಕ ರಂಜಿಸಿದ್ದ ಸಿನಿಮಾ ಈಗ ಟ್ರೈಲರ್‌ ಮೂಲಕ ಸಿನಿಮಾ ಮೇಲಿನ ಮತ್ತಷ್ಟು ನೀರಿಕ್ಷೆಯನ್ನ ಹೆಚ್ಚಿಸಲು ಬರುತ್ತಿದೆ. ಇಂದು (ಮೇ 16) ಮಧ್ಯಾಹ್ನ 12.12 ಕ್ಕೆ '777 ಚಾರ್ಲಿ' ಸಿನಿಮಾದ ಟ್ರೇಲರ್‌ 5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಏಕಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಆಯಾ ಭಾಷೆಯ ಸ್ಟಾರ್ ನಟರು ಸಿನಿಮಾದ ಟ್ರೈಲರ್‌ನ್ನು ರಿಲೀಸ್‌ ಮಾಡಲಿದ್ದಾರೆ.

   ಸಾಯಿ ಪಲ್ಲವಿಯಿಂದ '777 ಚಾರ್ಲಿ' ಚಿತ್ರದ ಟ್ರೈಲರ್ ರಿಲೀಸ್

  ಸಾಯಿ ಪಲ್ಲವಿಯಿಂದ '777 ಚಾರ್ಲಿ' ಚಿತ್ರದ ಟ್ರೈಲರ್ ರಿಲೀಸ್

  ಇಂದು ಮಧ್ಯಾಹ್ನ ಐದು ಭಾಷೆಗಳಲ್ಲಿ '777 ಚಾರ್ಲಿ'ಯ ಟ್ರೈಲರ್ ರಿಲೀಸ್‌ ಆಗಲಿದೆ. ವಿಶೇಷ ಅಂದರೆ ಈ ಬಾರಿ ರಕ್ಷಿತ್ ಶೆಟ್ಟಿ ಸಿನಿಮಾಗೆ ನಟಿ ಸಾಯಿ ಪಲ್ಲವಿ ಸಾಥ್ ನೀಡಿದ್ದಾರೆ. ತೆಲುಗಿನಲ್ಲಿ ಸಾಯಿ ಪಲ್ಲವಿ ಚಿತ್ರದ ಟ್ರೈಲರ್ ರಿಲೀಸ್ ಮಾಡಲಿದ್ದಾರೆ. ನಟಿ ಸಾಯಿಪಲ್ಲವಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅದರಲ್ಲೂ ಗಾರ್ಗಿ ಸಿನಿಮಾದಲ್ಲಿ ಕನ್ನಡದಲ್ಲೇ ಸ್ವತಃ ಸಾಯಿ ಪಲ್ಲವಿ ಡಬ್ ಮಾಡುವ ಮೂಲಕ ಕನ್ನಡಿಗರ ಮನಸ್ಸನ್ನ ಗೆದ್ದಿದ್ದರು. ಈಗ ಮತ್ತೆ '777 ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇನ್ನು ಸಾಯಿ ಪಲ್ಲವಿಗೆ ನಟ ವೆಂಕಟೇಶ್, ಲಕ್ಷ್ಮೀ ಮಂಚು ಕೂಡ ಸಾಥ್ ನೀಡಲಿದ್ದಾರೆ.

  ರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿ ಶಭಾಸ್ ಎಂದ ರಾಣಾ ದಗ್ಗುಬಾಟಿರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿ ಶಭಾಸ್ ಎಂದ ರಾಣಾ ದಗ್ಗುಬಾಟಿ

   5 ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ

  5 ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ

  '777 ಚಾರ್ಲಿ' ಸಿನಿಮಾ ಮೇಲೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿರುವ ಚಾರ್ಲಿ ಹಾಗೂ ಧರ್ಮ ಇಬ್ಬರ ನಡುವಿನ ಬಾಂಧವ್ಯ ಹೇಗೆ ಇರಲಿದೆ ಎಂಬ ನಿರೀಕ್ಷೆಗಳು ಈಗಾಗಲೇ ಟೀಸರ್, ಹಾಡುಗಳಲ್ಲಿ ತಿಳಿದಿದೆ. ಆದರೆ, ಟ್ರೈಲರ್‌ನಲ್ಲಿ ಮತ್ತಷ್ಟು ವಿಭಿನ್ನವಾಗಿ ಪಾತ್ರಗಳು ಕಾಣಿಸಲಿದ್ದು, ಸಿನಿಮಾ ಮೇಲಿನ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿದೆ. ಸದ್ಯ ಮಧ್ಯಾಹ್ನ 12.12 ಕ್ಕೆ ಏಕಕಾಲದಲ್ಲಿ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡ ಸೇರಿದಂತೆ ತೆಲುಗಿನಲ್ಲಿ ನಟಿ ಸಾಯಿ ಪಲ್ಲವಿ, ವೆಂಕಟೇಶ್, ಲಕ್ಷ್ಮೀ ಮಂಚು ರಿಲೀಸ್‌ ಮಾಡಲಿದ್‌ದಾರೆ. ತಮಿಳಿನಲ್ಲಿ ಧನುಷ್, ಮಲಯಾಳಂನಲ್ಲಿ ನಿವಿನ್ ಪೌಲಿ, ಟೊವಿನೋ ಧಾಮಸ್ ಇತರರು ಬಿಡುಗಡೆ ಮಾಡಲಿದ್ದಾರೆ.

   ಜೂನ್‌ 10 ವಿಶ್ವದ್ಯಾಂತ '777 ಚಾರ್ಲಿ' ಹಾರಾಟ

  ಜೂನ್‌ 10 ವಿಶ್ವದ್ಯಾಂತ '777 ಚಾರ್ಲಿ' ಹಾರಾಟ

  ಕಿರಣ್‌ ರಾಜು ನಿರ್ದೇಶನ ಮಾಡಿರುವ '777 ಚಾರ್ಲಿ' ಸಿನಿಮಾ ಜೂನ್ 10 ಕ್ಕೆ ಎಲ್ಲಾ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಕೆಜಿಎಫ್‌ 2 ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, 5 ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಸದ್ಯ ಕೆಜಿಎಫ್ 2 ಈಗಲೂ ಕೂಡ ಥಿಯೇಟರ್‌ಗಳಲ್ಲಿ ತನ್ನ ಆರ್ಭಟ ಮುಂದುವರೆಸಿದೆ. ಈಗ '777 ಚಾರ್ಲಿ' ಸಿನಿಮಾ ಕೂಡ ವಿಶ್ವದಾದ್ಯಂತ ಅಬ್ಬರಿಸಲು ಸಜ್ಜಾಗಿದ್ದು, ಕೆಜಿಎಫ್‌ 2 ನಂತೆ ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಸದ್ದ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಪ್ರೇಕ್ಷಕರಿಗೆ ಸಿನಿಮಾ ಮೇಲಿನ ನೀರಿಕ್ಷೇ ಹೆಚ್ಚಾಗಿದ್ದು, ಚಾರ್ಲಿ ಹಾಗೂ ಧರ್ಮ ಪಾತ್ರಗಳನ್ನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

  'ಪುಷ್ಪ' ಬಳಿಕ ಯೂಟ್ಯೂಬ್ ಆರಂಭಿಸಿದ ರಶ್ಮಿಕಾ 'ಮಾಜಿ ಬಾಯ್‌ಫ್ರೆಂಡ್' ಬಗ್ಗೆ ಹೇಳಿದ್ದೇನು?'ಪುಷ್ಪ' ಬಳಿಕ ಯೂಟ್ಯೂಬ್ ಆರಂಭಿಸಿದ ರಶ್ಮಿಕಾ 'ಮಾಜಿ ಬಾಯ್‌ಫ್ರೆಂಡ್' ಬಗ್ಗೆ ಹೇಳಿದ್ದೇನು?

   '777 ಚಾರ್ಲಿ'ಗೆ ಫುಲ್ ಮಾರ್ಕ್ಸ್ ಕೊಟ್ಟ ರಾಣಾ ದಗ್ಗು ಬಾಟಿ

  '777 ಚಾರ್ಲಿ'ಗೆ ಫುಲ್ ಮಾರ್ಕ್ಸ್ ಕೊಟ್ಟ ರಾಣಾ ದಗ್ಗು ಬಾಟಿ

  ಈಗಾಗಲೇ '777 ಚಾರ್ಲಿ' ಸಿನಿಮಾ ನೋಡಿರುವ ರಾಣಾ ದಗ್ಗುಬಾಟಿ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಅವರು ಎಂತಹ ಅದ್ಬುತ ಸಿನಮಾ, ಒಟ್ಟಾರೆ ಹೊಸತನದಿಂದ ಕೂಡಿರುವ ಸಿನಿಮಾಇದು, ಈ ಸಿನಿಮಾ ನೋಡುವ ಅವಕಾಶ ನನಗೆ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ ಈ ಚಿತ್ರದ ವಿತರಣಾ ಹಕನ್ನ ರಾಣಾ ದಗ್ಗಬಾಟಿ ಹೊತ್ತಿದ್ದಾರೆ. ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು, ಮಲಯಾಳಂನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಚಿತ್ರ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಹಿಂದಿಯಲ್ಲಿ ವಿತರಣೆ ಹಕ್ಕು ಯುಎಫ್‌ಓ ಪಾಲಾಗಿದೆ . ಒಟ್ಟಿನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾವನ್ನ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಜವಾಬ್ಗಾರಿಯನ್ನ ರಾಣಾ ದಗ್ಗುಬಾಟಿ ಹೊತ್ತಿದ್ದಾರೆ.

  English summary
  Actor Rakshit Shetty starrer pan india movie 777 charlie trailer releasing in 5 languages today at 12.12 pm. Sai Pallavi, Venkatesh, Dhanusha to launch trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X