twitter
    For Quick Alerts
    ALLOW NOTIFICATIONS  
    For Daily Alerts

    '777 ಚಾರ್ಲಿ' 14ನೇ ದಿನ ಕಲೆಕ್ಷನ್ ಎಷ್ಟು? 75 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದ್ದಾಯ್ತಾ?

    |

    'ಅವನೇ ಶ್ರೀಮನ್ನಾರಾಯಣ' ಸೋಲಿನ ಬಳಿಕ ರಕ್ಷಿತ್ ಶೆಟ್ಟಿಗೆ ಬ್ಲಾಕ್‌ಬಸ್ಟರ್ ಸಿನಿಮಾವೊಂದು ಸಿಕ್ಕಿದೆ. ' 777 ಚಾರ್ಲಿ' ಫ್ಯಾಮಿಲಿ ಆಡಿಯನ್ಸ್ ಮನಗೆದ್ದಿದೆ. ಸಿನಿಮಾ ರಿಲೀಸ್ ಆದ ದಿನದಿಂದಲೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಗ್ಗದೆ ಉಳಿದುಕೊಂಡಿದೆ.

    ಜೂನ್ 10 ರಂದು ಬಿಡುಗಡೆಯಾಗಿದ್ದ ಸಿನಿಮಾ ಜನರಿಂದ ಜನರಿಗೆ ಹಬ್ಬಿ ಫ್ಯಾಮಿಲಿ ಆಡಿಯನ್ಸ್ ಅನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿತ್ತು. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿಯ ಕಾಂಬಿನೇಷನ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

    12ನೇ ದಿನ '777 ಚಾರ್ಲಿ' ವಿಶ್ವದಾದ್ಯಂತ ಗಳಿಸಿದ್ದೆಷ್ಟು? 100 ಕೋಟಿ ರೂ.ಗೆ ಇನ್ನೆಷ್ಟು ಬೇಕು?12ನೇ ದಿನ '777 ಚಾರ್ಲಿ' ವಿಶ್ವದಾದ್ಯಂತ ಗಳಿಸಿದ್ದೆಷ್ಟು? 100 ಕೋಟಿ ರೂ.ಗೆ ಇನ್ನೆಷ್ಟು ಬೇಕು?

    ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಬಿಗ್ ಬಜೆಟ್ ಬೇಕಾಗಿಲ್ಲ. ಸ್ಮಾಲ್‌ ಬಜೆಟ್‌ನಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಎಂದು '777 ಚಾರ್ಲಿ' ಸಾಬೀತು ಮಾಡಿದೆ. ಸದ್ಯ 15ನೇ ದಿನವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮೂರನೇ ವೀಕೆಂಡ್‌ಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ 14ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

    1ನೇ ದಿನ ರಕ್ಷಿತ್ ಕಲೆಕ್ಷನ್ ಸೂಪರ್!

    1ನೇ ದಿನ ರಕ್ಷಿತ್ ಕಲೆಕ್ಷನ್ ಸೂಪರ್!

    ರಕ್ಷಿತ್ ಶೆಟ್ಟಿ ಸಿನಿಮಾ '777 ಚಾರ್ಲಿ' ಮಕ್ಕಳಿಗೆ ತುಂಬಾನೇ ಇಷ್ಟ ಆಗಿದೆ. ಮಕ್ಕಳಿರುವ ಪ್ರತಿಯೊಂದು ಮನೆಯಲ್ಲೂ '777 ಚಾರ್ಲಿ'ಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಕರ್ನಾಟಕದಲ್ಲಿ ಈ ಸಿನಿಮಾ ಬಾಕ್ಸಾಫೀಸ್ ದೋಚುವುದನ್ನು ಮುಂದುವರೆಸಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ಇನ್ನೊಂದು ಕಡೆ ಉಳಿದ ಭಾಷೆಗಳಲ್ಲೂ ಸಿನಿಮಾ ಮೋಡಿ ಮಾಡುತ್ತಿದೆ. 13ನೇ ದಿನ '777 ಚಾರ್ಲಿ' 1.40 ಕೋಟಿ ರೂ. ಗಳಿಸಿತ್ತು. ಅದೇ 14ನೇ ದಿನದಲ್ಲೂ ಕೊಂಚ ಏರಿಕೆ ಕಂಡಿದ್ದು, 1.50 ಕೋಟಿ ರೂ. ಗಳಿಸಿದೆ.

    ವಿಶ್ವದಾದ್ಯಂತ '777 ಚಾರ್ಲಿ'ಯ 10 ದಿನದ ಕಲೆಕ್ಷನ್ ಎಷ್ಟು? ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು ಗೆಲುವಾ? ಸೋಲಾ?ವಿಶ್ವದಾದ್ಯಂತ '777 ಚಾರ್ಲಿ'ಯ 10 ದಿನದ ಕಲೆಕ್ಷನ್ ಎಷ್ಟು? ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು ಗೆಲುವಾ? ಸೋಲಾ?

    14 ದಿನಗಳ ಒಟ್ಟು ಗಳಿಕೆ ಎಷ್ಟು?

    14 ದಿನಗಳ ಒಟ್ಟು ಗಳಿಕೆ ಎಷ್ಟು?

    ರಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೂಡುವಲ್ಲಿ ಯಶಸ್ವಿಯಾಗಿದೆ. '777 ಚಾರ್ಲಿ' ಕಳೆದ 14 ದಿನಗಳಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ತೆರೆಕಂಡಲ್ಲಿಂದ 14 ದಿನಗಳಲ್ಲಿ ಒಟ್ಟು ಗಳಿಕೆ 73 ಕೋಟಿ ರೂ. ಎನ್ನಲಾಗಿದೆ.

    ಮೊದಲ ವಾರ 38.75 ಕೋಟಿ ರೂ.
    2ನೇ ವಾರ 18.55 ಕೋಟಿ ರೂ.
    3ನೇ ವಾರ 15.70 ಕೋಟಿ ರೂ.

    ಒಟ್ಟು 73.00 ಕೋಟಿ ರೂ.

    ಬೇರೆ ಬೇರೆ ರಾಜ್ಯಗಳಲ್ಲಿ ಕಲೆಕ್ಷನ್ ಹೇಗಿದೆ?

    ಬೇರೆ ಬೇರೆ ರಾಜ್ಯಗಳಲ್ಲಿ ಕಲೆಕ್ಷನ್ ಹೇಗಿದೆ?

    '777 ಚಾರ್ಲಿ' ಕರ್ನಾಟಕದಲ್ಲಿ ಅದ್ಭುತ ಕಲೆಕ್ಷನ್ ಮಾಡಿದ್ದು, 14ನೇ ದಿನ 60 ಲಕ್ಷ ಏರಿಕೆಯಾಗಿದೆ. ಇನ್ನು ಉಳಿದಂತೆ ಆಂಧ್ರ,ತೆಲಂಗಾಣದಲ್ಲೂ ಅಂದುಕೊಂಡಿದ್ದಕ್ಕಿಂತ ಉತ್ತಮ ಗಳಿಕೆ ಕಂಡಿದೆ. ಇನ್ನು ಕೇರಳದಲ್ಲಿ 3.20 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ಗಳಿಕೆ ಹೆಚ್ಚಾಗಿದೆ.

    ಕರ್ನಾಟಕ 53.75 ಕೋಟಿ ರೂ. ( ಅಂದಾಜು)
    ಆಂಧ್ರ/ತೆಲಂಗಾಣ 4.45 ಕೋಟಿ ರೂ. ( ಅಂದಾಜು)
    ಕೇರಳ 3.20 ಕೋಟಿ ರೂ. ( ಅಂದಾಜು)
    ತಮಿಳುನಾಡು 2.40 ಕೋಟಿ ರೂ. ( ಅಂದಾಜು)
    ಉತ್ತರ ಭಾರತ 4.90 ಕೋಟಿ ರೂ. ( ಅಂದಾಜು)
    ವಿದೇಶ 4.30 ಕೋಟಿ ರೂ. ( ಅಂದಾಜು)

    ಒಟ್ಟು 73 ಕೋಟಿ ರೂ. ( ಅಂದಾಜು)

    '777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!'777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!

    3ನೇ ವೀಕೆಂಡ್‌ನಲ್ಲಿ ಕಲೆಕ್ಷನ್ ಏರಿಕೆ?

    3ನೇ ವೀಕೆಂಡ್‌ನಲ್ಲಿ ಕಲೆಕ್ಷನ್ ಏರಿಕೆ?

    '777 ಚಾರ್ಲಿ' ವೀಕೆಂಡ್ ಬರುತ್ತಿದ್ದಂತೆ ಮತ್ತೆ ಏರಿಕೆಯಾಗಿದೆ. ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರದ ಪ್ರಕಾರ, ರಕ್ಷಿತ್ ಶೆಟ್ಟಿ ಹಾಗು ಚಾರ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಕಲೆಕ್ಷನ್ ಮಾಡಿದೆ. ಇನ್ನು ಮೂರು ದಿನ ಶುಕ್ರವಾರ( ಜೂನ್ 24), ಶನಿವಾರ ( ಜೂನ್ 25) ಭಾನುವಾರ ( ಜೂನ್ 26) ಈ ಮೂರು ದಿನಗಳಲ್ಲಿ ಕಲೆಕ್ಷನ್ ಹೇಗಿರುತ್ತೆ? ಅನ್ನುವುದರ ಮೇಲೆ ಚಾರ್ಲಿ 100 ಕೋಟಿ ಭವಿಷ್ಯ ನಿಂತಿದೆ.

    English summary
    Rakshit Shetty Starrer 777 Charlie Worldwide Box office Day 14 Collection Report, Know More.
    Friday, June 24, 2022, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X