ಮತ್ತೊಂದು ಸಾಧನೆಗೆ ಪಾತ್ರವಾದ 'ಕಿರಿಕ್ ಪಾರ್ಟಿ'
ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ ಈ ವರ್ಷದ ಸೂಪರ್ ಹಿಟ್ ಸಿನಿಮಾ. ಈ ವರ್ಷ ಮೊದಲು 100 ದಿನ ಪೂರೈಸಿದ ಚಿತ್ರವಾಗಿದ್ದ ಕಿರಿಕ್ ಪಾರ್ಟಿ ಈಗ 200 ದಿನಗಳ ಪೂರೈಸಿದೆ. ಈ ಸಂಭ್ರಮವನ್ನ ಚಿತ್ರತಂಡ ವಿಶೇಷವಾದ ಪೋಸ್ಟರ್ ಮಾಡಿಸಿ ಸಂಭ್ರಮಿಸಿದೆ.
ರಿಶಬ್ ಶೆಟ್ಟಿ ನಿರ್ದೇಶನ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿದ್ದು, ಸಂಯುಕ್ತ ಹೆಗಡೆ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ನಾಯಕಿಯರಿದ್ದರು. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಿದ್ದ ಈ ಚಿತ್ರಕ್ಕೆ ಕರಮ್ ಚಾವ್ಲಾ ಅವರ ಛಾಯಗ್ರಹಣವಿತ್ತು.

2017ನೇ ಸಾಲಿನಲ್ಲಿ ಅತ್ಯುತ್ತಮ ಮನರಂಜನ ಚಿತ್ರವಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡ 'ಕಿರಿಕ್ ಪಾರ್ಟಿ', ಫಿಲ್ಮ್ ಫೇರ್ ಪ್ರಶಸ್ತಿ, ಐಫಾ ಪ್ರಶಸ್ತಿ, ಸೈಮಾ ಪ್ರಶಸ್ತಿಗಳನ್ನ ಕೂಡ ಬಾಚಿಕೊಂಡಿದೆ.
More from Filmibeat
English summary
Kannada Actor Rakshit Shetty Starrer 'Kirik Party' Movie Completes 200 Days. The Movie Directed By Rishab Shetty.


Click it and Unblock the Notifications











