»   » ರಕ್ಷಿತ್ ಶೆಟ್ಟಿ ಅವರೆ 'ಕಿರಿಕ್ ಪಾರ್ಟಿ' ಶುರು ಆಯ್ತಾ

ರಕ್ಷಿತ್ ಶೆಟ್ಟಿ ಅವರೆ 'ಕಿರಿಕ್ ಪಾರ್ಟಿ' ಶುರು ಆಯ್ತಾ

Posted By:
Subscribe to Filmibeat Kannada

'ಉಳಿದವರು ಕಂಡಂತೆ' ಚಿತ್ರದ ಮೂಲಕ ನಿರ್ದೇಶಕರ ಪಟ್ಟ ಏರಿದ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಿರಿಕ್ ಪಾರ್ಟಿ' ಸದ್ದಿಲ್ಲದೇ ಚಿತ್ರದ ಕೆಲಸ ಕಾರ್ಯಗಳನ್ನು ಆರಂಭಿಸಿದೆ.

'ರಿಕ್ಕಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ರಕ್ಷಿತ್ ಶೆಟ್ಟಿ ಅವರ 'ಪರಂವಾ' ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮೂಡಿಬರುತ್ತಿದೆ.[ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸದ್ಯದಲ್ಲೇ ಶುರು ಕಣ್ರೀ.!]

Rakshit Shetty starrer 'Kirik Party' goes on floors

ಅಂದಹಾಗೆ ಏಪ್ರಿಲ್ 2 ರಂದು ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ ಮತ್ತು ಬಳಗದವರು ರಾಗಿಗುಡ್ಡದ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಆಂಜನೇಯನ ಪಾದಕ್ಕೆರಗಿ ಚಿತ್ರದ ಕೆಲಸಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪೂಜೆ ಸಲ್ಲಿಸಿದ್ದಾರೆ.

ಇವರೊಂದಿಗೆ ನಟಿ ಯಜ್ಞಾ ಶೆಟ್ಟಿ ಮತ್ತು ಶೀತಲ್ ಶೆಟ್ಟಿ ಅವರು ಕೂಡ ಹಾಜರಿದ್ದರು. ಇದನ್ನು ನೋಡುತ್ತಿದ್ದರೆ, 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಮತ್ತೆ 'ಉಳಿದವರು ಕಂಡಂತೆ' ಚಿತ್ರತಂಡ ಮುಂದುವರಿಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ರಿಶಬ್ ಶೆಟ್ಟಿ ಅವರು ಮಾಡಿರುವ ಟ್ವೀಟ್ ಇಲ್ಲಿದೆ ನೋಡಿ.[ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿಗೆ ಹುಡುಗಿ ಬೇಕಂತೆ..!]

ಇನ್ನು ಪೂಜೆ ಸಲ್ಲಿಸಿದ ಬಳಿಕ ಇಡೀ ಚಿತ್ರತಂಡ ಒಟ್ಟಿಗೆ ಕುಳಿತು ಊಟ ಮಾಡಿ ಹರಟೆ ಹೊಡೆಯುವ ಮೂಲಕ ಸಖತ್ 'ಕಿರಿಕ್ ಪಾರ್ಟಿ' ಮಾಡಿದ್ದಾರೆ. ಅಂತೂ ಚಿತ್ರದ ಕೆಲಸಗಳಿಗೆ ಅಧೀಕೃತ ಮುದ್ರೆ ಬಿದ್ದಂತಾಗಿದೆ.[ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಲು ಇಲ್ಲಿದೆ ಉತ್ತಮ ಅವಕಾಶ]

ಅದೇನೇ ಇರಲಿ ಒಟ್ನಲ್ಲಿ 'ಉಳಿದವರು ಕಂಡಂತೆ' ಚಿತ್ರದಂತೆ ಮತ್ತೊಂದು 'ಕಿರಿಕ್' ಚಿತ್ರ ಚಂದನವನಕ್ಕೆ ಬರುತ್ತಿದ್ದು, ಸಿನಿ ಪ್ರಿಯರಿಗೆ ಶೆಟ್ರ 'ಕಿರಿಕ್ ಪಾರ್ಟಿ' ಭಾರಿ ಮಜಾ ಕೋಡೋದು ಗ್ಯಾರೆಂಟಿ. 'ಕಿರಿಕ್ ಪಾರ್ಟಿ' ಫೊಟೋ ಆಲ್ಬಂ ನೋಡಲು ಸ್ಲೈಡ್ಸ್ ಗಳನ್ನು ಒಂದೊಂದಾಗಿ ನೋಡಿ...

-
-
-
-
-
-
-
-
English summary
Kannada Actor Rakshit Shetty starrer 'Kirik Party' Muhoortha was held in Anjeneya Temple, Bengaluru on April 2nd. The movie is directed by Rishab Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada