For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ'ಗೆ 4 ವರ್ಷದ ಸಂಭ್ರಮ; ವಿಶೇಷ ವಿಡಿಯೋ ಶೇರ್ ಮಾಡಿ ಸಿಂಪಲ್ ಸ್ಟಾರ್ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಇಂದು ವಿಶೇಷವಾದ ದಿನ. ಇಬ್ಬರಿಗೂ ತಮ್ಮ ಸಿನಿಮಾ ಜೀವನದ ದಿಕ್ಕನ್ನು ಬದಲಾಯಿಸಿದ ದಿನ. ಹೌದು, ಕನ್ನಡ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ದಿವಿದು.

  Rakshit-Rashmika ಒಂದಾದ್ರೆ ಇಡೀ ಕರ್ನಾಟಕನೇ ಖುಷಿ ಪಡುತ್ತೆ ರೀ ಎಂದ ಅಭಿಮಾನಿ | Filmibeat Kannada

  ಇಂದಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ 2016, ಡಿಸೆಂಬರ್ 30ರಂದು ಕಿರಿಕ್ ಪಾರ್ಟಿ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಿ ಸೂಪರ್ ಹಟ್ ಆಗಿತ್ತು. ರಕ್ಷಿತ್ ಮತ್ತು ತಂಡದವರ ಕಿರಿಕ್ ಪಾರ್ಟಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಕಾಲೇಜು ಲವ್ ಸ್ಟೋರಿಗೆ ಯುವಕರು ಮನಸೋತಿದ್ದರು. ಅದ್ಭುತವಾದ ಸಂಗೀತ ಸಿನಿಮಾದ ರಂಗನ್ನು ಮತ್ತಷ್ಟು ಹೆಚ್ಚಿಸಿತ್ತು.

  ರಶ್ಮಿಕಾ-ರಕ್ಷಿತ್ ಟ್ವಿಟ್ಟರ್ ಲವ್ವು: 'ಏನೋ ಏನೋ ಆಗಿದೆ' ಅಂತಿದ್ದಾರೆ ನೆಟ್ಟಿಗರು

  ರಕ್ಷಿತ್ ಶೆಟ್ಟಿ ಟ್ವೀಟ್

  ರಕ್ಷಿತ್ ಶೆಟ್ಟಿ ಟ್ವೀಟ್

  ಕಿರಿಕ್ ಪಾರ್ಟಿಯ ಪ್ರತಿಯೊಂದು ಅಂಶ ಪ್ರೇಕ್ಷಕರ ಹೃದಯ ಗೆದ್ದಿತ್ತು. 4 ವರ್ಷ ತುಂಬಿದ ಸಂತಸವನ್ನು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಈ ಸಿನಿಮಾ ಇಷ್ಟು ಅದ್ಭುತವಾಗಿ ಮೂಡಿಬರಲು ಕಾರಣವಾಗಿದ್ದು, ಇಡೀ ತಂಡದ ಪ್ರತಿಯೊಬ್ಬರಲ್ಲಿ ಇದ್ದ ಹೊಂದಾಣಿಕೆಯೇ ಕಾರಣ.' ಎಂದು ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.

  ರಶ್ಮಿಕಾ ಚಿತ್ರರಂಗದ ಎಂಟ್ರಿಗೆ 4 ವರ್ಷದ ಸಂಭ್ರಮ

  ಇನ್ನು ಈ ಸಿನಿಮಾ ಮೂಲಕವೇ ನಟಿ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗ್ಡೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ರಶ್ಮಿಕಾ ಇದೀಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ಸಿನಿಮಾಗಳ ಜೊತೆಗೆ ಈಗ ಬಾಲಿವುಡ್ ಗೂ ಎಂಟ್ರಿ ಕೊಟ್ಟಿರುವ ರಶ್ಮಿಕಾ ಖ್ಯಾತಿ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಏರುತ್ತಿದೆ.

  100 ಮಿಲಿಯನ್ ವೀಕ್ಷಣೆ ಕಂಡ ಬೆಳಗೆದ್ದು ಹಾಡು

  100 ಮಿಲಿಯನ್ ವೀಕ್ಷಣೆ ಕಂಡ ಬೆಳಗೆದ್ದು ಹಾಡು

  ಇನ್ನೂ ಇತ್ತೀಚಿಗಷ್ಟೆ ಕಿರಿಕ್ ಪಾರ್ಟಿ ತಂಡ ಬೆಳಗೆದ್ದು ಹಾಡು 100 ಮಿಲಿಯನ್ ವೀಕ್ಷಣೆ ಕಂಡ ಸಂತಸವನ್ನು ಹಂಚಿಕೊಂಡಿದ್ದರು. ಹಾಡಿನ ಬಗ್ಗೆ ರಕ್ಷಿತ್ ಸಹ ಶೇರ್ ಮಾಡಿ ಧನ್ಯವಾದ ತಿಳಿಸಿದ್ದರು. ಇನ್ನು ರಶ್ಮಿಕಾ ಸಹ ತನ್ನ ಮೊದಲ ಸಿನಿಮಾದ ಸೂಪರ್ ಹಿಟ್ ಹಾಡನ್ನು ನೆನಪಿಸಿಕೊಂಡಿದ್ದರು.

  100 ಮಿಲಿಯನ್ ವೀಕ್ಷಣೆ ಕಂಡ ಕಿರಿಕ್ ಪಾರ್ಟಿಯ 'ಬೆಳಗೆದ್ದು..' ಹಾಡು: ಧನ್ಯವಾದ ತಿಳಿಸಿದ ರಕ್ಷಿತ್ ಶೆಟ್ಟಿ

  ಕಿರಿಕ್ ಪಾರ್ಟಿ-2ಗೆ ತಯಾರಿ

  ಕಿರಿಕ್ ಪಾರ್ಟಿ-2ಗೆ ತಯಾರಿ

  ಕಿರಿಕ್ ಪಾರ್ಟಿಗೆ ಸದ್ಯ 4ವರ್ಷ ತುಂಬಿದ ಸಂಭ್ರಮದಲ್ಲಿರುವ ರಕ್ಷಿತ್ ಮತ್ತು ತಂಡ ಕಿರಿಕ್ ಪಾರ್ಟಿ-2ಗೆ ತಯಾರಿ ನಡೆಸುತ್ತಿದ್ದಾರೆ. ಕಿರಿಕ್ ಪಾರ್ಟಿ-2 ಮಾಡುವುದಾಗಿ ರಕ್ಷಿತ್ ಈಗಾಗಲೇ ಹೇಳಿದ್ದರು. ಆದರೆ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಮುಂದಿನ ಸೆಟ್ಟೇರಿದರೂ ಅಚ್ಚರಿ ಇಲ್ಲ.

  English summary
  Kannada Actor Rakshit Shetty Starrer Kirik Party Movie Completes 4 Years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X