'ಸಪ್ತ ಸಾಗರದಾಚೆ ಎಲ್ಲೋ' ಹೊರಟ ರಕ್ಷಿತ್ ಗೆಟಪ್ ಹೇಗಿದೆ ನೋಡಿ

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಸಪ್ತ ಸಾಗರದಾಚೆ ಎಲ್ಲೋ ಹೊರಟಿದ್ದಾರೆ. ಅಂದಹಾಗೆ ಸಪ್ತ ಸಾಗರದಾಚೆ ಎಲ್ಲೋ ರಕ್ಷಿತ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೀರ್ಷಿಕೆ. ಇತ್ತೀಚಿಗಷ್ಟೆ '777 ಚಾರ್ಲಿ' ಸಿನಿಮಾವನ್ನು ಸಂಪೂರ್ಣ ಮಾಡಿ ಶೆಟ್ರು ಆಗಲೇ ಹೊಸ ಸಿನಿಮಾದಲ್ಲಿ ನಿರತರಾಗಿದ್ದಾರೆ.

ಇಂದು (ಮಾರ್ಚ್ 11) ಶಿವರಾತ್ರಿ ಹಬ್ಬದ ಪ್ರಯುಕ್ತ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಉದ್ದ ಕೂದಲು ಮತ್ತು ದಾಡಿ ಬಿಟ್ಟು ನೋವಿನಲ್ಲಿರುವ ರಕ್ಷಿತ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಸಪ್ತ ಸಾಗರದಾಚೆ ಎಲ್ಲೋ, ಹೇಮಂತ್ ರಾವ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಪರಂವಃ ಪಿಕ್ಚರ್ಸ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಬೀರ್ ಬಲ್ ಸಿನಿಮಾದಲ್ಲಿ ನಟಿಸಿದ್ದ ರುಕ್ಮಿಣಿ ಈಗ ರಕ್ಷಿತ್ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ.

Rakshit Shetty Starrer Sapta Sagaradaache yello movie first look poster released

ಸದ್ಯ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿರುವ ಜೊತೆಗೆ ರಕ್ಷಿತ್ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ನಿರತರಾಗಿದ್ದಾರೆ. ಬಹುನಿರೀಕ್ಷೆಯ ಈ ಸಿನಿಮಾ ಮೇ ಅಥವಾ ಜೂನ್ ನಲ್ಲಿ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Recommended Video

ಸೆಂಟಿಮೆಂಟ್,ಫ್ರೆಂಡ್ ಶಿಪ್,ಫೈಟಿಂಗ್ ಎಲ್ಲವೂ ಸೂಪರ್ ಎಂದ ಪ್ರೇಕ್ಷಕ | Roberrt Public Opinion | Darshan |Tharun

More from Filmibeat

English summary
Actor Rakshit Shetty Starrer Sapta Sagaradaache yello movie first look poster released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X