For Quick Alerts
  ALLOW NOTIFICATIONS  
  For Daily Alerts

  ರುಕ್ಮಿಣಿ ಜೊತೆ 'ಸಪ್ತ ಸಾಗರದಾಚೆ' ಹೊರಟ ರಕ್ಷಿತ್ ಕ್ಯಾಮರಾಗೆ ಪೋಸ್ ನೀಡಿದ್ದು ಹೀಗೆ

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಪ್ರಾರಂಭಿಸಿದ್ದಾರೆ. ಶೀರ್ಷಿಕೆ ಮೂಲಕವೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಇತ್ತೀಚಿಗಷ್ಟೆ ಮುಹೂರ್ತ ಮಾಡಿಕೊಳ್ಳುವ ಮೂಲಕ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ.

  ಕಥೆಗೆ ಟೈಟಲ್ ಹೇಗೆ ಸೆಲೆಕ್ಟ್ ಆಯ್ತು ಅಂತಾ ಹೇಳಿದ್ರು ಡೈರೆಕ್ಟರ್ ಹೇಮಂತ್ | Filmibeat Kannada

  ಶಿವರಾತ್ರಿ ಹಬ್ಬದ (ಮಾರ್ಚ್ 11) ಪ್ರಯುಕ್ತ ಚಿತ್ರದ ಮೊದಲ ನೋಟ ಬಿಡುಗಡೆ ಮಾಡಿದ್ದ ಚಿತ್ರತಂಡ ಬಳಿಕ ಸರಳವಾಗಿ ಮುಹೂರ್ತ ಮಾಡಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.

  'ಸಪ್ತ ಸಾಗರದಾಚೆ ಎಲ್ಲೋ' ಹೊರಟ ರಕ್ಷಿತ್ ಗೆಟಪ್ ಹೇಗಿದೆ ನೋಡಿ

  ಪೂಜೆ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ, ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು. ಪೂಜೆ ಬಳಿಕ ರಕ್ಷಿತ್ ನಾಯಕಿ ರುಕ್ಮಿಣಿ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಬೀರ್ ಬಲ್ ಸಿನಿಮಾದಲ್ಲಿ ನಟಿಸಿದ್ದ ರುಕ್ಮಿಣಿ ಈಗ ರಕ್ಷಿತ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಎರಡನೇ ಬಾರಿ ಚಿತ್ರ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

  ಅಂದಹಾಗೆ ಸಪ್ತ ಸಾಗರದಾಚೆ ಎಲ್ಲೋ, ನಿರ್ದೇಶಕ ಹೇಮಂತ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದಲ್ಲಿ ರಕ್ಷಿತ್, ಮನು ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರಕ್ಷಿತ್ ಮತ್ತು ತಂಡ ಬಿಟ್ಟುಕೊಟ್ಟಿಲ್ಲ.

  ಸಪ್ತ ಸಾಗರದಾಚೆ ಎಲ್ಲೋ ಪರಂವಃ ಪಿಕ್ಚರ್ಸ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿರುವ ರಕ್ಷಿತ್ ಈ ಸಿನಿಮಾ ಜೊತೆಗೆ 777 ಚಾರ್ಲಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ನಿರತರಾಗಿದ್ದಾರೆ. ಬಹುನಿರೀಕ್ಷೆಯ ಚಾರ್ಲಿ ಮೇ ಅಥವಾ ಜೂನ್ ನಲ್ಲಿ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Actor Rakshit Shetty Starrer Sapta Sagaradaache Yello movie muhurta held today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X