For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ಸಿಂಪಲ್ ಲವ್ ಸ್ಟೋರಿಗೆ 8 ವರ್ಷದ ಸಂಭ್ರಮ

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಂಪಲ್ ಲವ್ ಸ್ಟೋರಿಗೆ 8 ವರ್ಷದ ಸಂಭ್ರಮ. ರಕ್ಷಿತ್ ಶೆಟ್ಟಿ ಲವ್ ಸ್ಟೋರಿನಾ ಅಂತ ಯೋಚಿಸಬೇಡಿ, ರಕ್ಷಿತ್ ನಟನೆಯ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾಗೆ 8 ವರ್ಷಗಳಾಗಿದೆ.

  8 ವರ್ಷಗಳ ಹಿಂದೆ ಇದೆ ದಿನ ಮಾರ್ಚ್ 8ಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿತ್ತು. ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ ಡೈಲಾಗ್ ಗಳ ಮೂಲಕವೇ ಕನ್ನಡ ಪ್ರೇಕ್ಷಕರ ಹೃದಯಗೆದ್ದಿತ್ತು.

  ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ

  ನಮ್ ಏರಿಯಾದಲ್ ಒಂದ್ ದಿನ ಮತ್ತು ತುಘಲಕ್ ಸಿನಿಮಾಗಳ ಬಳಿಕ ರಕ್ಷಿತ್ ನಟನೆಯ ಮೂರನೇ ಸಿನಿಮಾ ಇದಾಗಿದೆ. ಸುನಿ ಚೊಚ್ಚಲ ನಿರ್ದೇಶನದ ಮೂಲಕವೇ ಎಲ್ಲರ ಮನಗೆದ್ದಿದ್ದರು. ಚಿತ್ರದಲ್ಲಿ ರಕ್ಷಿತ್ ಗೆ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ.

  ರಕ್ಷಿತ್ ಶೆಟ್ಟಿ ಸಿನಿ ಬದುಕಿಗೆ ದೊಡ್ಡ ತಿರುವು ನೀಡಿದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದ ಬಗ್ಗೆ ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ. 8 ವರ್ಷದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಸುಂದರ 8 ವರ್ಷಗಳನ್ನು ಪೂರೈಸಿದೆ. ಚಿತ್ರದಲ್ಲಿ ನನ್ನ ವೃತ್ತಿ ಜೀವನನಕ್ಕೆ ಒಂದು ಶಕ್ತಿ ನೀಡಿದ ಸಿನಿಮಾವಿದು. ಈ ಸುಂದರ ಪಯಣದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada

  ರಕ್ಷಿತ್ ಶೆಟ್ಟಿ ಕೊನೆಯದಾಗಿ ಅವನೇ ಶ್ರೀಮನ್ನಾರಾಯಣ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ 777 ಚಾರ್ಲಿ ಸಿನಿಮಾದ ಚಿತ್ರೀಕರಣವನ್ನು ಇತ್ತೀಚಿಗಷ್ಟೆ ಮುಗಿಸಿರುವ ರಕ್ಷಿತ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಿರತರಾಗಿದ್ದಾರೆ.

  English summary
  Kannada Actor Rakshit Shetty Starrer Simple Agi Ondh Love Story movie completes 8 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X