ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
ನಟ ರಕ್ಷಿತ್ ಶೆಟ್ಟಿ ಬಹಳ ದಿನಗಳ ಬಳಿಕ ಮೊನ್ನೆ ಲೈವ್ ಬಂದು ಅಭಿಮಾನಿಗಳೊಟ್ಟಿಗೆ ಮಾತನಾಡಿದರು. ರಿಷಬ್ ಶೆಟ್ಟಿ ನಟನೆಯ 'ಹೀರೊ' ಸಿನಿಮಾದ ಟ್ರೇಲರ್ ಬಿಡುಗಡೆ ಆದ ಖುಷಿ ಹಂಚಿಕೊಳ್ಳಲು ಲೈವ್ ಬಂದಿದ್ದರು ರಕ್ಷಿತ್ ಶೆಟ್ಟಿ.
ಲೈವ್ ನಲ್ಲಿ ಬಹು ಸಮಯ ಅಭಿಮಾನಿಗಳು, ಸಿನಿಪ್ರೇಮಿಗಳ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ತಮ್ಮ ಪ್ರಸ್ತುತ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಲಾಕ್‌ಡೌನ್ ಕಾರಣದಿಂದ 777 ಚಾರ್ಲಿ ತಡವಾದ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ, 'ಕೆಲವು ದಿನಗಳ ಚಿತ್ರೀಕರಣ ಬಾಕಿ ಇದ್ದು, ಲಾಕ್‌ಡೌನ್ ಅವಧಿಯಲ್ಲಿ ಸಿನಿಮಾದ ಮೊದಲ ಭಾಗದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿದ್ದೇವೆ. ಇದೀಗ ಎರಡನೇ ಅರ್ಧದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮಾತ್ರವೇ ಬಾಕಿ ಇದ್ದು, ಸಿನಿಮಾವನ್ನು ಆಗಸ್ಟ್ ಅಥವಾ ಜುಲೈ ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಸುದೀಪ್ ಗಾಗಿ ಕತೆ ಬರೆಯುತ್ತಿದ್ದೇನೆ: ರಕ್ಷಿತ್ ಶೆಟ್ಟಿ
ಈ ನಡುವೆ ಸುದೀಪ್ ಅವರೊಟ್ಟಿಗೆ ಸಿನಿಮಾ ಯಾವಾಗ ಎಂಬ ಪ್ರಶ್ನೆಯೂ ರಕ್ಷಿತ್ ಶೆಟ್ಟಿ ಅವರಿಗೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ಪ್ರಸ್ತುತ 777 ಚಾರ್ಲಿ ಬಿಡುಗಡೆ ನಂತರ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಪ್ರಾರಂಭವಾಗಲಿದೆ. ಅದರ ನಂತರ ರಿಚ್ಚಿ ಸಿನಿಮಾ ಶುರುವಾಗಲಿದೆ. ಆ ನಂತರ ಪುಣ್ಯಕೋಟಿ ಸಿನಿಮಾ ಪ್ರಾರಂಭವಾಗಲಿದೆ. ಸುದೀಪ್ ಅವರಿಗಾಗಿ ಕತೆ ತಯಾರು ಮಾಡುತ್ತಿದ್ದೇನೆ. ನನ್ನ ಕೆಲಸಗಳು ಪೂರ್ಣಗೊಂಡ ಬಳಿಕ ಸುದೀಪ್ ಜೊತೆ ಸಿನಿಮಾ ಪ್ರಾರಂಭಿಸುತ್ತೇನೆ ಎಂದಿದ್ದಾರೆ.

'ಥಗ್ಸ್ ಆಫ್ ಮಾಲ್ಗುಡಿ' ಏನಾಯ್ತು?
ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ 'ಥಗ್ಸ್ ಆಫ್ ಮಾಲ್ಗುಡಿ' ಹೆಸರಿನ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾ ಇನ್ನೂ ಪ್ರಾರಂಭವಾಗಿಲ್ಲ. ಆ ನಂತರ ರಕ್ಷಿತ್ ಶೆಟ್ಟಿ ಬ್ಯುಸಿಯಾದ ಕಾರಣ ಸಿನಿಮಾ ಪ್ರಾರಂಭವಾಗಲಿಲ್ಲ.
Recommended Video

ಬಹಳ ಬ್ಯುಸಿ ನಟ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಬಹಳ ಬ್ಯುಸಿ ನಟ, ನಿರ್ದೇಶಕ, ನಿರ್ಮಾಪಕ. ಸಪ್ತಸಾಗರದಾಚೆ ಎಲ್ಲೊ, ರಿಚ್ಚಿ, ಪುಣ್ಯಕೋಟಿ ಸಿನಿಮಾಗಳ ಬಳಿಕ ಕಿರಿಕ್ ಪಾರ್ಟಿ 2 ಹಾಗೂ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಬೇಕಿದೆ. ಇದರಲ್ಲಿ ರಿಚ್ಚಿ ಸಿನಿಮಾಕ್ಕೆ ರಕ್ಷಿತ್ ಶೆಟ್ಟಿ ಅವರೇ ನಿರ್ದೇಶಕರು.

ಸುದೀಪ್ ಸಹ ಫುಲ್ ಬ್ಯುಸಿ
ಸುದೀಪ್ ಸಹ ಪ್ರಸ್ತುತ ಬಹಳ ಬ್ಯುಸಿಯಾಗಿದ್ದಾರೆ. ಪ್ಯಾಂಟಮ್ ಸಿನಿಮಾ ಚಿತ್ರೀಕರಣ ಈಗಷ್ಟೆ ಮುಗಿಸಿರುವ ಸುದೀಪ್. ಅಶ್ವತ್ಥಾಮ ಸಿನಿಮಾದಲ್ಲಿ ನಟಿಸಲು ತಯಾರಾಗುತ್ತಿದ್ದಾರೆ. ಅದರ ಬಳಿಕ ಬಿಗ್‌ಬಾಸ್ ಶೋ ನಿರೂಪಣೆ ಮಾಡಲಿದ್ದಾರೆ. ಸುದೀಪ್ ಸಹ ಮತ್ತೆ ನಿರ್ದೇಶನಕ್ಕೆ ಇಳಿಯುವ ಯೋಚನೆಯಲ್ಲೂ ಇದ್ದಾರೆ.


Click it and Unblock the Notifications











