ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!

ಅನೀಶ್ ತೇಜೇಶ್ವರ್ ನಟನೆಯ ರಾಮಾರ್ಜುನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿದಿದ್ದು ಥಿಯೇಟರ್‌ಗೆ ಎಂಟ್ರಿ ಕೊಡಲು ಕಾಯುತ್ತಿದೆ. ಈ ನಡುವೆ ನಟ ರಕ್ಷಿತ್ ಶೆಟ್ಟಿ ರಾಮಾರ್ಜುನ ಚಿತ್ರಕ್ಕೆ ಜೊತೆಯಾಗಿದ್ದಾರೆ.

ಅನಿಶ್ ಮತ್ತು ರಕ್ಷಿತ್ ಶೆಟ್ಟಿ ಬಹಳ ವರ್ಷದಿಂದಲೂ ಗೆಳೆಯರು. 'ನಮ್ ಏರಿಯಾಲ್ ಒಂದಿನಾ' ಸಿನಿಮಾದಿಂದಲೂ ರಕ್ಷಿತ್ ಮತ್ತು ಅನಿಶ್ ಒಟ್ಟಿಗೆ ಇಂಡಸ್ಟ್ರಿಯಲ್ಲಿ ಬೆಳೆದವರು. ಇದೀಗ, ಗೆಳೆಯನ ಚಿತ್ರಕ್ಕೆ ರಕ್ಷಿತ್ ಬೆಂಬಲವಾಗಿ ನಿಂತಿದ್ದಾರೆ.

ನಟನೆಯ ಜೊತೆ ಚೊಚ್ಚಲ ಬಾರಿಗೆ ಅನಿಶ್ ನಿರ್ದೇಶನ ಮಾಡಿದ್ದಾರೆ. ವಿಂಕ್ ವಿಶ್ಯೂಲ್ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈಗ ರಕ್ಷಿತ್ ಶೆಟ್ಟಿ ಸಹ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

Rakshit Shetty to Produce Anish Starrer Ramarjuna Movie

ರಾಮಾರ್ಜುನ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ರಕ್ಷಿತ್ ಶೆಟ್ಟಿ, ಸಿನಿಮಾದ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ಇದಕ್ಕೂ ಮುಂಚೆ 'ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆ ವೇಳೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಯಾಗಿದ್ದರು. ಅದೇ ರೀತಿ ರಾಮಾರ್ಜುನ ಸಿನಿಮಾಗೆ ರಕ್ಷಿತ್ ಶೆಟ್ಟಿ ಬೆಂಬಲವಾಗಿ ನಿಂತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನುಳಿದಂತೆ ರಾಮಾರ್ಜುನ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ. ಇವರ ಜೊತೆಗೆ ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಅರುಣಾ ಬಾಲರಾಜ್ ಸೇರಿದಂತೆ ಮುಂತಾದವರು ತಾರಬಳಗದಲ್ಲಿದ್ದಾರೆ.

More from Filmibeat

English summary
Kannada actor Rakshit Shetty to Produce Anish Starrer Ramarjuna Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X