For Quick Alerts
  ALLOW NOTIFICATIONS  
  For Daily Alerts

  ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!

  |

  ಅನೀಶ್ ತೇಜೇಶ್ವರ್ ನಟನೆಯ ರಾಮಾರ್ಜುನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿದಿದ್ದು ಥಿಯೇಟರ್‌ಗೆ ಎಂಟ್ರಿ ಕೊಡಲು ಕಾಯುತ್ತಿದೆ. ಈ ನಡುವೆ ನಟ ರಕ್ಷಿತ್ ಶೆಟ್ಟಿ ರಾಮಾರ್ಜುನ ಚಿತ್ರಕ್ಕೆ ಜೊತೆಯಾಗಿದ್ದಾರೆ.

  ಅನಿಶ್ ಮತ್ತು ರಕ್ಷಿತ್ ಶೆಟ್ಟಿ ಬಹಳ ವರ್ಷದಿಂದಲೂ ಗೆಳೆಯರು. 'ನಮ್ ಏರಿಯಾಲ್ ಒಂದಿನಾ' ಸಿನಿಮಾದಿಂದಲೂ ರಕ್ಷಿತ್ ಮತ್ತು ಅನಿಶ್ ಒಟ್ಟಿಗೆ ಇಂಡಸ್ಟ್ರಿಯಲ್ಲಿ ಬೆಳೆದವರು. ಇದೀಗ, ಗೆಳೆಯನ ಚಿತ್ರಕ್ಕೆ ರಕ್ಷಿತ್ ಬೆಂಬಲವಾಗಿ ನಿಂತಿದ್ದಾರೆ.

  ಕಾಶ್ಮೀರದಿಂದ ಬಂತು ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾದ ಅಪ್ ಡೇಟ್; ಏನದು?ಕಾಶ್ಮೀರದಿಂದ ಬಂತು ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾದ ಅಪ್ ಡೇಟ್; ಏನದು?

  ನಟನೆಯ ಜೊತೆ ಚೊಚ್ಚಲ ಬಾರಿಗೆ ಅನಿಶ್ ನಿರ್ದೇಶನ ಮಾಡಿದ್ದಾರೆ. ವಿಂಕ್ ವಿಶ್ಯೂಲ್ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈಗ ರಕ್ಷಿತ್ ಶೆಟ್ಟಿ ಸಹ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

  ರಾಮಾರ್ಜುನ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ರಕ್ಷಿತ್ ಶೆಟ್ಟಿ, ಸಿನಿಮಾದ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ಇದಕ್ಕೂ ಮುಂಚೆ 'ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆ ವೇಳೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಯಾಗಿದ್ದರು. ಅದೇ ರೀತಿ ರಾಮಾರ್ಜುನ ಸಿನಿಮಾಗೆ ರಕ್ಷಿತ್ ಶೆಟ್ಟಿ ಬೆಂಬಲವಾಗಿ ನಿಂತಿದ್ದಾರೆ ಎಂದು ತಿಳಿದು ಬಂದಿದೆ.

  ಮಲೆನಾಡ ಹುಡುಗಿ ಅಡಿಕೆ ಸುಲಿಯೋದು ನೋಡೋಕೆ ಎಷ್ಟು ಚೆಂದ | Asha Bhat | Filmibeat Kannada

  ಷಷ್ಠಿ ಪೂಜೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಷಷ್ಠಿ ಪೂಜೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

  ಇನ್ನುಳಿದಂತೆ ರಾಮಾರ್ಜುನ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ. ಇವರ ಜೊತೆಗೆ ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಅರುಣಾ ಬಾಲರಾಜ್ ಸೇರಿದಂತೆ ಮುಂತಾದವರು ತಾರಬಳಗದಲ್ಲಿದ್ದಾರೆ.

  English summary
  Kannada actor Rakshit Shetty to Produce Anish Starrer Ramarjuna Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X