ಭಾವಿ ಪತ್ನಿಯ 'ಚಮಕ್' ನೋಡಿ ರಕ್ಷಿತ್ ಗೆ ಮತ್ತೆ ಲವ್ ಆಯ್ತಂತೆ.!

By Bharath Kumar

Recommended Video

ರಶ್ಮಿಕಾ ಮಂದಣ್ಣ ಮೇಲೆ ರಕ್ಷಿತ್ ಶೆಟ್ಟಿ ಗೆ ಮತ್ತೆ ಲವ್ವಾಯ್ತಂತೆ | Filmibeat Kannada

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಆದ ನಂತರ ರಕ್ಷಿತ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಆದ್ರೆ, ರಶ್ಮಿಕಾ ಅಭಿನಯದ ಎರಡು ಚಿತ್ರಗಳು ತೆರೆಕಂಡಿದೆ. ಪುನೀತ್ ಜೊತೆ 'ಅಂಜನಿಪುತ್ರ' ಮತ್ತು ಗಣೇಶ್ ಜೊತೆ ಕಾಣಿಸಿಕೊಂಡ 'ಚಮಕ್'.

ಇದೀಗ, ಗಣೀ ಮತ್ತು ರಶ್ಮಿಕಾ ಜೋಡಿಯ 'ಚಮಕ್' ಚಿತ್ರವನ್ನ ರಕ್ಷಿತ್ ಶೆಟ್ಟಿ ನೋಡಿ ಮೆಚ್ಚಿಕೊಂಡಿದ್ದಾರೆ. ಮುಖ್ಯ ಚಿತ್ರಮಂದಿರದಲ್ಲಿ ಭಾವಿ ಪತ್ನಿಯೊಂದಿಗೆ ಮೊದಲ ಶೋ ಸಿನಿಮಾ ನೋಡಿದ ರಕ್ಷಿತ್ ತಮ್ಮ ವಿಮರ್ಶೆ ಬರೆದುಕೊಂಡಿದ್ದಾರೆ.

'ಚಮಕ್' ಚಿತ್ರದಲ್ಲಿ ಏನು ಇಷ್ಟವಾಯ್ತು? ಗಣೇಶ್ ಅಭಿನಯ, ರಶ್ಮಿಕಾ ಅಭಿನಯ ಮತ್ತು ಸಿಂಪಲ್ ಸುನಿಯ ನಿರ್ದೇಶನದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ, ರಕ್ಷಿತ್ ಏನಂದ್ರು ಎಂದು ತಿಳಿಯಲು ಮುಂದೆ ಓದಿ.....

ಚಮಕ್ ನೋಡಿ ಫಿದಾ ಆದ ರಕ್ಷಿತ್

ಚಮಕ್ ನೋಡಿ ಫಿದಾ ಆದ ರಕ್ಷಿತ್

''ಚಮಕ್ ಚಿತ್ರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾರೇ ಅದ್ಭುತ. ಪೂರ್ತಿ ಸಿನಿಮಾ ತುಂಬ ಇಷ್ಟ ಆಯ್ತು. ಗಣೇಶ್ ಸರ್ ಅವರ ಅಭಿನಯ ಟಾಪ್ ಕ್ಲಾಸ್. ರಶ್ಮಿಕಾ ನೋಟ ಆಕರ್ಷಕವಾಗಿದೆ ಮತ್ತು ನಟನೆಯಲ್ಲಿ ಮೋಡಿ ಮಾಡ್ತಾರೆ.'' - ರಕ್ಷಿತ್ ಶೆಟ್ಟಿ, ನಟ

ಸುನಿಯ ಬೆಸ್ಟ್ ಸಿನಿಮಾ

ಸುನಿಯ ಬೆಸ್ಟ್ ಸಿನಿಮಾ

''ಇದುವರೆಗೂ ಸುನಿ ಚಿತ್ರಗಳಲ್ಲಿ ಚಮಕ್ ಬೆಸ್ಟ್. ಪ್ರತಿಯೊಂದು ಚಿತ್ರದಲ್ಲೂ ಅವರ ನಿರ್ದೇಶನ ಮತ್ತು ಸಂಭಾಷಣೆಯಲ್ಲಿ ಬೆಳವಣಿಗೆ ಕಾಣ್ತಿದೆ. ಚಮಕ್ ಚಿತ್ರವನ್ನ ನಿಮ್ಮ ಜೊತೆಗಾರರ ಜೊತೆ ನೋಡಿ. ಈ ವರ್ಷದ ಅತ್ಯುತ್ತಮ ಫ್ಯಾಮಿಲಿ ಮನರಂಜನೆ ಚಿತ್ರ ಇದಾಗಿದೆ'' - ರಕ್ಷಿತ್ ಶೆಟ್ಟಿ, ನಟ

ರಶ್ಮಿಕಾ ಮೇಲೆ ಮತ್ತೆ ಲವ್ ಆಯ್ತು

ರಶ್ಮಿಕಾ ಮೇಲೆ ಮತ್ತೆ ಲವ್ ಆಯ್ತು

''ಚಮಕ್ ಚಿತ್ರವನ್ನ ನೋಡಿ ರಶ್ಮಿಕಾ ಅವರ ಮೇಲೆ ಇನ್ನೊಂದು ಸಲ ಲವ್ ಆಗಿದೆ'' ಎಂದು ಭಾವಿ ಪತ್ನಿ ನಟನೆ ಮತ್ತು ಚಿತ್ರದ ಬಗ್ಗೆ ಹಾಡಿ ಕೊಂಡಾಡಿದ್ದಾರೆ.

ಹೊಸ ಕಾರು ಖರೀದಿಸಿದ ರಶ್ಮಿಕಾ

ಹೊಸ ಕಾರು ಖರೀದಿಸಿದ ರಶ್ಮಿಕಾ

'ಅಂಜನಿಪುತ್ರ' ಮತ್ತು 'ಚಮಕ್' ಚಿತ್ರದ ಯಶಸ್ಸಿನಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಈಗ ಆಡಿ (Audi) ಕಾರ್ ಖರೀದಿಸಿದ್ದಾರೆ. ಕೆಂಪು ಬಣ್ಣದ ಕಾರ್ ಅನ್ನು ಸಾನ್ವಿ ಖರೀದಿ ಮಾಡಿದ್ದು, ರಕ್ಷಿತ್ ಶೆಟ್ಟಿ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Kannada actor Rakshit shetty has taken his twitter account to praise golden star ganesh and rashmika mandanna starrer chamak movie. chamak movie has released yesterday (december 29th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X