»   » ಸುದೀಪ್ ನಂತರ ಪುನೀತ್ ಗೆ ಆಕ್ಷನ್ ಕಟ್ ಹೇಳ್ತಾರ ರಕ್ಷಿತ್ ಶೆಟ್ಟಿ.!

ಸುದೀಪ್ ನಂತರ ಪುನೀತ್ ಗೆ ಆಕ್ಷನ್ ಕಟ್ ಹೇಳ್ತಾರ ರಕ್ಷಿತ್ ಶೆಟ್ಟಿ.!

Posted By:
Subscribe to Filmibeat Kannada

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ 'ಕಿರಿಕ್ ಪಾರ್ಟಿ' ಯಶಸ್ಸಿನಲ್ಲಿದ್ದಾರೆ. ಇದರ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಅವರ ಜೊತೆ ಸಪ್ತಪದಿ ತುಳಿಯಲಿದ್ದು, ಜುಲೈ 3 ರಂದು ನಿಶ್ಚಿತಾರ್ಥಕ್ಕೆ ಸಜ್ಜಾಗುತ್ತಿದ್ದಾರೆ.

ಈ ಸಂತಸದ ನಂತರ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ನಟಿಸುತ್ತಿದ್ದು, ಕಿಚ್ಚ ಸುದೀಪ್ ಅವರಿಗೆ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಆಮೇಲೆ ಸುದೀಪ್ ನಂತರ ರಕ್ಷಿತ್ ಶೆಟ್ಟಿ ಮತ್ಯಾರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಗೊತ್ತಾ?

'ಕಿರಿಕ್ ಪಾರ್ಟಿ' ಗ್ಯಾಂಗ್ ನ ಸಕ್ಸಸ್ ಪಾರ್ಟಿ ಸಿಕ್ಕಾಪಟ್ಟೆ ಕಲರ್ ಫುಲ್

ಇಂತಹದೊಂದು ಪ್ರಶ್ನೆ ಉದ್ಬವವಾಗಿದ್ದು, ಇದಕ್ಕೆ ರಕ್ಷಿತ್ ಶೆಟ್ಟಿ ಕನ್ನಡದ ಪವರ್ ಸ್ಟಾರ್ ನ ಆಯ್ಕೆ ಮಾಡಿಕೊಳ್ಳುವ ಸೂಚನೆ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.....

ಸುದೀಪ್ ನಂತರ ಪುನೀತ್ ಡೈರೆಕ್ಷನ್.!

ಖಾಸಗಿ ಟಿವಿ ಟಾಕ್ ಶೋವೊಂದರಲ್ಲಿ ಭಾಗವಹಿಸಿದ್ದ ನಟ ರಕ್ಷಿತ್ ಶೆಟ್ಟಿಗೆ ಸುದೀಪ್ ನಂತರ ಯಾರ ಚಿತ್ರವನ್ನ ಡೈರೆಕ್ಟ್ ಮಾಡಬೇಕು ಎಂಬ ಆಸೆಯಿದೆ ಎಂದು ಕೇಳಿದಾಗ, ನಟ ಪುನೀತ್ ರಾಜ್ ಕುಮಾರ್ ಗೆ ನಿರ್ದೇಶನ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಸುದೀಪ್ ಬ್ರೇಕಿಂಗ್ ನ್ಯೂಸ್!

'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಪುನೀತ್.!

ಹಿಂದಿಯ ಯಾವ ಚಿತ್ರವನ್ನ ರೀಮೇಕ್ ಮಾಡುವ ಬಯಕೆ ಇದೆ, ಆ ಚಿತ್ರದಲ್ಲಿ ಯಾರನ್ನ ನಾಯಕನನ್ನಾಗಿ ಮಾಡಿಸುವ ಉದ್ದೇಶವಿದೆ ಎಂಬ ಪ್ರಶ್ನೆಗೆ, ''ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಜಾನ್' ಚಿತ್ರವನ್ನ ಕನ್ನಡ ರೀಮೇಕ್ ಮಾಡ್ಬೇಕು, ಆ ಚಿತ್ರದಲ್ಲಿ ಪುನೀತ್ ಅವರನ್ನೇ ನಾಯಕರನ್ನಾಗಿಸುತ್ತೇನೆ ಎಂದರು.

'ಥಗ್ಸ್ ಆಫ್ ಮಾಲ್ಗುಡಿ' ಮುಂದೂಡಿದ್ಯಾಕೆ? ಕಾರಣ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ.!

ಕನ್ನಡದ ನೆಚ್ಚಿನ ನಟ ಯಾರು?

ಇನ್ನು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಆಲ್ ಟೈಮ್ ನೆಚ್ಚಿನ ನಟ ಯಾರು ಎಂದು ಕೇಳಿದಾಗ, ಅನಂತ್ ನಾಗ್ ಅವರನ್ನ ಆಯ್ಕೆ ಮಾಡಿಕೊಂಡರು.

ಕನ್ನಡದ ನೆಚ್ಚಿನ ನಟಿ ಯಾರು?

ಅದೇ ರೀತಿ ಕನ್ನಡದಲ್ಲಿ ಆಲ್ ಟೈಮ್ ನೆಚ್ಚಿನ ನಟಿ ಯಾರು ಎಂದಾಗ, ಮಿನುಗು ತಾರೆ ಕಲ್ಪನಾ ಅವರನ್ನ ರಕ್ಷಿತ್ ಶೆಟ್ಟಿ ಆಯ್ಕೆ ಮಾಡಿಕೊಂಡರು.

ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್: ನಾಯಕಿ ಶಾನ್ವಿ

English summary
Kannada Actor And Director Rakshit Shetty Want to Direct Power Star Puneeth Rajkumar in future says in Talk Show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada