»   » '777 ಚಾರ್ಲಿ' ಸಿನಿಮಾದಿಂದ ಔಟ್ ಆದ ಅರವಿಂದ್ ಅಯ್ಯರ್

'777 ಚಾರ್ಲಿ' ಸಿನಿಮಾದಿಂದ ಔಟ್ ಆದ ಅರವಿಂದ್ ಅಯ್ಯರ್

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿದ್ದ ಅರವಿಂದ್ ಅಯ್ಯರ್ 'ಬೀಮಸೇನಾ ನಳಮಹರಾಜ' ಮತ್ತು '777 ಚಾರ್ಲಿ' ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಎರಡು ಸಿನಿಮಾಗಳಲ್ಲಿ 'ಬೀಮಸೇನಾ ನಳಮಹರಾಜ' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿತ್ತು. ಆದರೆ, '777 ಚಾರ್ಲಿ' ಸಿನಿಮಾದಿಂದ ಅರವಿಂದ್ ಅಯ್ಯರ್ ಔಟ್ ಆಗಿದ್ದಾರೆ.

ಅರವಿಂದ್ ಅಯ್ಯರ್ ಬದಲು ಈಗ ಚಿತ್ರಕ್ಕೆ ನಟ ರಕ್ಷಿತ್ ಶೆಟ್ಟಿ ನಾಯಕನಾಗಿದ್ದಾರೆ. ಆದರೆ ಅದಕ್ಕೆ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದಿಲ್ಲ. ಅರವಿಂದ್ ಅಯ್ಯರ್ ಈವರೆಗೆ ಸಿನಿಮಾದ ನಾಯ ಆಗಿದ್ದರು. ಈಗಾಗಲೇ ಸಿನಿಮಾದ ಫೋಟೋ ಶೂಟ್ ಕೂಡ ಆಗಿದ್ದು, ಪ್ರೀತಿಯ ನಾಯಿ ಜೊತೆಗೆ ಅರವಿಂದ್ ಅಯ್ಯರ್ ಕಾಣಿಸಿಕೊಂಡಿದ್ದ ಫೋಟೋ ಸಖತ್ ಆಗಿ ಇತ್ತು.

Rakshit Shetty will playing lead role in 777 Charlie movie.

ಆದರೆ, ಈಗ ಇದ್ದಕಿದ್ದ ಹಾಗೆ, ಅರವಿಂದ್ ಅಯ್ಯರ್ ಮಾಡಬೇಕಾದ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ನಟನೆಯ ಜೊತೆಗೆ ಸಿನಿಮಾಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ರಕ್ಷಿತ್ ವಹಿಸಿಕೊಂಡಿದ್ದಾರೆ.

Rakshit Shetty will playing lead role in 777 Charlie movie.

'777 ಚಾರ್ಲಿ' ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಶ್ವಾನದ ಲೈಸನ್ಸ್ ನಂಬರ್ 777 ಅಂತೆ. ಹೀಗಾಗಿ ಚಿತ್ರಕ್ಕೆ '777 ಚಾರ್ಲಿ' ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿರುವ ಕಿರಣ್ ರಾಜ್‌ ಎಂಬುವವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಪರಿಚಿತವಾಗುತ್ತಿದ್ದಾರೆ.

English summary
Kannada actor Rakshit Shetty will playing lead role in '777 Charlie' kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada