»   » 'ಪೊಲಿಟಿಶಿಯನ್ ನೋಗರಾಜ್' ತಂಡ ಸೇರಿದ ರಕ್ಷಿತ್ ಶೆಟ್ಟಿ

'ಪೊಲಿಟಿಶಿಯನ್ ನೋಗರಾಜ್' ತಂಡ ಸೇರಿದ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ಮಾಪಕ ಮಲ್ಲಿಕಾರ್ಜುನ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಎಂಬ ಸಿನಿಮಾ ಮಾಡ್ತಿರೋದು ಎಲ್ಲರಿಗೂ ಗೊತ್ತೆ ಇದೆ.

ಈ ಚಿತ್ರದಲ್ಲಿ ಟಿವಿ ಸ್ಟಾರ್, ಆರ್ ಜೆ ಡ್ಯಾನೀಶ್ ಸೇಠ್ ನಾಯಕನಾಗಿದ್ದು, ಈ ಚಿತ್ರಕ್ಕೆ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ರಾವ್ ಕೂಡ ನಿರ್ಮಾಪಕರಾಗಿದ್ದಾರೆ.[ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

ಇದೀಗ ಈ ಚಿತ್ರತಂಡಕ್ಕೆ 'ಕಿರಿಕ್ ಪಾರ್ಟಿ'ಯ ರಕ್ಷಿತ್ ಶೆಟ್ಟಿ ಹೊಸದಾಗಿ ಸೇರಿಕೊಂಡಿದ್ದಾರೆ. ಹಾಗಾದ್ರೆ, ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಏನೂ ಮಾಡಲಿದ್ದಾರೆ ಗೊತ್ತಾ? ಮುಂದೆ ಓದಿ...

ಮತ್ತೆ ಒಂದಾದ 'ಗೋಧಿಬಣ್ಣ ಟೀಮ್'

'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಮೂರು ಜನರು, `ಹಂಬಲ್ ಪೊಲಿಟಿಶಿಯನ್ ನೋಗರಾಜ್' ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.

'ನೋಗರಾಜ್' ಜೊತೆ ರಕ್ಷಿತ್ ಶೆಟ್ಟಿ!

ಡ್ಯಾನೀಶ್ ಸೇಠ್ ಅಭಿನಯಸಲಿರುವ `ಹಂಬಲ್ ಪೊಲಿಟಿಶಿಯನ್ ನೋಗರಾಜ್' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಕಪರಾಗಿ ಪ್ರವೇಶ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಈಗಾಗಲೇ ತಮ್ಮ ಪರಂವಾ ಸ್ಟುಡಿಯೋ ಮೂಲಕ 'ಕಿರಿಕ್ ಪಾರ್ಟಿ' ಚಿತ್ರವನ್ನ ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದಾರೆ.

ತ್ರಿಮೂರ್ತಿಗಳು ನಿರ್ಮಾಪಕರು

'ನೋಗರಾಜ್' ಚಿತ್ರಕ್ಕೆ ಮೂರು ಜನ ನಿರ್ಮಾಪಕರು 'ಪುಷ್ಕರ್ ಫಿಲ್ಮ್ಸ'ನ ಪುಷ್ಕರ್ ಮಲ್ಲಿಕಾರ್ಜುನ, 'ಲಾಸ್ಟ್ ಅಂಡ್ ಫೌಂಡ್' ಸಂಸ್ಥೆಯ ಹೇಮಂತ್ ರಾವ್ ಹಾಗೂ 'ಪರಂವಾ ಸ್ಟುಡಿಯೋ'ನ ರಕ್ಷಿತ್ ಶೆಟ್ಟಿ ಸೇರಿ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದಾರೆ.

ಸಾದಾ ಖಾನ್ ನಿರ್ದೇಶನ

ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಈ ಚಿತ್ರ ತಯಾರಾಗಲಿದ್ದು, ಬೆಂಗಳೂರಿನ ಪ್ರಪ್ರಥಮ ಹಿಂದಿ ಚಿತ್ರ 'ಸ್ಟೇಷನ್'ನ್ನು ನಿರ್ದೇಶಿಸಿದ್ದ ಸಾದಾ ಖಾನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಇಂಗ್ಲಿಷ್ ಕಾಂಬಿನೇಶನ್ ಬಳಸಿ ಈ ಚಿತ್ರವನ್ನು ಮಾಡಲಾಗುತ್ತದೆ.

'ನೋಗರಾಜ್' ಚಿತ್ರದಲ್ಲಿ ಶ್ರುತಿ ಹರಿಹರನ್!

ಹಂಬಲ್ ಪೊಲಿಟಿಶಿಯನ್ ನೋಗರಾಜ್' ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದು, ಆದ್ರೆ, ಅವರದ್ದು ಯಾವ ರೀತಿಯ ಮಾತ್ರ ಎಂಬುದು ಬಹಿರಂಗವಾಗಿಲ್ಲ. ರೋಜರ್ ನಾರಾಯಣ್ ಕೂಡ ಅಭಿನಯಿಸುತ್ತಿದ್ದಾರೆ.

ಫೆಬ್ರವರಿ 14ಕ್ಕೆ ಸಿನಿಮಾ ಶುರು

ಅಂದ್ಹಾಗೆ, 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಇದೇ ಫೆಬ್ರವರಿ 14ಕ್ಕೆ ಸೆಟ್ಟೇರಲಿದೆ. 27ರಿಂದ ಚಿತ್ರೀಕರಣ ಶುರು ಮಾಡಲಿದೆ.

English summary
Kannada Actor Rakshit Shetty Joins Hands With Pushkar Mallikarjun and Hemanth Rao for Producing 'Humble Politician Nograj' Movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X