For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ಎಲ್ಲೇ ಹೋದರೂ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಪಕ್ಕಾ.!

  |
  ರಶ್ಮಿಕಾಗೆ ಏನಂತ ವಿಶ್ ಮಾಡಿದ್ರು ರಕ್ಷಿತ್ | RAKSHIT SHETTY | RASHMIKA MANDANNA

  ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಪ್ರೀತಿ ಬ್ರೇಕಪ್ ಆಗಿ ವರ್ಷಗಳೇ ಉರುಳಿವೆ. ಇಬ್ಬರ ಮಧ್ಯೆ ಅರಳಿದ್ದ ಪ್ರೇಮ ಮುದುಡಲು ಕಾರಣ ಏನು ಎಂಬುದಕ್ಕೆ ಅಂತೆ-ಕಂತೆ ಪುರಾಣಗಳಿವೆ ಹೊರತು ರಕ್ಷಿತ್ ಆಗಲಿ, ರಶ್ಮಿಕಾ ಆಗಲಿ ಬಾಯಿಬಿಟ್ಟು ಹೇಳಿಲ್ಲ.

  ಹೀಗಾಗಿ, ಮೀಡಿಯಾ ಮುಂದೆ ರಶ್ಮಿಕಾ ಮಂದಣ್ಣ ಹಾಜರ್ ಆದಾಗೆಲ್ಲಾ ರಕ್ಷಿತ್ ಶೆಟ್ಟಿ ಬಗ್ಗೆ ಯಾರಾದರೂ ಪ್ರಶ್ನೆ ಕೇಳೇ ಕೇಳ್ತಾರೆ. ಹಾಗೇ, ರಕ್ಷಿತ್ ಶೆಟ್ಟಿ ಎಲ್ಲೇ ಹೋದರೂ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಇದ್ದೇ ಇರುತ್ತೆ. ಮೊನ್ನೆ ಆಗಿದ್ದೂ ಇದೆ.!

  ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಗೆ ರೆಡಿ ಆಗಿರೋದು ನಿಮಗೆಲ್ಲ ಗೊತ್ತೇ ಇದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲೂ 'ಅವನೇ ಶ್ರೀಮನ್ನಾರಾಯಣ' ಚಿತ್ರ ಬಿಡುಗಡೆ ಆಗಲಿದೆ. ಚಿತ್ರದ ಪ್ರಚಾರ ಸಲುವಾಗಿ ರಕ್ಷಿತ್ ಶೆಟ್ಟಿ ಚೆನ್ನೈ, ಹೈದರಾಬಾದ್ ಅಂತ ಬಿಜಿಯಾಗಿದ್ದಾರೆ.

  ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ರಕ್ಷಿತ್ ಶೆಟ್ಟಿಗೆ 'ಅವನೇ ಶ್ರೀಮನ್ನಾರಾಯಣ' ಜೊತೆಗೆ ರಶ್ಮಿಕಾ ಮಂದಣ್ಣ ಕುರಿತಾದ ಪ್ರಶ್ನೆಗಳೂ ತೂರಿ ಬರುತ್ತಿವೆ. ವೈಯುಕ್ತಿಕ ವಿಚಾರಗಳ ಬಗ್ಗೆ ತುಟಿಕ್ ಪಿಟಿಕ್ ಎನ್ನದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

  ರಕ್ಷಿತ್-ಶಾನ್ವಿ ನಡುವೆ ಏನೋ ನಡೀತಾ ಇದೆಯಂತೆ, ನಿಜಾನಾ..?ರಕ್ಷಿತ್-ಶಾನ್ವಿ ನಡುವೆ ಏನೋ ನಡೀತಾ ಇದೆಯಂತೆ, ನಿಜಾನಾ..?

  ಕ್ರಿಸ್ಮಸ್ ಬರ್ತಿರೋದ್ರಿಂದ ಸಾಂತಾ ಬಳಿ ''ರಶ್ಮಿಕಾ ಕನಸುಗಳೆಲ್ಲಾ ನನಸು ಆಗಲಿ ಎಂದು ಕೇಳಿಕೊಳ್ಳುತ್ತೇನೆ'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಅಂದ್ಹಾಗೆ, 'ಅವನೇ ಶ್ರೀಮನ್ನಾರಾಯಣ' ಕರ್ನಾಟಕದಾದ್ಯಂತ ಡಿಸೆಂಬರ್ 27 ರಂದು ಬಿಡುಗಡೆ ಆಗಲಿದೆ, ನೋಡಲು ನೀವು ರೆಡಿನಾ.?

  English summary
  Kannada Actor Rakshit Shetty wishes good for Rashmika Mandanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X