ರಶ್ಮಿಕಾರ ಹಳೆಯ ವಿಡಿಯೋ ಹಂಚಿಕೊಂಡು ಶುಭಾಶಯ ಕೋರಿದ ರಕ್ಷಿತ್ ಶೆಟ್ಟಿ

ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಇಂದು (ಏಪ್ರಿಲ್ 05). ಕನ್ನಡ ಚಿತ್ರರಂಗದಿಂದ ನಟನಾ ವೃತ್ತಿ ಆರಂಭಿಸಿದ ರಶ್ಮಿಕಾ ಇಂದು ಬಾಲಿವುಡ್‌ನಲ್ಲಿ ಛಾಪು ಮೂಡಿಸಲು ತಯಾರಾಗಿದ್ದಾರೆ.

ರಶ್ಮಿಕಾ ಅವರ ವೃತ್ತಿಯ ಗ್ರಾಫು ಏರುಮುಖದಲ್ಲಿ ಸಾಗಿದೆ. ರಶ್ಮಿಕಾ ಅವರನ್ನು ಸಿನಿಮಾಕ್ಕೆ ಪರಿಚಯಿಸುವ ಹಾಗೂ ಮೊದಲ ಸಿನಿಮಾದಲ್ಲಿಯೇ ಅವರಿಗೆ ನಟನೆಯ ಮೂಲಪಟ್ಟುಗಳನ್ನು ಹೇಳಿಕೊಡುವುದರಲ್ಲಿ ರಕ್ಷಿತ್ ಶೆಟ್ಟಿ ಪಾತ್ರ ದೊಡ್ಡದು.

ರಶ್ಮಿಕಾರ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ'ಯಲ್ಲಿ ಮೋಡಿ ಮಾಡಿದ ರಶ್ಮಿಕಾ-ರಕ್ಷಿತ್ ಜೋಡಿ ನಿಜಜೀವನದಲ್ಲಿಯೂ ಒಂದಾಗಲು ನಿಶ್ಚಯಿಸಿ ನಿಶ್ಚಿತಾರ್ಥ ಮಾಡಿಕೊಂಡಿತು. ಆದರೆ ಅನಿವಾರ್ಯ ಕಾರಣಗಳಿಂದ ನಿಶ್ಚಿತಾರ್ಥ ಮುರಿದು ಬಿತ್ತು. ಆ ಬಳಿಕ ಕೆಲವು ವರ್ಷ ಪರಸ್ಪರಿಂದ ಅಂತರ ಕಾಯ್ದುಕೊಂಡಿದ್ದ ಇಬ್ಬರೂ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಸಂವಹನ ಆರಂಭಿಸಿದ್ದಾರೆ.

 Rakshit Shetty Wished Rashmika By Posting Her Old Video

ಇಂದು ರಶ್ಮಿಕಾ ಅವರ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ಜೊತೆಗೆ ರಶ್ಮಿಕಾ ಅವರ ಹಳೆಯ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾಕ್ಕೆ ರಶ್ಮಿಕಾ ಆಡಿಷನ್ ನೀಡಿದ್ದ ವಿಡಿಯೋವನ್ನು ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಶ್ಮಿಕಾ ಸಾಕಷ್ಟು ಬಾರಿ ತಪ್ಪುಗಳನ್ನು ಹೇಳುತ್ತಾರೆ, ಅವನ್ನೆಲ್ಲ ರಕ್ಷಿತ್ ಶೆಟ್ಟಿ ತಿದ್ದಿ ಸಂಭಾಷಣೆ ಹೇಳಿಕೊಟ್ಟಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ''ಕಿರಿಕ್ ಪಾರ್ಟಿ' ಆಡಿಷನ್‌ ವಿಡಿಯೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದೊಂದು ಮಧುರ ನೆನಪು. ಆವಾಗಿನ ಸಂದರ್ಭಕ್ಕೆ ಹೋಲಿಸಿದರೆ ನೀನು ಬಹಳ ದೂರ ಸಾಗಿದ್ದೀಯ. ನಿನ್ನ ಕನಸುಗಳನ್ನು ಯೋಧನ ರೀತಿ ಬೆನ್ನು ಹತ್ತಿದ್ದೀಯ. ನಿನ್ನ ಬಗ್ಗೆ ಹೆಮ್ಮೆಯಾಗುತ್ತದೆ ಹುಡುಗಿ. ಹುಟ್ಟುಹಬ್ಬದ ಶುಭಾಶಯಗಳು ನಿನಗೆ. ನಿನಗೆ ಇನ್ನಷ್ಟು ಯಶಸ್ಸು ದೊರಕಲಿ' ಎಂದು ಶುಭ ಹಾರೈಸಿದ್ದಾರೆ ರಕ್ಷಿತ್ ಶೆಟ್ಟಿ.

Recommended Video

ಜಿಮ್ ಮೇಲಿರುವ ನಿರ್ಬಂಧ ತೆಗೆಯುವಂತೆ ಯಶ್ ಒತ್ತಾಯ | Filmibeat Kannada

ರಶ್ಮಿಕಾ ಮಂದಣ್ಣ ಈಗ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ತೆಲುಗು-ತಮಿಳಿನಲ್ಲಿ ಸ್ಟಾರ್ ನಟರೊಂದಿಗೆ ನಟಿಸಿರುವ ರಶ್ಮಿಕಾ, ಇದೀಗ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದರಲ್ಲಿ ಖ್ಯಾತ ನಟ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actor Rakshit Shetty wished Rashmika Mandanna by posting old video of her on twitter. Today Rashmika's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X