For Quick Alerts
  ALLOW NOTIFICATIONS  
  For Daily Alerts

  'ಕಂಗ್ರಾಟ್ಸ್ ಮಗಾ': ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಕುಚಿಕು ರಿಷಬ್ ಗೆ ರಕ್ಷಿತ್ ಶುಭಾಶಯ

  |
  ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಕುಚಿಕು ರಿಷಬ್ ಗೆ ರಕ್ಷಿತ್ ಶುಭಾಶಯ | RAKSHITH | RISHAB | FILMIBEAT KANNADA

  66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆಯಷ್ಟೇ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಪ್ರಶಸ್ತಿ ಪುರಸ್ಕೃತರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ವಿತರಿಸಿದರು.

  2018ನೇ ಸಾಲಿನ 'ಅತ್ಯುತ್ತಮ ಮಕ್ಕಳ ಚಿತ್ರ' ಪ್ರಶಸ್ತಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಪಾಲಾಗಿದೆ. ಈ ಚಿತ್ರಕ್ಕೆ ಬಂಡವಾಳ ಹಾಕಿ ಆಕ್ಷನ್ ಕಟ್ ಹೇಳಿದ್ದ ರಿಷಬ್ ಶೆಟ್ಟಿ ನಿನ್ನೆ ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದರು.

  ರಾಷ್ಟ್ರ ಪ್ರಶಸ್ತಿ ಪಡೆಯುವ ಸಂತಸದ ಕ್ಷಣವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಆತ್ಮೀಯ ಗೆಳೆಯ ರಿಷಬ್ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಶುಭಾಶಯ ತಿಳಿಸಿದ್ದಾರೆ. ''ಎಂಥಾ ಸಾಧನೆ.. ನಿನ್ನ ಮೇಲೆ ಇಡೀ ತಂಡಕ್ಕೆ ಹೆಮ್ಮೆ ಇದೆ ಮಗಾ. ಇನ್ನೂ ಹೆಚ್ಚು ಯಶಸ್ಸು ನಿನ್ನದಾಗಲಿ'' ಎಂದು ರಕ್ಷಿತ್ ಶೆಟ್ಟಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  'ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ': ರಿಷಬ್ ಶೆಟ್ಟಿ'ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ': ರಿಷಬ್ ಶೆಟ್ಟಿ

  ರಕ್ಷಿತ್ ಶೆಟ್ಟಿಯ ಮನತುಂಬಿದ ಹಾರೈಕೆಗೆ ''ಥ್ಯಾಂಕ್ಯು ಮಗಾ'' ಅಂತ ರಿಪ್ಲೈ ಮಾಡಿದ್ದಾರೆ ರಿಷಬ್ ಶೆಟ್ಟಿ.

  ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಚಿತ್ರರಂಗದ ಗಣ್ಯರುರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಚಿತ್ರರಂಗದ ಗಣ್ಯರು

  ಅಷ್ಟಕ್ಕೂ, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕ್ಲೋಸ್ ಫ್ರೆಂಡ್ಸ್. ಇಬ್ಬರೂ ಒಟ್ಟಾಗಿ ರೆಡಿ ಮಾಡಿದ್ದ 'ಕಿರಿಕ್ ಪಾರ್ಟಿ' ಸಿನಿಮಾ ಕಮಾಲ್ ಮಾಡಿತ್ತು. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲೂ ರಿಷಬ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇದೇ ವಾರ 'ಅವನೇ ಶ್ರೀಮನ್ನಾರಾಯಣ' ನಿಮ್ಮ ಮುಂದೆ ಬರಲಿದೆ.

  English summary
  Rakshit Shetty wishes Rishab Shetty for receiving National Award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X