'777 ಚಾರ್ಲಿ' ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್

By Naveen

Recommended Video

777 ಚಾರ್ಲಿ ಸಿನಿಮಾದ ಪೋಸ್ಟರ್ ಹೇಗಿದೆ ನೋಡಿ | Filmibeat Kannada

'777 ಚಾರ್ಲಿ' ಸಿನಿಮಾ ಈಗಾಗಲೇ ಬಹಳಷ್ಟು ವಿಚಾರಗಳಗೆ ವಿಭಿನ್ನತೆ ಮೂಡಿಸಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಚಿತ್ರದ ಟೈಟಲ್ ಪೋಸ್ಟರ್ ಅನ್ನು ಈಗ ಚಿತ್ರತಂಡ ಹೊರತಂದಿದೆ.

ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ಎರಡು ಪೋಸ್ಟರ್ ಅನ್ನು ಡಿಸೈನ್ ಮಾಡಲಾಗಿದೆ. ಸರಳ ಸುಂದರ ಪೋಸ್ಟರ್ ಇದಾಗಿದೆ. ಇನ್ನು ಚಿತ್ರದ ನಿರ್ದೇಶಕ ಕಿರಣ್ ರಾಜ್ ಕೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.

'777 ಚಾರ್ಲಿ' ಚಿತ್ರದಲ್ಲಿ ಮೊದಲು 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿದ್ದ ಅರವಿಂದ್ ಅಯ್ಯರ್ ನಾಯಕನಾಗಿದ್ದರು. ಆದರೆ ಈಗ ರಕ್ಷಿತ್ ಶೆಟ್ಟಿ ಅವರೇ ಸಿನಿಮಾದ ಹೀರೋ ಆಗಿದ್ದಾರೆ. ನಟನೆಯ ಜೊತೆಗೆ ಸಿನಿಮಾಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ರಕ್ಷಿತ್ ವಹಿಸಿಕೊಂಡಿದ್ದಾರೆ.

Rakshit Shettys 777 Charlie movie first look title poster released

'777 ಚಾರ್ಲಿ' ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಶ್ವಾನದ ಲೈಸನ್ಸ್ ನಂಬರ್ 777 ಅಂತೆ. ಹೀಗಾಗಿ ಚಿತ್ರಕ್ಕೆ '777 ಚಾರ್ಲಿ' ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ರಕ್ಷಿತ್ ಶೆಟ್ಟಿ ಜೊತೆ 'ರಿಕ್ಕಿ', 'ಕಿರಿಕ್ ಪಾರ್ಟಿ' ಚಿತ್ರಗಳಿಲ್ಲಿ ಕೆಲಸ ಮಾಡಿರುವ ನಿರ್ದೇಶಕ ಕಿರಣ್ ರಾಜ್‌ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಪರಿಚಿತವಾಗುತ್ತಿದ್ದಾರೆ.

More from Filmibeat

English summary
Kannada actor Rakshit Shetty's 777 Charlie movie first look title poster released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X