ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಬಳಿ ರಕ್ಷಿತ್ ಶೆಟ್ಟಿ ವಿಶೇಷ ಮನವಿ
ಜನವರಿ 22ರಂದು ಲೋಕಾರ್ಪಣೆಗೊಂಡ ಅಯೋಧ್ಯೆ ರಾಮಮಂದಿರಕ್ಕೆ ಈಗಾಗಲೇ ಲಕ್ಷಾಂತರ ಜನ ಭಕ್ತರು ಭೇಟಿ ನೀಡಿದ್ದಾರೆ. ಪ್ರತಿದಿನ ಸಾವಿರಾರು ಜನ ರಾಮಲಲ್ಲನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ದೇಶ ವಿದೇಶದಿಂದ ಭಕ್ತರು ಅಯೋಧ್ಯೆ ಭೇಟಿ ನೀಡುತ್ತಿದ್ದಾರೆ. ರಾಮ್ ಪಥದಲ್ಲಿ 2 ಕಿಲೋಮೀಟರ್ ನಡೆದು ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಾರೆ.
ಬಾಲಿವುಡ್ ಆದಿಯಾಗಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸೆಲೆಬ್ರೆಟಿಗಳಿಗೆ ರಾಮಮಂದಿರ ಲೋಕಾರ್ಪಣೆಗೆ ಆಹ್ವಾನ ಸಿಕ್ಕಿತ್ತು. ಸ್ಯಾಂಡಲ್‌ವುಡ್‌ನಿಂದ ರಿಷಬ್ ಶೆಟ್ಟಿ, ಯಶ್ ಸೇರಿದಂತೆ ಕೆಲವರಿಗೆ ಆಹ್ವಾನವಿತ್ತು. ರಿಷಬ್ ಭಾಗಿ ಆಗಿದ್ದರು. ಯಶ್ ಕಾರಣಾಂತರಗಳಿಂದ ಹೋಗಿರಲಿಲ್ಲ. ಇತ್ತೀಚೆಗೆ ನಟ ರಕ್ಷಿತ್ ಶೆಟ್ಟಿ ಅಯೋಧ್ತೆ ರಾಮಲಲ್ಲನ ದರ್ಶನ ಮಾಡಿ ಬಂದಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಯೋಧ್ಯೆ ಭೇಟಿ, ಶ್ರೀರಾಮ ಮೂರ್ತಿಯ ದರ್ಶನ ಪಡೆದ ಬಗ್ಗೆ ಬರೆದುಕೊಂಡಿದ್ದರು. "ಬೇರಾವ ವಿಗ್ರಹದ ಮುಂದೆ ಅರ್ಧ ಗಂಟೆ ಕೂತವನಲ್ಲ ನಾನು" ಎಂದು ರಾಮಲಲ್ಲ ವಿಗ್ರಹದ ಬಗ್ಗೆ ರಕ್ಷಿತ್ ಶೆಟ್ಟಿ ವಿವರಿಸಿದ್ದರು. ರಾಮಲಲ್ಲ ವಿಗ್ರಹ ನೋಡಿದಾಗ ತಮಗಾದ ಅದ್ಭುತ ಅನುಭವವನ್ನು ವರ್ಣಿಸಿದ್ದರು. ಇದೀಗ ವಿಗ್ರಹ ಕೆತ್ತನೆ ಮಾಡಿದ ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಬಳಿ ಸಿಂಪಲ್ ಸ್ಟಾರ್ ವಿಶೇಷ ಮನವಿ ಮಾಡಿದ್ದಾರೆ.
ರಾಮಲಲ್ಲ ವಿಗ್ರಹ ನೋಡಿ ಮೈಮರೆತ ನಟ ರಕ್ಷಿತ್ ಶೆಟ್ಟಿ ತಮ್ಮ ಅನುಭವ ಹಂಚಿಕೊಂಡಿದ್ದರು. ವಿಗ್ರಹದ ಕುಸುರಿ ಕೆಲಸದ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಇದರ ಬೆನ್ನಲ್ಲೇ "ಅರುಣ್ ಯೋಗಿರಾಜ್ ನಿಮ್ಮನ್ನು ಭೇಟಿಯಾಗಲು ಒಂದು ಅವಕಾಶ ಕೊಡಿ" ಎಂದು ಟ್ವೀಟ್ ಮಾಡಿ ಸಿಂಪಲ್ ಸ್ಟಾರ್ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿಲ್ಲಿ ಅರುಣ್ ಯೋಗಿರಾಜ್ "ಕಲಾವಿದನಿಗೆ ಎಂದಿಗೂ ಮತ್ತೊಬ್ಬ ಕಲಾವಿದನನ್ನು ಭೇಟಿ ಮಾಡುವುದು ಖುಷಿ ತರುವ ಸಂಗತಿ. ನಿಮ್ಮಂತಹ ಸೃಜನಶೀಲ ವ್ಯಕ್ತಿಯನ್ನು ಭೇಟಿ ಮಾಡಿ ಸ್ಫೂರ್ತಿ ಪಡೆದುಕೊಳ್ಳುವ ಅವಕಾಶಕ್ಕಾಗಿ ನಾನು ಕೂಡ ಎದುರು ನೋಡುತ್ತಿದ್ದೇನೆ" ಎಂದು ರಿಪ್ಲೇ ಮಾಡಿದ್ದಾರೆ.
ಇನ್ನು ಅಯೋಧ್ಯೆ ಭೇಟಿ ಬಳಿಕ ರಕ್ಷಿತ್ ಶೆಟ್ಟಿ ತಮ್ಮ ಅನುಭವವನ್ನು ಈ ರೀತಿ ವ್ಯಕ್ತಪಡಿಸಿದ್ದರು. "ಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮಲಲ್ಲನನ್ನು ನೇರವಾಗಿ ನೋಡುವ ಹಂಬಲ. ಆತನ ಕಣ್ಣುಗಳು ರಿಯಲ್ ಎಂದು ಎಂದುಕೊಂಡಿದ್ದೆ.ಅದು ಎಷ್ಟು ನೈಜವಾಗಿದೆ ಎಂಬುದನ್ನು ನೋಡಲು ನಾನು ಆತನ ಅನೇಕ ಚಿತ್ರಗಳನ್ನು ಜೂಮ್ ಮಾಡಿ ನೋಡಿದ್ದೆ.
ವಿಗ್ರಹ ನೋಡಿದಾಗ ಆದ ಅದ್ಭುತ ಅನುಭವದಿಂದ ಹೀಗೆ ಅನಿಸಿತು ತೋರುತ್ತಿದೆ. ಬಹುಶಃ ಈ ಪರಿಣಾಮವನ್ನು ಪಡೆಯಲು ಶಿಲ್ಪಿ ಕಣ್ಣಿನ ಬಿಳಿ ಭಾಗವನ್ನು ಅಡ್ಡ-ಅಡ್ಡ ರೀತಿಯಲ್ಲಿ ಕೆತ್ತಿರಬೇಕು, ಎಂದು ಹಲವು ಬಾರಿ ಫೋಟೊ ಜೂಮ್ ಮಾಡಿ ನೋಡಿದ ಬಳಿಕ ನನ್ನ ಅರಿವಿಗೆ ಬಂತು.
ಇಂದು ನಾನು ರಾಮಮೂರ್ತಿಯನ್ನು ಹತ್ತಿರದಿಂದ ದರ್ಶನ ಮಾಡಿದೆ. ಬಹಳ ಕಡಿಮೆ ಜನರಿಗೆ ಇಂತಹ ಅವಕಾಶ ಸಿಗುತ್ತದೆ. ರಾಮನ ಮೂರ್ತಿಯ ಮುಂದೆ ಸುಮಾರು ಅರ್ಧ ತಾಸು ನಾನು ಕುಳಿತಿದ್ದೆ. ಈ ರೀತಿ ನಾನು ಯಾವ ಮೂರ್ತಿಯ ಮುಂದೆಯೂ ಕೂತಿದ್ದಿಲ್ಲ. ಅವನನ್ನೇ ನೋಡುತ್ತಾ ಕುಳಿತು ಬಿಟ್ಟಿದ್ದೆ"
"ನಾನು ಸಾಮಾನ್ಯವಾಗಿ ಎಲ್ಲಾ ವಿಗ್ರಹಗಳ ಕೆಲಸವನ್ನು ಮೆಚ್ಚುತ್ತೇನೆ, ಆದರೆ ಪ್ರಾಯಶಃ ರಾಮನೇ ನಮ್ಮಿಂದ ಮಾಡಿಸಿದ್ದು ಇರಬಹುದು. ಅರುಣ್ ಯೋಗಿರಾಜ್ ಜೀವಂತ ದಂತಕಥೆಯಾಗಿದ್ದು, ಅವರನ್ನು ತಲೆಮಾರುಗಳಿಗೆ ನೆನಪಿಸಿಕೊಳ್ಳುತ್ತಾರೆ.ನಾನು ಅವರ ದೈವಿಕ ಕೆಲಸವನ್ನು ನೋಡಿದಾಗ, ಒಂದು ದಿನ ನಾನು ಅವರನ್ನು ಭೇಟಿ ಮಾಡಲು ಮತ್ತು ನಮ್ಮ ಆರಾಧ್ಯ ರಾಮನನ್ನು ಕೆತ್ತಿದ ಅವರ ಅನುಭವದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಜೈ ಸಿಯಾ ರಾಮ್, ಜೈ ಶ್ರೀ ರಾಮ್"

"ಕೆಲವು ವರ್ಷಗಳ ಹಿಂದೆ, ಲಾಕ್‌ಡೌನ್ ಸಮಯದಲ್ಲಿ, ಕೆಲವು ಕಾರಣಗಳಿಗಾಗಿ, ನಾನು 504 ಚಂದ್ರನ ಪರಿಭ್ರಮಣೆಯನ್ನು ಲೆಕ್ಕ ಹಾಕಿದ್ದೆ. ನಾನು ಆ ದಿನಾಂಕವನ್ನು ಸಂಪೂರ್ಣವಾಗಿ ಮರೆತಿದ್ದೆ. ಅದಾದ ಬಳಿಕ ಕಾಕತಾಳೀಯವೆಂಬಂತೆ, ಅದೇ ದಿನ ನಾನು ಕೃಷ್ಣ ಪಕ್ಷ ದಶಮಿಯಂದು ಪ್ರಯಾಗ್‌ರಾಜ್‌ನಲ್ಲಿದ್ದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದೆ. ಕಾಶಿಗೆ ಭೇಟಿ ನೀಡಿದ್ದೆ. ಮರುದಿನ ನನ್ನ ಮುಂದಿನ ಪ್ರಾಜೆಕ್ಟ್‌ಗಳಿಗೆ ಸಂಕಲ್ಪ ಮಾಡಿದೆ. ಇದೆಲ್ಲವನ್ನು ನಾನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮರುದಿನ, ನಾನು ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಪರಿವಾರ ಸಮೇತದ ಉತ್ಸವ ಮೂರ್ತಿಯ ಮುಂದೆ ನನ್ನ ಭವಿಷ್ಯದ ಯೋಜನೆಗಳಿಗಾಗಿ ಸಂಕಲ್ಪ ಮಾಡಬೇಕಾಗಿತ್ತು. ನಾನು ಇದನ್ನು ಮಾಡಲು ಹೇಗೆ ಭಾವಿಸಿದೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಶ್ರೀ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡುವುದು ಕೂಡ ಒಂದು ಸುಂದರ ಅನುಭವ. ನನ್ನನ್ನು ಚೆನ್ನಾಗಿ ಸ್ವೀಕರಿಸಿದ್ದಕ್ಕಾಗಿ ಟ್ರಸ್ಟಿಗಳಿಗೆ ಧನ್ಯವಾದಗಳು. ಈ ಆರೋಗ್ಯಕರ ಅನುಭವಕ್ಕಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಮಹೇಶ್ ಠಾಕೂರ್ ಅವರಿಗೆ ಧನ್ಯವಾದಗಳು. ಈ ಸುಂದರ ಪ್ರವಾಸದಲ್ಲಿ ನನ್ನ ಜೊತೆಗಿದ್ದ ನನ್ನ ಸಹೋದರ ರಂಜಿತ್, ಸೋದರ ಸಂಬಂಧಿ ಶ್ರೀನಿಶ್ ಮತ್ತು ನನ್ನ ಸಹೋದರ ಸ್ನೇಹಿತರಾದ ಸಂದೇಶ್ ಅಣ್ಣ ಮತ್ತು ದೇವಿ ಚರಣ್ ಕಾವಾ ಅವರಿಗೆ ಧನ್ಯವಾದಗಳು. ಇದು ನಿಜವಾಗಿಯೂ ವಿಶೇಷವಾಗಿತ್ತು. ಜೈ ಆಂಜನೇಯ... ಜೈ ಶ್ರೀ ರಾಮ್" ಎಂದು ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.


Click it and Unblock the Notifications











