For Quick Alerts
  ALLOW NOTIFICATIONS  
  For Daily Alerts

  ಪ್ರೇಮ್‌ ಬಗ್ಗೆ ದರ್ಶನ್ ಹೇಳಿಕೆ: ಕೆಂಡವಾದ ರಕ್ಷಿತಾ

  |

  ನಿರ್ದೇಶಕ ಪ್ರೇಮ್‌ ಬಗ್ಗೆ ನಟ ದರ್ಶನ್ ಅವಹೇಳನಕಾರಿಯಾಗಿ ಮಾತನಾಡಿರುವುದು ದರ್ಶನ್ ಗೆಳತಿ ರಕ್ಷಿತಾರನ್ನು ಕೆರಳಿಸಿದೆ.

  ತಮ್ಮ ಪತಿ ಪ್ರೇಮ್‌ ಬಗ್ಗೆ ದರ್ಶನ್ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ತೀವ್ರ ಅಸಮಾಧಾನವನ್ನು ಸಾಮಾಜಿಕ ಜಾಲತಾಣ ಮೂಲಕ ರಕ್ಷಿತಾ ವ್ಯಕ್ತಪಡಿಸಿದ್ದಾರೆ.

  ''ಯಾರಾದರೂ ಇನ್ನೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಮುನ್ನ ಅವರು ತಮ್ಮ ಜೀವನದಲ್ಲಿ ಏನಾಗಿದ್ದಾರೆ ಎಂದು ನೋಡಿಕೊಳ್ಳಬೇಕು. ಜನಗಳ ಮುಂದೆ ಏನು ಮಾತನಾಡಬೇಕು, ಹೇಗೆ ಮಾತನಾಡಬೇಕು ಎಂದು ಅರಿತುಕೊಳ್ಳಬೇಕು'' ಎಂದಿದ್ದಾರೆ ರಕ್ಷಿತಾ.

  ಮತ್ತೊಂದು ಪೋಸ್ಟ್‌ನಲ್ಲಿ, ''ಮುಖ ಇಲ್ಲದ ಫೇಸ್‌ಬುಕ್ ಪ್ರೊಫೈಲ್‌ಗಳು ನನ್ನನ್ನು ಟಾರ್ಗೆಟ್ ಮಾಡುತ್ತಿವೆ ಏಕೆ? ನಾನು, ನನ್ನ ಪತಿ ಪ್ರೇಮ್ ಪರ ಬೆಂಬಲಕ್ಕೆ ನಿಂತಿದ್ದೇನೆ. ಅದಕ್ಕೆ ಅವರೆಲ್ಲ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ನನ್ನ ಪತಿಯ ಪರವಾಗಿ ನಿಂತರೆ ಉಳಿದವರನ್ನು ನಾನು ವಿರೋಧಿಸುತ್ತೇನೆ ಎಂದು ಹೇಗೆ ಪರಿಗಣಿಸಿದಿರಿ'' ಎಂದು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ.

  ''ಇನ್ನು ಮುಂದೆ, ನನ್ನ ಯೋಚನಾ ಕ್ರಮ ಯಾರಿಗಾದರೂ ಸರಿ ಎನಿಸಲಿಲ್ಲವೆಂದರೆ ಅದು ನಿಮ್ಮ ವ್ಯಕ್ತಿತ್ವದ ಸಮಸ್ಯೆಯೇ ಹೊರತು ನನ್ನ ಸಮಸ್ಯೆ ಅಲ್ಲ. ನಾನು ಪ್ರೇಮ್ ಬೆಂಬಲಕ್ಕೆ ನಿಲ್ಲುತ್ತೇನೆ. ಅದು ಅವರೊಬ್ಬರಿಗೆ ಅರ್ಥವಾದರೆ ಸಾಕು ಇನ್ಯಾರಿಗೂ ಅರ್ಥವಾಗುವ ಅವಶ್ಯಕತೆ ಇಲ್ಲ'' ಎಂದಿದ್ದಾರೆ ರಕ್ಷಿತಾ.

  ''ಈಗ ನಮ್ಮ ಮದುವೆ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಲು ಹೊರಟಿರುವ ಎಲ್ಲರಿಗೂ ನಾಚಿಕೆಯಾಗಬೇಕು'' ಎಂದಿದ್ದಾರೆ ರಕ್ಷಿತಾ.

  ಮೈತುಂಬ ವಿವಾದಗಳಿದ್ದರೂ ದರ್ಶನ್ ಸ್ಟಾರ್ ಗಿರಿ ಮಂಕಾಗದಿರಲು ಇಲ್ಲಿವೆ ಕಾರಣಗಳು | Filmibeat Kannada

  ನಿನ್ನೆ ಮಾಧ್ಯಮಗಳೊಟ್ಟಿಗೆ ಆಕ್ರೋಶದಿಂದ ಮಾತನಾಡಿದ್ದ ನಟ ದರ್ಶನ್, 'ಜೋಗಿ ಪ್ರೇಮ್ ಏನು ದೊಡ್ಡ ಪುಡುಂಗಾ? ಅನಿಗೆ ಎರಡು ಕೊಂಬಿದ್ಯಾ? ಎಂದು ಆಕ್ರೋಶದಿಂದ ಪ್ರಶ್ನಿಸಿದ್ದರು. ಇದು ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ರಕ್ಷಿತಾ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರೇಮ್ ಸಹ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಕುರಿತು ಉದ್ದದ ಫೋಸ್ಟ್ ಒಂದನ್ನು ಹಾಕಿದ್ದಾರೆ.

  English summary
  Actress Rakshita disappointed Darshan's comments about director Prem. She said Before commenting on others one must look at what they are doing in their own lives.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X