ಸಂಭ್ರಮದ ಸಮಯದಲ್ಲಿ ಸ್ನೇಹಿತ ದರ್ಶನ್‌ನನ್ನು ಮಿಸ್ ಮಾಡಿಕೊಳ್ಳುತ್ತಿರುವ ರಕ್ಷಿತಾ
ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದ ಬಳಿಕ ದರ್ಶನ್ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಕೆಲವರು ಪರ ವಹಿಸಿ ಮಾತನಾಡಲು ಹಿಂದೇಟು ಹಾಕುವಂತಾಗಿದೆ. ಕೆಲವರು ಮಾತ್ರ ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಎಂದು ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ನಟಿ ರಕ್ಷಿತಾ ಕೂಡ ಒಬ್ರು.
ದರ್ಶನ್ ಹಾಗೂ ರಕ್ಷಿತಾ ಸ್ನೇಹ ಇಂದು ನಿನ್ನೆಯದ್ದಲ್ಲ. 'ಕಲಾಸಿಪಾಳ್ಯ' ಚಿತ್ರದಲ್ಲಿ ಇಬ್ಬರೂ ಮೊದಲ ಬಾರಿ ಒಟ್ಟಿಗೆ ನಟಿಸಿದ್ದರು. ಬಳಿಕ 'ಅಯ್ಯ' ಚಿತ್ರದಲ್ಲಿ ಕೂಡ ಇವರಿಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಮುಂದೆ 'ಸುಂಟರಗಾಳಿ' ಹಾಗೂ 'ಮಂಡ್ಯ' ಚಿತ್ರದಲ್ಲೂ ಈ ಜೋಡಿ ಮೋಡಿ ಮಾಡಿತ್ತು. ನಿಜ ಜೀವನದಲ್ಲಿ ಕೂಡ ಇಬ್ಬರೂ ಆತ್ಮೀಯ ಸ್ನೇಹಿತರು. ಹೋಗೋ ಬಾರೋ, ಹೋಗೆ ಬಾರೆ ಎನ್ನುವಷ್ಟು ಆತ್ಮೀಯರು. ದರ್ಶನ್ ಜೈಲು ಸೇರಿದ ಬಳಿಕ ಸ್ನೇಹಿತನನ್ನು ರಕ್ಷಿತಾ ಬಹಳ ಮಿಸ್ ಮಾಡಿಕೊಳ್ಳುತ್ತಿದ್ಧಾರೆ.

ಕಳೆದ ವರ್ಷ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗ ರಕ್ಷಿತಾ ಹೋಗಿ ಭೇಟಿ ಮಾಡಿ ಬಂದಿದ್ದರು. ದರ್ಶನ್ ಜಾಮೀನು ಪಡೆದು ಬಂದ ಬಳಿಕ ರಕ್ಷಿತಾ ಸಹೋದರ ರಾಣಾ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಇತ್ತೀಚೆಗೆ ರಕ್ಷಿತಾ ಸಹೋದರ ರಾಣಾ ಹೊಸ ಪಬ್ ಆರಂಭಿಸಿದ್ದಾರೆ. ಉದ್ಛಾಟನೆ ಸಮಾರಂಭಕ್ಕೆ ನಟ ಸುದೀಪ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸೇರಿದಂತೆ ಹಲವರು ಭಾಗಿ ಆಗಿದ್ದರು.
ನಿಜಕ್ಕೂ ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಈಗಾಗಲೇ ಜೆಪಿ ನಗರದಲ್ಲಿ ರಾಣಾ ಒಂದು ಪಬ್ ಹೊಂದಿದ್ದಾರೆ. ಇದೀಗ ನಾಗರಬಾವಿಯಲ್ಲಿ 'ಲೆವೆಲ್ಸ್ ಪಬ್' ಉದ್ಘಾಟನೆಯಾಗಿದೆ. ದರ್ಶನ್ ಹೊರಗಡೆ ಇದ್ದಿದ್ದರೆ ಈ ಸಂಭ್ರಮಕ್ಕೆ ಸಾಕ್ಷಿ ಆಗಿರುತ್ತಿದ್ದರು. ಆದರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಅದಕ್ಕೆ ಅವಕಾಶ ಸಿಕ್ಕಿಲ್ಲ. ಪಬ್ ಉದ್ಘಾಟನೆ ಬಳಿಕ ದರ್ಶನ್ ಅಭಿನಯದ ಸಿನಿಮಾ ಗೀತೆಗಳನ್ನು ಅಲ್ಲಿ ಪ್ಲೇ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಹಂಚಿಕೊಂಡು "ಐ ಮಿಸ್ ಯೂ ಮೈ ಫ್ರೆಂಡ್" ಎಂದು ರಕ್ಷಿತಾ ಇನ್‌ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದಾರೆ.

'ರಾಬರ್ಟ್' ಚಿತ್ರದ 'ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ', 'ಕಲಾಸಿಪಾಳ್ಯ' ಚಿತ್ರದ 'ಸುಂಟರಗಾಳಿ ಸುಂಟರಗಾಳಿ' ಹಾಡುಗಳನ್ನು ಪಬ್‌ನಲ್ಲಿ ಪ್ಲೇ ಮಾಡಿದ್ದಾರೆ. ಗ್ರಾಹಕರು ಹಾಡು ಕೇಳಿ ಸಂಭ್ರಮದಿಂದ ಹರ್ಷೋದ್ಘಾರ ಮಾಡಿದ್ದು ಆ ವೀಡಿಯೋಗಳನ್ನು ರಕ್ಷಿತಾ ಪೋಸ್ಟ್ ಮಾಡಿದ್ದಾರೆ. ಇನ್ನು ಈ ಪಬ್ ಉದ್ಘಾಟನೆ ಸಂಭ್ರಮದಲ್ಲಿ ಸುದೀಪ್ ಹಾಗೂ ಉಮಾಪತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ.
ಸುದೀಪ್ ನಟನೆಯ 'ಹೆಬ್ಬುಲಿ' ಚಿತ್ರವನ್ನು ಉಮಾಪತಿ ನಿರ್ಮಿಸಿದ್ದರು. ಬಳಿಕ ಅವರು ದರ್ಶನ್ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡಿದ್ದರು. 'ರಾಬರ್ಟ್' ಸಿನಿಮಾ ಮಾಡಿ ಗೆದ್ದಿದ್ದರು. ಮುಂದೆ ದರ್ಶನ್-ಉಮಾಪತಿ ಖಾಸಾ ದೋಸ್ತ್‌ಗಳಾಗಿಬಿಟ್ಟಿದ್ದರು. ಆದರೆ 25 ಕೋಟಿ ರೂ. ಲೋನ್ ಕೇಸ್ ಬೆಳಕಿಗೆ ಬಂದು ಇಬ್ಬರ ಸ್ನೇಹ ಹಳಸಿತ್ತು. ಬಳಿಕ 'ತಗಡು' ಎಂದು ದರ್ಶನ್ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಸಾಕಷ್ಟು ಸಂದರ್ಭಗಳಲ್ಲಿ ದರ್ಶನ್‌ಗೆ ಉಮಾಪತಿ ಟಾಂಗ್ ಕೊಡುತ್ತಾ ಬಂದಿದ್ದರು. ಇಬ್ಬರ ಮತ್ತಷ್ಟು ದೂರ ಆಗಿಬಿಟ್ಟರು.
'ಡೆವಿಲ್' ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಬೇಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಲಿದೆ. ಈ ಹಿಂದೆ ಪ್ರೇಮ್‌ಗೆ ಎರಡು ಕೊಂಬು ಇದ್ಯಾ? ಎಂದು ದರ್ಶನ್ ಹೇಳಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಇನ್ನು ಮುಂದೆ ನಾನು ದರ್ಶನ್ ಜೊತೆ ಸಿನಿಮಾ ಮಾಡಲ್ಲ ಎಂದು ಪ್ರೇಮ್ ಹೇಳಿದ್ದರು. ಆದರೆ ಅವರಿಬ್ಬರ ನಡುವೆ ಸಂಧಾನ ಮಾಡಿಸಿ ರಕ್ಷಿತಾ ಮುಂದೆ ಸಿನಿಮಾ ಸಿನಿಮಾ ಘೋಷಣೆ ಆಗುವಂತೆ ಮಾಡಿದ್ದರು. 'ಡೆವಿಲ್' ಚಿತ್ರಕ್ಕೂ ರಕ್ಷಿತಾ ಬೆಂಬಲ ಸೂಚಿಸುತ್ತಿದ್ದಾರೆ.


Click it and Unblock the Notifications











