ಸಾಂಪ್ರದಾಯಿಕ ಉಡುಗೆಯಲ್ಲಿ ರಕ್ಷಿತಾ ಮತ್ತು ಟೀಮ್

Recommended Video

ಸಾಂಪ್ರದಾಯಿಕ ಉಡುಗೆಯಲ್ಲಿ ರಕ್ಷಿತಾ ಮತ್ತು ಟೀಮ್ | FILMIBEAT KANNADA

ನಟಿ ರಕ್ಷಿತಾ ಪ್ರೇಮ್, ನಟ ವಿಜಯ ರಾಘವೇಂದ್ರ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಮೂವರು ಈಗ ತಮ್ಮ ಉಡುಗೆಯ ಮೂಲಕ ಗಮನ ಸೆಳೆದಿದ್ದಾರೆ.

ಕೆಂಪು ಬಣ್ಣದ ಸೀರೆ ಉಟ್ಟು ರಕ್ಷಿತಾ ಮಿಂಚಿದ್ದಾರೆ. ಪಂಚೆ, ಕೋಟು, ತಲೆಗೆ ಪೇಟ ಹಾಕಿಕೊಂಡು ಅರ್ಜುನ್ ಜನ್ಯ ಹಾಗೂ ವಿಜಯ್ ರಾಘವೇಂದ್ರ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಮೂವರು ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ.

ಅಂದಹಾಗೆ, ಇವರ ಈ ಉಡುಗೆಯ ಹಿಂದೆಯೂ ಒಂದು ಕಾರಣ ಇದೆ. ಈ ರೀತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮೂವರು ಕಾಣಿಸಿಕೊಂಡಿರುವುದು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಪ್ರೊಮೋಗಾಗಿ.

rakshita prem shared dance karnataka dance show promo shoot photo

ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಮತ್ತೆ ಶುರು ಆಗುತ್ತಿದೆ. ಈ ಹೊಸ ಸೀಸನ್ ಪ್ರೊಮೋ ಶೂಟ್ ಈಗಾಗಲೇ ನಡೆದಿದೆ. ಈ ಫೋಟೋವನ್ನು ನಟಿ ರಕ್ಷಿತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಯಾವಾಗ ಶುರು, ಅದರ ಆಡಿಷನ್ ವಿವರಗಳು ಸದ್ಯದಲ್ಲಿಯೇ ತಿಳಿಯಲಿದೆ.

More from Filmibeat

English summary
Actress Rakshita Prem shared Dance Karnataka Dance' show promo shoot photo. Rakshita Prem, Arjun Janya and Vijaya Raghavendra are the judges of this show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X