'ದಿ ವಿಲನ್' ಬಗ್ಗೆ ಉರ್ಕೊಂಡು ಗೇಲಿ ಮಾಡಿದವರಿಗೆ ರಕ್ಷಿತಾ ಪ್ರೇಮ್ ಬಹಿರಂಗ ಪತ್ರ.!

ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೆರೆಹಂಚಿಕೊಂಡಿರುವ ಪ್ರೇಮ್ ನಿರ್ದೇಶನದ 'ದಿ ವಿಲನ್' ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟೀಕೆ ಮಾಡಲಾಗುತ್ತಿದೆ. 'ದಿ ವಿಲನ್' ಚಿತ್ರದ ನಿಜವಾದ ವಿಲನ್ ಪ್ರೇಮ್ ಅಂತ ಜನ ಆಡಿಕೊಳ್ಳುತ್ತಿದ್ದಾರೆ. ಪ್ರೇಮ್ ಗೆ ಛೀಮಾರಿ ಹಾಕುತ್ತಿದ್ದಾರೆ. ಅಂಥವರಿಗೆಲ್ಲಾ ಪ್ರೇಮ್ ಪತ್ನಿ ಹಾಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಓದಿರಿ - ಸಂಪಾದಕ

#ಕನ್ನಡದ 'ವಿಲನ್' ಸಿನಿಮಾ ಬಗ್ಗೆ, ಪ್ರೇಮ್ ಬಗ್ಗೆ, ಉರ್ಕಂಡ್, ಸಿಲ್ಲಿಯಾಗಿ, ಪ್ರಶ್ನೆ, ಗೇಲಿ, ಟೀಕೆ, ವಿಮರ್ಶೆ ಮಾಡ್ಕಂಡ್ ಉರಿಯುವ ಗೆಳೆಯರಿಗೊಂದು ಅರಿಯುವ ಪತ್ರ...

# ಚಿತ್ರರಂಗದಲ್ಲಿ ಸಿನಿಮಾ ಮಾಡಲು ನಿರ್ದೇಶಕರುಗಳಿಗೆ, ಅದ್ಭುತ ತಂತ್ರಜ್ಞರು, ಕತೆಗಾರರು, ಬೆನ್ನೆಲುಬಾಗಿ ಜೊತೆಯಲ್ಲಿ ಇರುತ್ತಿದ್ದರು, ಸಾಥ್ ಕೊಡುತ್ತಿದ್ದರು.

Rakshita Prem writes open letter to all those who criticized The Villain movie

# ಪುಟ್ಟಣ್ಣ ಕಣಗಾಲ್ ರವರಿಗೆ ತರಾಸು, ತ್ರಿವೇಣಿ, ಎಂ.ಕೆ.ಇಂದಿರಾ, ಭಾರತೀಸುತ, ವಾಣಿ, ರಾವ್ ಬಹಾದ್ದೂರ್ ರವರ ಕನ್ನಡ, ಕಾದಂಬರಿಯ ಕತೆಗಳಿದ್ದವು.

# ರವಿಚಂದ್ರನ್ ರವರಿಗೆ ಶ್ರೀಮಂತಿಕೆ, ತಂದೆ ವೀರಾಸ್ವಾಮಿ ಜೊತೆಗೆ ಸರಸ್ವತಿ ಪುತ್ರರಾದ ನಾದ ಬ್ರಹ್ಮ ಹಂಸಲೇಖ ರಿದ್ದರು

# ಉಪೇಂದ್ರ ರಿಗೆ ಕತೆಗಾರ, ಬರಹಗಾರ, ಡಾ.ಅಗ್ನಿದಿವ್ಯ ರಿದ್ದರು.

# ಸುನೀಲ್ ಕುಮಾರ್ ದೇಸಾಯಿ ಯವರಿಗೆ ಕತೆಗಾರ, ಬರಹಗಾರ, ರಂಗಣ್ಣಿ ಯವರಿದ್ದರು.

# ತೆಲುಗಿನ ರಾಜಮೌಳಿಗೆ, ಕತೆಗಾರ, ತಂದೆ ವಿಜಯೇಂದ್ರ ಪ್ರಸಾದ್ ಸಂಗೀತಗಾರ ಎಂ.ಎಂ.ಕೀರವಾಣಿ ಯವರಿದ್ದರು.

# ಹಿಂದಿಯ ರಾಜಕುಮಾರ್ ಹಿರಾನಿ ಗೆ ಕತೆಗಾರ ಚೇತನ್ ಭಗತ್ ಇದ್ದರು.

# ಇವರೆಲ್ಲರೂ ಉತ್ತಮ ಚಿತ್ರಗಳನ್ನು ತೆಗೆದು ಒಳ್ಳೆಯ ನಿರ್ದೇಶಕರಾದ್ರು, ಎಲ್ಲರೂ, ಎಲ್ಲವೂ ಇದ್ದು.

# ಯಾರೂ ಇಲ್ಲದೇ, ಯಾವುದೂ ಇಲ್ಲದೇ ಚಿತ್ರರಂಗದ ಹಿನ್ನಲೆಯಿಲ್ಲದೆ ಗಾಡ್ ಫಾದರ್ ಇಲ್ಲದೇ, ಟೆಂಟ್ ನಲ್ಲಿ ಸಿನಿಮಾ ನೋಡಿ ಕನಸು ಕಂಡು ಹಳ್ಳಿಯ ಸಾಮಾನ್ಯ ಹುಡುಗನೊಬ್ಬ, ಕೆಂಪು ಬಸ್ ಹತ್ತಿ ಬೆಂಗಳೂರಿಗೆ ಬಂದು, ಸಿನಿಮಾ ಇಂಡಸ್ಟ್ರೀಲಿ ನೊಂದು, ಬೆಂದು, ನಿರ್ದೇಶಕನಾಗಿದ್ದು ಕೂಡಾ ಪ್ರೇಮ್ ನ ಪ್ರತಿಭೆ, ಸಾಧನೆ.

# ಪಕ್ಕದ ಉಡುಪಿ, ಮಂಗಳೂರು, ಕೋಲಾರ, ಬೆಳಗಾವಿನಲ್ಲೇ ಕನ್ನಡ ಸಿನಿಮಾ ನೋಡದ ಚಿಕ್ಕ ಕನ್ನಡ ಫಿಲಂ ಇಂಡಸ್ಟ್ರಿಯನ್ನು ದೊಡ್ಡ ಮಾರುಕಟ್ಟೆ ಯನ್ನಾಗಿಸಬೇಕೆಂದು.

# ಕರಿಯ, ಜೋಗಿ, ಯಂತಹ ಟ್ರೆಂಡ್ ಸೆಟ್, ಬ್ಲಾಕ್ ಬಸ್ಟರ್ ಸಿನಿಮಾ ಮಾಡಿ ತೆಲುಗು, ತಮಿಳು ಇಂಡಸ್ಟ್ರಿ ಯವ್ರು ತಿರುಗಿ ನೋಡುವಂತೆ ಮಾಡಿ, ಟಾಕೀಸ್ ಗಳ ಮುಂದೆ ಜಾತ್ರೆ ಮಾಡಿ, ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿದು ಕುಪ್ಪಳಿಸಿ ರಂಜಿಸಿದ್ದು, ದೇಶ, ವಿದೇಶ ಗಳಲ್ಲಿ ರಿಲೀಸ್ ಮಾಡಿದ್ದು ಇದೇ ಪ್ರೇಮ್ ಅಲ್ಲವಾ.

# ಟಿವಿ ರೈಟ್ಸ್ ಗೆ, ಹೊಟ್ಟೆ ಪಾಡಿಗೆ ಸಿನಿಮಾ ಮಾಡದೇ ಹಗಲು ರಾತ್ರಿ ಸಿನಿಮಾ ಪ್ರೀತ್ಸೋ ಪ್ಯಾಶನ್ ಡೈರೆಕ್ಟರ್ ನೀವು ಅಂತ ಹೇಳಿದ್ದು ಸುದೀಪ್ ಅವರು ಇದೇ ಪ್ರೇಮ್ ಗೆ ತಾನೇ.

# ಸಿನಿಮಾದಲ್ಲಿ ಏನೂ ಮಾಡಲಾಗದ ಕೆಲವು ನಿಷ್ಪ್ರಯೋಜಕರು ನಿಮ್ಮನ್ನ ಕಂಡ್ರೆ ಸದಾ ಉರಿದುಕೊಳ್ಳುವುದು ಸಾಮಾನ್ಯ.

# ಫುಟ್ ಪಾತ್ ನಲ್ಲಿ 10 ರೂ ತರಕಾರಿ ಮಾರೋರು ಕೂಡ ಬಾಡಿದ ತರಕಾರಿಗೆ ನೀರು ಚಿಮುಕ್ಸಿ ಫ್ರೆಶ್ ಅಂತ ಮಾರಾಟ ಮಾಡ್ತಾರೆ ಅದು ಕೂಡಾ ವ್ಯಾಪಾರ.

# ಪ್ರೇಮ್ ಸಿನಿಮಾನ ಪಬ್ಲಿಸಿಟಿ ಮಾಡೋದು ಜನರಿಗೆ ತಲುಪಿಸೋ ಕಲೆ, ಅದು ಗಿಮಿಕ್ ಅಲ್ಲಾ ವ್ಯಾಪಾರೀಕರಣ ತಾನೇ.

# ಕತೆ ಇಟ್ಕಂಡು ಸಿನಿಮಾ ಮಾಡೋದಲ್ಲ, ಕಥೆಯಿಲ್ಲದೆ ಮೇಕಿಂಗ್ ನಿಂದಾ ಸಿನಿಮಾ ಮಾಡೋದು ಕಲೆ, ಪ್ರತಿಭೆ, ಪ್ರೇಮ್ ತಾಕತ್ತು,

# ಪ್ರೇಮ್ ಬಗ್ಗೆ, ವಿಲನ್, ಬಗ್ಗೆ, ಸಿಲ್ಲಿಯಾಗಿ ಮಾತಾಡೋ ಪ್ರತಿಭಾವಂತರು, ಪಂಡಿತರು, ಸಿನಿಮಾ ಮಾಡೋದ್ ಬೇಡಾ, ಒಂದು ಸಣ್ಣ ಟೆಲಿ ಫಿಲಂ ತೆಗೆದು ತೋರಿಸಲಿ ಅವಾಗ ಅವರ ಪ್ರತಿಭೆ ಯೋಗ್ಯತೆಗಳು ಜನಕ್ಕೆ ಗೊತ್ತಾಗುತ್ತೆ.

# ಹಳೆಯ ಪ್ರೇಮಲೋಕ, ಸಿನಿಮಾ, ಇತ್ತೀಚಿನ ಟಗರು, ಸಿನೆಮಾದಲ್ಲೂ ಕಥೆ ಇರಲಿಲ್ಲ, ಜನ ನೋಡಲಿಲ್ವಾ, 25 ವಾರ ಓಡಲಿಲ್ಲವಾ. ಕತೆಯಿಲ್ಲದೆ ಓಡಿರೋ ನೂರಾರು ಸಿನಿಮಾ ಉದಾಹರಣೆ ಇಲ್ವಾ.

# ಸಿನಿಮಾ ಪ್ರವರಗಳೇನೇ ಇರಲಿ,

# ಈಗಿನ "ವಿಲನ್" ಸಿನೆಮಾದಿಂದ, ಪ್ರೇಮ್ ಕನ್ನಡ ಸಿನಿಮಾವನ್ನ ಚಿತ್ರ ರಂಗವನ್ನ ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ,

# ಕನ್ನಡದ ಇಬ್ಬರು ದೊಡ್ಡ ಸ್ಟಾರ್ಸ್ ಗಳನ್ನು ಸೇರ್ಸಿ ಹೈ ಬಜೆಟ್, ಅದ್ದೂರಿ ಮೇಕಿಂಗ್ ಸಿನಿಮಾ ಮಾಡಿದ್ದೂ, ಬೇರೆ ಭಾಷೆ ಯವರು ತಿರುಗಿ ನೋಡುವಂತೆ ಮಾಡಿದ್ದೂ, ಪ್ರೇಮ್ ತಾಕತ್ತು, ಪ್ರತಿಭೆ ಅಲ್ಲದೆ ಮತ್ತಿನ್ನೇನು. ಗೆಳೆಯರೇ, ಹಾಗೂ ಪ್ರೇಕ್ಷಕರೇ,

# ಇಷ್ಟು ದಿನ ಕನ್ನಡ ಪ್ರೇಕ್ಷಕರು, ಜೊತೆಗೆ ನಾವು ಎನ್.ಟಿ.ಆರ್, ಮಹೇಶ್ ಬಾಬು, ವಿಜಯ್, ವಿಕ್ರಮ್ ರ ಬೇರೆ ಭಾಷೆಯ ಸಿನೆಮಾಗಳ, ಫೈಟ್, ಚೇಸ್ ಸಾಂಗ್, ಸೆಟ್, ಬಜೆಟ್, ಅದ್ದೂರಿ ಮೇಕಿಂಗ್ ಗಳನ್ನ ನೋಡಿ, ಇವುಗಳನ್ನ ನಮ್ಮ ಕನ್ನಡ ಸಿನೆಮಾಗಳಲ್ಲಿ ಯಾವಾಗ ನೋಡ್ತೀವೋ ಎಂದುಕೊಳ್ಳುತ್ತಿದ್ದೆವು.

# ಇವಾಗ ನಮ್ಮ ಕನ್ನಡ ಸಿನಿಮಾ ವಿಲನ್, ನಲ್ಲಿ ಅವೆಲ್ಲವುಗಳನ್ನ ನೋಡಿ ಬೇರೆ ಭಾಷೆ ಯವರಿಗೆ ಸೆಡ್ಡು ಹೊಡೆದಿದ್ದೇವೆ. ಇದು ಪ್ರೇಮ್ ಹಿರಿಮೆ ಯಲ್ಲವೇ.?

# ಇದೇ ಸಿನಿಮಾ ತೆಲಗು, ತಮಿಳುನಲ್ಲಿ ಮಾಡಿದ್ರೆ ಅವರು, ಮನವಾಡಲು ಕಾದ, ಚಾಲಾ ಭಾಗ ಛೇಸ್ಸ್ಯಾಡು, ನಮ್ಮ ಪಯ್ಯಾ ದಾನೇ, ನಲ್ಲ ಪನ್ನಿರಕ್ಕಾ, ಅಟ್ಲಾ, ಇಟ್ಟ್ಲ, ಅಪ್ಪಡಿ, ಇಪ್ಪಡಿ, ಅಂತ ಅವರ ಡೈರೆಕ್ಟರ್ ನ ಪ್ರೊಡ್ಯೂಸರ್ ನ ಕೊಂಡಾಡುತ್ತಿದ್ರು.

# ನಮ್ಮ ಹುಟ್ಟು ಗುಣಾನೇ ಅಂತದ್ದು ಅಲ್ವಾ ನಮ್ಮ ಹೆಂಡ್ತಿ ಎಷ್ಟೇ ಚನ್ನಾಗಿದ್ರು, ಬೇರೆಯವರ ಹೆಂಡ್ತಿ, ಕಪ್ಪಗೆ, ಸುಮಾರಾಗಿ ಇದ್ರೂ ಅವ್ಳನ್ನೇ ನೋಡೋದು, ಹೊಗಳೋದು.

# ಪ್ರೇಮ್ ನ ವಿಲನ್, ನಲ್ಲಿ ಇರೋ ಸಂಗೀತ, ತಾಂತ್ರಿಕತೆ, ಸಂಭಾಷಣೆ, ದ್ರಶ್ಯಗಳು, ಚೇಸ್, ಆಕ್ಷನ್, ಇಬ್ರು ಸ್ಟಾರ್ ನಟರ ಅದ್ಭುತವಾದ ಅಭಿನಯ, ಎಲ್ಲವೂ ವಿಜೃಂಭಿಸಿವೆ ಹಾಗೂ ತೆಲುಗಿನ ರಾಜಮೌಳಿಯ ಸಿನಿಮಾಗಳ ಸಮನಾಗಿ ನಿಲ್ಲುತ್ತವೆ.


# ಪ್ರಿಯ ಪ್ರೇಮ್, ನಿಮ್ಮ ವಿಲನ್, ಕನ್ನಡ ಸಿನಿಮಾವನ್ನ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ.

# you are a one man show, and

# you are a show man in kannada cinema

# ಕೈಲಾಗದವರಿಗೆ, ದಿನಾ ಬೇರೆಯವರನ್ನ ಕಾಲೆಳೆಯೋದು, ಗೇಲಿ, ಟೀಕೆ, ಮಾಡುವುದೇ ಕುಲಕಸಬು,

# ನಿಮಗೆ ನಿರಂತರವಾಗಿ ಸಿನಿಮಾ ಮಾಡುವುದೇ ಕಸಬು.

# ಕನ್ನಡದ ಪ್ರೇಕ್ಷಕ ಸದಾ ನಿಮ್ಮೊಂದಿಗೆ ಇರುತ್ತಾನೆ.

# all the best prem'stha

- ರಕ್ಷಿತಾ ಪ್ರೇಮ್, ನಿರ್ಮಾಪಕಿ

More from Filmibeat

English summary
Kannada Actress, Producer Rakshita Prem writes open letter to all those who criticized The Villain movie and Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X