For Quick Alerts
  ALLOW NOTIFICATIONS  
  For Daily Alerts

  'ಏಕ್ ಲವ್ ಯಾ' ಪ್ರೇಮ್ ದುಡ್ಡಲ್ಲಿ ಮಾಡಿದ್ದಲ್ಲ: ನಿರ್ಮಾಪಕಿ ರಕ್ಷಿತಾ Exclusive ಮಾತು

  |

  ರಕ್ಷಿತ್ ಪ್ರೇಮ್ ತಮ್ಮ ಸಹೋದರ ರಾಣಾರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಿಸುತ್ತಿದ್ದಾರೆ. ತಮ್ಮ ರಾಣಾಗಾಗಿ ರಕ್ಷಿತಾ ಪ್ರೇಮ್ ಮೊದಲ ಸಿನಿಮಾ 'ಏಕ್ ಲವ್ ಯಾ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರೇಮ್ ನಿರ್ದೇಶಕನದಲ್ಲಿ ರಚಿತಾ ರಾಮ್, ರಾಣಾ ಹಾಗೂ ರೀಷ್ಮಾ ನಾಣಯ್ಯ ನಟನೆಯ ಈ ಸಿನಿಮಾ ಇದೇ ಫೆಬ್ರವರಿ 24ಕ್ಕೆ ಬಿಡುಗಡೆಯಾಗುತ್ತಿದೆ. ಈ ವೇಳೆ ತಮ್ಮ ಮೊದಲ ಸಿನಿಮಾ ಬಗ್ಗೆನೂ ನೆನಪಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಸಿನಿಮಾ ಮಾಡಬೇಕು ಅಂತಿದ್ದಾರೆ. ಹೊಸ ಆಲೋಚನೆಗಳನ್ನು ಕನಸುಗಳನ್ನು ಇಟ್ಟುಕೊಂಡಿದ್ದಾರೆ.

  'ಏಕ್ ಲವ್ ಯಾ' ಬಳಿಕ ಕೇವಲ ತಮ್ಮನಿಗಾಗಿ ಮಾತ್ರ ಸಿನಿಮಾ ಮಾಡುವುದಿಲ್ಲ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಮೂಲಕ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕಲಿದ್ದಾರೆ. ತಮ್ಮ ರಾಣಾ ನಟಿಸಿದ ಮೊದಲ ಸಿನಿಮಾ ತೆರೆಕಾಣುತ್ತಿರುವ ಈ ಸಂದರ್ಭದಲ್ಲಿ ರಕ್ಷಿತಾ ಪ್ರೇಮ್ ತಮ್ಮ ಕನಸುಗಳನ್ನು ಫಿಲ್ಮಿ ಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

  ರಾಣಾಗಾಗೇ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ

  ತಮ್ಮ ರಾಣಾನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಆರಂಭ ಮಾಡಲಾಗಿತ್ತು. ಮೂರು ವರ್ಷದ ಹಿಂದೆ 'ಏಕ್ ಲವ್ ಯಾ' ಸಿನಿಮಾ ಶುರುವಾಗಿದ್ದು, ಈ ಬಿಡುಗಡೆ ಹಂತದಲ್ಲಿದೆ. ಈ ಬ್ಯಾನರ್ ಬಗ್ಗೆ, ಸಿನಿಮಾ ಸೆಟ್ಟೇರಿದ ದಿನವನ್ನು ರಕ್ಷಿತಾ ನೆನಪಿಸಿಕೊಂಡಿದ್ದಾರೆ. "ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಮಾಡಿದ್ದೇ ನಿನಗೋಸ್ಕರ. ಅಮ್ಮನಿಗೆ ಒಂದು ಆಸೆಯಿತ್ತು. ತಮ್ಮನಿಗೆ ಸಿನಿಮಾ ಮಾಡುವುದಾದರೆ, ರಕ್ಷಿತಾ ಹೆಸರಲ್ಲೇ ಆಗಲಿ ಅಂತ. ಅದಕ್ಕೆ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಮಾಡಿದ್ದು. ಇಲ್ಲ ಅಂದರೆ, ಎರಡು ಪ್ರೊಡಕ್ಷನ್ ಕಂಪನಿ ಇತ್ತು. ಅದಕ್ಕೆ ಸಿನಿಮಾ ನಿರ್ಮಾಣ ಮಾಡುತ್ತಿದ್ದೆ. ಬ್ಯಾನರ್ ಓಪನ್ ಮಾಡಿದಾಗ, 'ಏಕ್ ಲವ್ ಯಾ' ಚೆನ್ನಾಗಿ ಆದರೆ ಸಾಕಿತ್ತು. ಈಗ ಒಳ್ಳೆ ಸಿನಿಮಾ ಮಾಡೋಣ ಅಂತಿದೀನಿ." ಎನ್ನುತ್ತಾರೆ ನಿರ್ಮಾಪಕಿ ರಕ್ಷಿತಾ ಪ್ರೇಮ್

  ಇದು ಪ್ರೇಮ್ ಹಣದಲ್ಲಿ ಸಿನಿಮಾ ಮಾಡಿದ್ದಲ್ಲ

  ಇದು ಪ್ರೇಮ್ ಹಣದಲ್ಲಿ ಸಿನಿಮಾ ಮಾಡಿದ್ದಲ್ಲ

  "ಎಲ್ಲೋ ನೋಡಿದ್ದೆ. ಅದೆಲ್ಲಾ ಸುಳ್ಳು. ಎಲ್ಲಾ ಪ್ರೇಮ್ ದುಡ್ಡಲ್ಲಿ ಸಿನಿಮಾ ಮಾಡಿಲ್ಲ. ರಕ್ಷಿತಾ ನಿರ್ಮಾಣ ಮಾಡ್ತಿದ್ದಾಳೆ ಅಂದ್ರೆ, ರಕ್ಷಿತಾ ಪ್ರಡ್ಯೂಸ್ ಮಾಡ್ತಿರೋದು ಅಂತ ಅರ್ಥ. ಈ ಸಿನಿಮಾಗೆ ಪ್ರೇಮ್ ಬರೀ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರೇಮ್ ಒಬ್ಬ ಓಳ್ಳೆಯ ನಿರ್ದೇಶಕ. ಈ ಸಿನಿಮಾ ನೋಡಿದಾಗ ಖಂಡಿತಾ ಖುಷಿ ಆಗುತ್ತೆ. ಅದಕ್ಕೆ ಬಜೆಟ್ ಬಗ್ಗೆ ಏನೂ ಯೋಚನೆ ಮಾಡುವುದಿಲ್ಲ. ಮಾರ್ನಿಂಗ್ ಶೋ ನೋಡಿದಾಗ ಟೆನ್ಷನ್‌ನಲ್ಲಿ ಇರುತ್ತೇನೆ ಅನಿಸುತ್ತೆ. ಕಣ್ಣಲ್ಲಿ ನೀರು ಬರ್ತಿರುತ್ತೆ ಅನಿಸುತ್ತೆ. ಯಾಕಂದರೆ, ಮೂರು ವರ್ಷ ಈ ಸಿನಿಮಾಗೆ ಕಷ್ಟ ಪಟ್ಟಿದ್ದೇವೆ." ಎಂದು ಸಿನಿಮಾ ನಿರ್ಮಾಣದ ಬಗ್ಗೆ ರಕ್ಷಿತಾ ಹೇಳಿದ್ದಾರೆ.

  ರಾಜ್ ಬಿ ಶೆಟ್ಟಿ ಬಳಿ ಒಳ್ಳೆ ಕಥೆ ಕೇಳಿದ ರಕ್ಷಿತಾ

  ರಾಜ್ ಬಿ ಶೆಟ್ಟಿ ಬಳಿ ಒಳ್ಳೆ ಕಥೆ ಕೇಳಿದ ರಕ್ಷಿತಾ

  "ನಾನೇ ರಾಜ್‌ಗೆ ಫೋನ್ ಮಾಡಿದ್ದೆ. ಗರುಡ ಗಮನ ಸಿನಿಮಾ ನೋಡಿದ ಬಳಿಕ ಏನಾದರೂ ಒಳ್ಳೆ ಕಥೆ ಇದ್ದರೆ ಹೇಳಿ ರಾಜ್ ಎಂದಿದ್ದೇನೆ. ನನಗೆ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಇಷ್ಟ. ಇತ್ತೀಚೆಗೆ ಬಂದಿರುವ ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಧನಂಜಯ್ ಹಾಗೂ ರಾಜ್ ಬಿ ಶೆಟ್ಟಿ ಸಿನಿಮಾಗಳನ್ನು ಇಷ್ಟ ಪಡುತ್ತೇನೆ. ಈ ತರ ತುಂಬಾನೇ ಸಿನಿಮಾ ಇಷ್ಟ ಆಗಿದೆ. ಅವರ ಬಳಿ ಒಳ್ಳೆಯ ಕಥೆ ಇದ್ದರೆ, ಸಿನಿಮಾ ನಿರ್ಮಾಣ ಮಾಡುತ್ತೇನೆ." ಎಂದು ರಾಜ್ ಬಿ ಶೆಟ್ಟಿಗೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

  'ಅಪ್ಪು' ಸಿನಿಮಾ ನೆನಪಾಗುತ್ತೆ

  'ಅಪ್ಪು' ಸಿನಿಮಾ ನೆನಪಾಗುತ್ತೆ

  "ನನಗೆ ಅಪ್ಪು ಸಿನಿಮಾ ನೋಡಿದ ನೆನಪು ಬರುತ್ತೆ. ಮೊದಲನೇ ದಿನ ಗಾಂಧಿಕ್ಲಾಸ್‌ನಲ್ಲಿ ಕೂತಿರುವವರು ಹಣದ ಪೇಪರ್ ಎಲ್ಲವನ್ನೂ ಎರಚುತ್ತಾರೆ. ಅಪ್ಪುಗಿಂತ ಮುನ್ನವೇ ಪುನೀತ್ ಸ್ಟಾರ್ ಆಗಿದ್ದರು. ನನಗೆ ಹೊಸಬಳು ಅನ್ನುವ ಫೀಲಿಂಗ್ ಇತ್ತು. ಆ ಸಿನಿಮಾದಲ್ಲಿ ನಟಿಸಿದವರೆಲ್ಲರೂ ಸ್ಟಾರ್. ನಿನ್ನ ಸಿನಿಮಾ ಬಿಡುಗಡೆ ದಿನ ನನಗೆ ಅಪ್ಪು ಸಿನಿಮಾ ನೆನಪು ಬರುತ್ತೆ ಅನಿಸುತ್ತೆ. ಇದೇ ಫಸ್ಟ್ ಟೈಮ್ ಅವನ ಕರಿಯರ್‌ನಲ್ಲಿ ಪ್ರೇಮ್ ಟೆಕ್ನಿಕಲ್ ಟೀಮ್‌ಗೆ ಸಿನಿಮಾ ತೋರಿಸಿರೋದು. ಸಿನಿಮಾ ಎಲ್ಲರಿಗೂ ತುಂಬಾನೇ ಇಷ್ಟ ಆಗಿತ್ತು. ಅದನ್ನು ಕೇಳಿದಾಗ ತುಂಬಾ ಖುಷಿ ಆಯ್ತು. ನಮ್ ಟೀಮ್‌ನಲ್ಲಿ ಎಲ್ಲರೂ ತಪ್ಪಾಗಿದ್ರೆ ನೇರವಾಗಿ ಹೇಳಿದ್ದಾರೆ." ಎನ್ನುತ್ತಾ ಅಪ್ಪು ಸಿನಿಮಾ ನೆನಪಿಸಿಕೊಂಡಿದ್ದಾರೆ ರಕ್ಷಿತಾ ಪ್ರೇಮ್.

  English summary
  Rakshita produced Ek love ya movie with her own money and asked Raj B Shetty for new story. After watching Garuda Gamana Vrishabha Vahana movie she called Raj B Shetty for new scripts.
  Thursday, February 24, 2022, 9:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X